More

    ಐದು ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಳ್ಳಾರಿಯಲ್ಲಿ ಬಾಲಕಿ ಜತೆ ಮದುವೆ ಮಾಡಿದ ವರನ ತಂದೆ ವಿರುದ್ಧ ಎಫ್‌ಐಆರ್

    ಬಳ್ಳಾರಿ: ಕುರುಗೋಡು ತಾಲೂಕಿನಲ್ಲಿ ನಡೆಯಬೇಕಿದ್ದ ನಾಲ್ಕು ಹಾಗೂ ಸಿರಗುಪ್ಪ ತಾಲೂಕು ಸಿರಿಗೇರಿಯಲ್ಲಿ ಒಂದು ಸೇರಿ ಐದು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ಭಾನುವಾರ ತಡೆದಿದ್ದಾರೆ. ಕುರುಗೋಡು ಪಟ್ಟಣ, ಗೆಣಿಕೆಹಾಳ್‌ದಲ್ಲಿ ಎರಡು ಹಾಗೂ ಹೊಸ ಗೆಣಕಿಹಾಳದಲ್ಲಿ ಎರಡು ಹಾಗೂ ಸಿರಗುಪ್ಪ ತಾಲೂಕಿನ ಸಿರಿಗೇರಿಯಲ್ಲಿ ನಿಗದಿಯಾಗಿದ್ದ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲಾಗಿದೆ. ಪಾಲಕರಿಂದ ಮುಚ್ಚಳಕೆ ಬರೆಸಿಕೊಳ್ಳಲಾಗಿದೆ. ಸಿಡಿಪಿಒ ರಾಮಕೃಷ್ಣ ನಾಯಕ್, ಡಿಸಿಪಿಒ ಉಮೇಶ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.

    ವರನ ತಂದೆ ವಿರುದ್ಧ ಎಫ್‌ಐಆರ್
    ಬಾಲ್ಯ ವಿವಾಹ ನಡೆಸಿದ ಆರೋಪದಡಿ ಬಳ್ಳಾರಿ ತಾಲೂಕಿನ ಬುರನಾಯಕನಹಳ್ಳಿ ಗ್ರಾಮದ ವರನ ತಂದೆ ಆಂಜನೇಯ ವಿರುದ್ಧ ಭಾನುವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಟನಹಾಳ್ ಗ್ರಾಮದ 16 ವರ್ಷದ ಬಾಲಕಿ ಜತೆ ಬೆಳಗ್ಗೆ 4 ಗಂಟೆಗೆ ಬಾಲ್ಯ ವಿವಾಹ ನಡೆದಿದೆ. ಅಧಿಕಾರಿಗಳಿಗೆ ಮಧ್ಯರಾತ್ರಿ 2ಗಂಟೆಗೆ ಮದುವೆ ನಡೆಯುತ್ತಿರುವ ಕುರಿತು ಮೊಬೈಲ್‌ಗೆ ಸಂದೇಶ ಬಂದಿದ್ದರಿಂದ ನೋಡಿಕೊಂಡಿಲ್ಲ. ಬೆಳಗ್ಗೆ ಮೆಸೇಜ್ ನೋಡಿ, 8ಗಂಟೆಯೊಳಗೆ ಮನೆ ಮುಂದೆ ಹೋಗುವಷ್ಟರಲ್ಲಿ ಬಾಲ್ಯವಿವಾಹ ನಡೆದಿತ್ತು. ಅಲ್ಲದೆ ಬಾಲಕಿ, ವರನನ್ನು ಬೇರೆಡೆಗೆ ಕಳಿಸಿದ್ದರಿಂದ ವರನ ತಂದೆಯ ವಿಚಾರಣೆ ನಡೆದಿದೆ. ಸಿಡಿಪಿಒ ಉಷಾ, ಸಹಾಯಕ ಸಿಡಿಪಿಒ ರಾಜಾನಾಯ್ಕ, ಸಿಬ್ಬಂದಿ ಈಶ್ವರರಾವ್, ಕಂದಾಯ, ಪೊಲೀಸ್ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts