ಮಕ್ಕಳಲ್ಲಿ ಲಿಂಗ ತಾರತಮ್ಯ ಬೇಡ

1 Min Read
ಮಕ್ಕಳಲ್ಲಿ ಲಿಂಗ ತಾರತಮ್ಯ ಬೇಡ
ಅಳವಂಡಿಯ ಗ್ರಾಪಂಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯಲ್ಲಿ ಪಿಡಿಓ ಕೊಟ್ರಪ್ಪ ಅಂಗಡಿ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಕಾರ್ಯದರ್ಶಿ ಬಸವರಾಜ, ಕೆಎಚ್‌ಪಿಟಿಯ ಸಮುದಾಯ ಸಂಘಟಕಿ ಅನ್ನಪೂರ್ಣ ಪೂಜಾರ, ಪ್ರಮುಖರಾದ ತೋಟಯ್ಯ ಅರಳೆಲೆಮಠ ಇತರರಿದ್ದರು.

ಅಳವಂಡಿ: ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಜತೆಗೆ ಸಾಮಾಜಿಕ ಜವಾಬ್ದಾರಿ ಹಕ್ಕು ಹಾಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಪಿಡಿಓ ಕೊಟ್ರಪ್ಪ ಅಂಗಡಿ ತಿಳಿಸಿದರು.

ಇದನ್ನೂ ಓದಿ: ಮಕ್ಕಳ ಕಲಿಕೆಗೆ ಪಾಲಕರ ಪ್ರೋತ್ಸಾಹ ಅಗತ್ಯ

ಇಲ್ಲಿನ ಗ್ರಾಪಂನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ಹಾಗೂ ತಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಪಾಲಕರು ಲಿಂಗ ತಾರತಮ್ಯ ಮಾಡದೆ ಗಂಡು-ಹೆಣ್ಣಿಗೆ ಸಮಾನ ಪ್ರಧಾನ್ಯತೆ ನೀಡಿ. ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಇಂತಹ ಅನಿಷ್ಟ ಪದ್ಧತಿ ಕಂಡು ಬಂದರೆ 1098ಕ್ಕೆ, ಹತ್ತಿರದ ಗ್ರಾಪಂ, ಪೊಲೀಸ್ ಠಾಣೆ ಅಥವಾ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀತಿ ಜಾರಿ

ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ ಮಾತನಾಡಿ, ಸಾಮೂಹಿಕ ವಿವಾಹ ಮಾಡುವ ಸಂಘ ಸಂಸ್ಥೆಗಳು ವಧು ವರರ ಜನ್ಮ ದಿನಾಂಕದ ಅಗತ್ಯ ದಾಖಲೆಗಳಾದ ಶಾಲೆಯ ದೃಢಿಕರಣ, ಜನನ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬಾಲ್ಯ ವಿವಾಹದಿಂದ ಜೀವನಕ್ಕೆ ಹಾನಿಯಾಗಲಿದೆ. ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಕಾರ್ಯದರ್ಶಿ ಬಸವರಾಜ, ಕೆಎಚ್‌ಪಿಟಿಯ ಸಮುದಾಯ ಸಂಘಟಕಿ ಅನ್ನಪೂರ್ಣ ಪೂಜಾರ, ಪ್ರಮುಖರಾದ ತೋಟಯ್ಯ ಅರಳೆಲೆಮಠ, ಪರಶುರಾಮ ವಡ್ಡರ, ವಸಂತ ನಾಗರಳ್ಳಿ, ಮುಖ್ಯ ಶಿಕ್ಷಕರಾದ ಮಾರುತಿ ಕಾತರಕಿ, ವಿ.ಎಚ್.ಪುಲೇಶಿ, ಸಿಬ್ಬಂದಿ ಶಿವಮೂರ್ತಿ, ಸುರೇಶ, ಮಾರುತಿ, ಗೀತಾ, ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

See also  ಹೊಟ್ಟೆನೋವು ಎಂದರೂ ಲೆಕ್ಕಿಸದ ವೈದ್ಯರು: ಹೆರಿಗೆ ವೇಳೆ ಮಗು ಸಾವು; ಆಸ್ಪತ್ರೆ ಮುಂದೆ ಪ್ರತಿಭಟನೆ
Share This Article