More

    ಹೆದ್ದಾರಿ ಬಿಕೋ ಎನ್ನುತ್ತಿದ್ದರೂ ಹಾಲಿನ ಕ್ಯಾಂಟರ್​ ರೂಪದಲ್ಲಿ ಬಂದ ಜವರಾಯ…

    ಚನ್ನಪಟ್ಟಣ: ಕರೊನಾ ಲಾಕ್​ಡೌನ್​ನಿಂದಾಗಿ ಹೆದ್ದಾರಿ ಬಿಕೋ ಎನ್ನುತ್ತಿದ್ದರೂ ಹಾಲಿನ ಕ್ಯಾಂಟರ್​ ರೂಪದಲ್ಲಿ ಬಂದ ಜವರಾಯ 6ನೇ ತರಗತಿ ವಿದ್ಯಾರ್ಥಿಯನ್ನು ಆತನ ಮನೆ ಮುಂದೆಯೇ ಬಲಿ ಪಡೆದಿದೆ. ಚಕ್ರಕ್ಕೆ ಸಿಲುಕಿದ ಬಾಲಕನ ದೇಹವನ್ನು ಸ್ವಲ್ಪ ದೂರ ಎಳೆದೊಯ್ದಿದ್ದು, ದೇಹ ಛಿದ್ರವಾಗಿದೆ.

    ಮತ್ತೀಕೆರೆ ಗ್ರಾಮದ ಉಮಾ ಮತ್ತು ಆನಂದ್ ಶಿಕ್ಷಕ ದಂಪತಿಯ ಪುತ್ರ ಮಯೂರ(13) ಊರ ಒಳಗೆ ಹೋಗಲೆಂದು ಹೆದ್ದಾರಿ ಬದಿಯಲ್ಲಿದ್ದ ತನ್ನ ಮನೆ ಮುಂದಿನ ರಸ್ತೆಬದಿ ಭಾನುವಾರ ಬೆಳಗ್ಗೆ ನಿಂತಿದ್ದ. ಆ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕ ದಾಟಿ ಬಾಲಕನ ಮೇರೆ ಹರಿದಿದೆ. ಅವಘಡ ಸಂಭವಿಸುತ್ತಿದ್ದಂತೆ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ಇದನ್ನೂ ಓದಿರಿ ಕಾರ್ಕಳದ ಇಬ್ಬರು ಪೊಲೀಸರಿಗೆ ಕರೊನಾ ಪಾಸಿಟಿವ್: 3 ಪೊಲೀಸ್ ಠಾಣೆ, ಸರ್ಕಲ್ ಇನ್ಸ್​ಪೆಕ್ಟರ್​ ಕಚೇರಿ ಸೀಲ್​​ಡೌನ್​

    ಮೃತ ಬಾಲಕ ಮತ್ತೀಕೆರೆ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಓದುತ್ತಿದ್ದ. ತನ್ನಷ್ಟಕ್ಕೆ ತಾನು ನಿಂತಿದ್ದ ಬಾಲಕನ್ನು ಕ್ಯಾಂಟರ್ ರೂಪದಲ್ಲಿ ಬಂದ ಜವರಾಯ ಬಲಿ ಪಡೆದಿದೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಓಂ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿರಿ ಫೇಸ್​ಬುಕ್​ನ ವಿಭಿನ್ನ ಪ್ರೇಮ್​ ಕಹಾನಿ! 62ರ ಅಜ್ಜಿಗೆ ಮಿಸ್​ ಆಗಿ ಸಿಕ್ಕ 26ರ ಯುವಕ, ಮುಂದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts