More

    ಆಟ ಆಡುತ್ತಲೇ ಪ್ರಾಣ ಕಳೆದುಕೊಂಡ ಬಾಲಕ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಡಿದ್ದೇ ಮುಳುವಾಯ್ತೇ?

    ಹಾಸನ: ಮೋಜಿಗೆಂದು ನೀರಿಗಿಳಿಯುವ, ರಜೆ ಎಂದು ಮೈಮರೆತು ಆಡುವ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿದ್ದು, ಅಂಥ ಸಾವಿನ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಎಂಬಂತೆ ಮತ್ತೊಂದು ಪ್ರಕರಣ ಜರುಗಿದೆ.

    ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತೆಂಡೆಕೆರೆ ಗ್ರಾಮದ ಲೋಕೇಶ್​-ನೇತ್ರಾವತಿ ದಂಪತಿಯ ಪುತ್ರ ಮನೋಜ್ ಎಂಬ ಎಂಟರ ವಯಸ್ಸಿನ ಬಾಲಕ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡಿದ್ದಾನೆ. ನಾಲ್ಕನೆಯ ತರಗತಿಯ ವಿದ್ಯಾರ್ಥಿ ಆಗಿದ್ದ ಈತ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೋಕಾಲಿಯಲ್ಲಿ ಆಡಿದ್ದಾನೆ. ಈ ಸಂದರ್ಭದಲ್ಲಿ ಜೋಕಾಲಿ ಹಗ್ಗ ಉರುಳಾಗಿ ಈತ ಸಿಲುಕಿಕೊಂಡಿದ್ದಾನೆ.

    ಇದನ್ನೂ ಓದಿ: ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..! 

    ಬಾಲಕ ಆಟ ಆಡುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಆತ ಸಹಾಯಕ್ಕೆ ಕೂಗಿಕೊಂಡರೂ ಯಾರೂ ಬರದ್ದರಿಂದ ಕೊನೆಗೆ ಉರುಳಲ್ಲಿ ಸಿಲುಕಿ ಒದ್ದಾಡಿ ಸಾವಿಗೀಡಾಗಿದ್ದಾನೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ಜಯಚಾಮರಾಜೇಂದ್ರ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಲಸಿಕೆ ಹಾಕಿಸಿಕೊಂಡಿರದಿದ್ದರೆ ಸಾರ್ವಜನಿಕರಿಗಿಲ್ಲ ಈ ಸರ್ಕಾರಿ ಕಚೇರಿಗೆ ಪ್ರವೇಶ; ಸರ್ಕಾರದ ಸೂಚನೆಯನ್ನೇ ಧಿಕ್ಕರಿಸಿದ್ರಾ ಜಿಲ್ಲಾಧಿಕಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts