More

    ಮಾಲ್, ಹೋಟೆಲ್ ದೇಗುಲ ಎಂಟ್ರಿ ಟೈಟ್: ವೃದ್ಧರು, ಮಕ್ಕಳು, ಗರ್ಭಿಣಿಯರಿಗಿಲ್ಲ ಪ್ರವೇಶ

    ನವದೆಹಲಿ: ಅನ್​ಲಾಕ್-1 ಅಡಿ ಜೂ.8ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳ್ಳಲಿರುವ ಧಾರ್ವಿುಕ ಸ್ಥಳ, ರೆಸ್ಟೋರೆಂಟ್, ಹಾಗೂ ಮಾಲ್​ಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕರೊನಾ ಪಸರಿಸುವಿಕೆ ತಡೆಗಟ್ಟುವುದಕ್ಕಾಗಿ ದೈಹಿಕ ಅಂತರ, ಮಾಸ್ಕ್ ಮತ್ತು ಗ್ಲೌಸ್ ಬಳಕೆ, ಶುಚಿತ್ವ ಕಾಪಾಡುವುದು ಸೇರಿದಂತೆ ಕೆಲ ಸಾಮಾನ್ಯ ನಿಯಮಗಳು ಎಲ್ಲ ಕಡೆಯೂ ಕಡ್ಡಾಯವಾಗಿ ಅನ್ವಯವಾಗುತ್ತವೆ. ಎಲ್ಲೂ ಜನರು ಗುಂಪು ಸೇರುವಂತಿಲ್ಲ ಹಾಗೂ ರೋಗಲಕ್ಷಣ ಹೊಂದಿರುವವರು ಕೆಲಸ ನಿರ್ವಹಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದ್ದು, 65 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, 10 ವರ್ಷದೊಳಗಿನವರು ಅನಿವಾರ್ಯದ ಹೊರತಾಗಿ ಮನೆಯಲ್ಲೇ ಇರಬೇಕು ಎಂದು ಹೇಳಲಾಗಿದೆ.

    ಮಾಲ್​ಗಳಿಗೆ ನಿಯಮಗಳು: ಮಾಲ್​ಗಳ ಪ್ರವೇಶ ದ್ವಾರದ ಬಳಿ ಹ್ಯಾಂಡ್ ಸ್ಯಾನಿಟೈಸರ್ ಕೊಡಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಮಾಲ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ನಿರ್ವಹಿಸುವುದಕ್ಕೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಬೇಕು 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಮತ್ತು ಅನಾರೋಗ್ಯದಿಂದಿರುವವರಿಗೆ ಬಾರದಿರುವಂತೆ ಸೂಚನೆ ಮಾಲ್​ನೊಳಗೆ 24-30 ಡಿಗ್ರಿ ಸೆಲ್ಸಿಯಸ್​ನಲ್ಲಿ ಎಸಿ ಬಳಸಬೇಕು, ಹ್ಯುಮಿಡಿಟಿ 40-70% ಮೀರುವಂತಿಲ್ಲ. ಗಾಳಿಯಾಡಲು ಎಲ್ಲ ವ್ಯವಸ್ಥೆ ಮಾಡಬೇಕು ಮಾಲ್​ನ ಒಳಗೆ ಹೆಚ್ಚಿನ ಜನ ಸೇರುವಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವಂತಿಲ್ಲ ಬಾಗಿಲು ಹಿಡಿಕೆ, ಎಲಿವೇಟರ್ ಬಟನ್, ಬೆಂಚು ಸೇರಿದಂತೆ ಎಲ್ಲ ವಸ್ತುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು.

    ಇದನ್ನೂ ಓದಿ   ಸಾಂಕ್ರಾಮಿಕ ರೋಗಗಳ ಭೀತಿ

    ರೆಸ್ಟೋರೆಂಟ್​ಗೇನು?

    ಪ್ರವೇಶಿಸುವ ಮುನ್ನ ಸ್ಕ್ರೀನಿಂಗ್ ತಪಾಸಣೆ, ಹ್ಯಾಂಡ್ ಸ್ಯಾನಿಟೈಸ್ ಮಾಡಿಕೊಳ್ಳುವುದು ಕಡ್ಡಾಯ ಶೇ.50ಕ್ಕಿಂತ ಹೆಚ್ಚು ಆಸನಗಳಲ್ಲಿ ಗ್ರಾಹಕರನ್ನು ಕೂರಿಸುವಂತಿಲ್ಲ ರೋಗಲಕ್ಷಣ ರಹಿತ ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು ರೆಸ್ಟೋರೆಂಟ್ ಒಳಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲೂ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ಆಹಾರ ಹೋಮ್ ಡೆಲೆವರಿ ನೀಡುವವರು ಗ್ರಾಹಕರ ಕೈಗೆ ಪೊಟ್ಟಣಗಳನ್ನು ನೀಡದೇ ಮನೆ ಬಾಗಿಲಿನಲ್ಲಿ ಇಟ್ಟು ಬರಬೇಕು. ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ಗಳು ಹಾಗೂ ಸಲಹೆ ಸೂಚನೆಗಳನ್ನು ಬಿತ್ತರಿಸುತ್ತಿರಬೇಕು ಗರ್ಭಿಣಿಯರು, ವೃದ್ಧರು, ಇತರ ಖಾಯಿಲೆಯಿಂದ ಬಳಲುತ್ತಿರುವ ಸಿಬ್ಬಂದಿ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಗ್ರಾಹಕರ ಜತೆ ಸಂಪರ್ಕಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕು. ವಾಲೆಟ್ ರ್ಪಾಂಗ್ ಅಥವಾ ಸಾಮಾನ್ಯ ರ್ಪಾಂಗ್ ವ್ಯವಸ್ಥೆ ನಿರ್ವಹಿಸುವವರು ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ ಸಿಬ್ಬಂದಿ ಹಾಗೂ ಸರಕುಗಳನ್ನು ತರುವವರ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಇರಬೇಕು ಹೆಚ್ಚು ಜನ ಸರತಿ ನಿಂತಾಗ ಪರಸ್ಪರರ ಮಧ್ಯೆ 6 ಅಡಿ ಅಂತರವಿರುವಂತೆ ಬಾಕ್ಸ್​ಗಳನ್ನು ಹಾಕಿರಬೇಕು. ಲಿಫ್ಟ್​ಗಳಲ್ಲಿ ಹೆಚ್ಚು ಜನರು ಪ್ರಯಾಣಿಸುವಂತಿಲ್ಲ. ಲಿಫ್ಟ್ ಆಪರೇಟರ್ ನೇಮಿಸುವುದು ಉತ್ತಮ. ರೆಸ್ಟೋರೆಂಟ್​ಗಳಲ್ಲಿನ ಹವಾ ನಿಯಂತ್ರಕಗಳು 24 ರಿಂದ 30 ಡಿಗ್ರಿ ಸೆಲ್ಸಿಯಸ್ ಮಧ್ಯದಲ್ಲೇ ಕಾರ್ಯನಿರ್ವಹಿಸಬೇಕು. ನೀರು ಕುಡಿಯುವ ಮತ್ತು ಕೈತೊಳೆಯುವ ಸ್ಥಳಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು. ರೆಸ್ಟೋರೆಂಟ್​ನಲ್ಲಿ ಬಳಸಿದ ಮಾಸ್ಕ್​ಗಳು, ಟಿಶ್ಯೂ ಪೇಪರ್​ಗಳು ಸೇರಿದಂತೆ ಇತರ ವಸ್ತುಗಳನ್ನು ಸೂಕ್ತ ರೀತಿ ವಿಲೇವಾರಿ ಮಾಡಬೇಕು. ಡಿಜಿಟಲ್ ರೂಪದ ಪಾವತಿಗೆ ಹೆಚ್ಚು ಪ್ರೋತ್ಸಾಹಿಸಬೇಕು ಪ್ರತಿ ಗ್ರಾಹಕರು ಎದ್ದು ಹೋದ ತಕ್ಷಣ ಆಯಾ ಟೇಬಲ್​ಗಳನ್ನು ಸ್ಚಚ್ಛಗೊಳಿಸಬೇಕು ರೆಸ್ಟೋರೆಂಟ್​ಗಳಲ್ಲಿನ ಗೇಮಿಂಗ್ ಆರ್ಕೆಡ್ ಹಾಗೂ ಮಕ್ಕಳ ಆಟದ ಸೌಲಭ್ಯಗಳನ್ನು ಸದ್ಯಕ್ಕೆ ಅನುಮತಿಸುವಂತಿಲ್ಲ ಸಿಬ್ಬಂದಿ ಅಥವಾ ಗ್ರಾಹಕರಲ್ಲಿ ಯಾರಾದರೂ ಒಬ್ಬರಿಗೆ ಕರೊನಾ ಸೋಂಕು ಪತ್ತೆಯಾದರೆ ಅಥವಾ ಶಂಕೆ ಬಂದರೆ ಅವರನ್ನು ತಕ್ಷಣ ಪ್ರತ್ಯೇಕ ಕೋಣೆಯಲ್ಲಿರಿಸಬೇಕು. ವೈದ್ಯರು ಅವರನ್ನು ತಪಾಸಣೆಗೆ ಒಳಪಡಿಸುವವರೆಗೂ ಯಾರೂ ಅವರ ಸಂಪರ್ಕಕ್ಕೆ ತೆರಳಬಾರದು. ಅವರಿಗೆ ಸೋಂಕು ದೃಢವಾದರೆ ಇಡೀ ಪ್ರದೇಶವನ್ನು ಶುಚಿಗೊಳಿಸಬೇಕು

    ಇದನ್ನೂ ಓದಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

    ಧಾರ್ವಿುಕ ಸ್ಥಳಗಳಿಗೇನು?

    ಪಾದರಕ್ಷೆಗಳನ್ನು ಜನರು ಅವರವರ

    ವಾಹನಗಳಲ್ಲೇ ಬಿಟ್ಟುಬರಬೇಕು

    ಮಂದಿರ ಅಥವಾ ಇನ್ನಿತರ ಸ್ಥಳಗಳ

    ಹೊರಗಿರುವ ಅಂಗಡಿಗಳಲ್ಲಿ ದೈಹಿಕ ಅಂತರ ಕಾಪಾಡುವುದು ಕಡ್ಡಾಯ

    ಜನರಿಗೆ ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ ಕಲ್ಪಿಸಬೇಕು

    ಕೈ ಮತ್ತು ಕಾಲುಗಳನ್ನು ಸಾಬೂನು ಉಪಯೋಗಿಸಿ ತೊಳೆದುಕೊಂಡ ನಂತರವೇ ಧಾರ್ವಿುಕ ಸ್ಥಳಗಳನ್ನು ಪ್ರವೇಶಿಸಬೇಕು, ಮೂರ್ತಿಗಳು, ಪವಿತ್ರ ಪುಸ್ತಕಗಳನ್ನು ಯಾರೂ ಮುಟ್ಟಕೂಡದು

    ಸ್ಪೀಕರ್ ಮೂಲಕ ಹಾಡುಗಳಿಗಷ್ಟೇ ಅವಕಾಶ, ಸಂಗೀತ ತಂಡಗಳಿಗೆ ಅನುಮತಿ ಇಲ್ಲ

    ಪ್ರಸಾದ ಹಾಗೂ ತೀರ್ಥ ವಿತರಣೆಗೆ ಅನುಮತಿ ಇಲ್ಲ

    ಅನ್ನದಾನ ಮಾಡಬಹುದು. ಆದರೆ ತಯಾರಿಕೆ ಹಾಗೂ ವಿತರಣೆ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ

    ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts