More

    ವಿದ್ಯಾರ್ಥಿನಿಯ ಅಂಗಾಂಗ ದಾನ, 9 ಜನರಲ್ಲಿ ರಕ್ಷಿತಾಬಾಯಿ ಜೀವಂತ

    ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿದ್ದ ಚಿಕ್ಕ ತಾಂಡಾದ ರಕ್ಷಿತಾಬಾಯಿ ಭವಿಷ್ಯದಲ್ಲಿ ದೊಡ್ಡ ಕನಸು ಕಟ್ಟಿಕೊಂಡು ಚಿಕ್ಕಮಗಳೂರು ಕಾಲೇಜಲ್ಲಿ ಪಿಯುಸಿ (ಕಾಮರ್ಸ್) ಗೆ ಸೇರಿದ್ದಳು. ವಿಧಿ ಅವಳ ಕನಸನ್ನು ನುಚ್ಚು ನೂರು ಮಾಡಿದೆ. ಮಗಳನ್ನು ಕಳೆದುಕೊಂಡ ನೋವಲ್ಲೂ ಪಾಲಕರು ರಕ್ಷಿತಾಬಾಯಿಯ ಅಂಗಾಂಗ ದಾನ ಮಾಡುವ ಮೂಲಕ 9 ವರ್ಷದ ಮಗು ಸೇರಿದಂತೆ 9 ಜನರಲ್ಲಿ ನಮ್ಮ ಮಗಳನ್ನು ಕಾಣುತ್ತೇವೆ. ಆ 9 ಜನರ ಬದುಕಾದರೂ ಉಜ್ವಲವಾಗಲಿ ಎಂದು ಹೃದಯ ವೈಶಾಲ್ಯ ಮೆರೆದಿದ್ದಾರೆ.
    ಮಗಳು ಬದುಕುವುದಿಲ್ಲ ಎಂದು ವೈದ್ಯರು ಮನವರಿಕೆ ಮಾಡಿದಾಗ ಮಣ್ಣಾಗುವ ಮಗಳ ದೇಹದ ಕೆಲವು ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಸಂಜೀವಿನಿಯಂತಾದರೆ ಅಷ್ಟೇ ಸಾಕು ಎಂದು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಗುರುವಾರ 20 ತಜ್ಞ ವೈದ್ಯರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ತಂಡ 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ದಾನದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
    ಮಧ್ಯಾಹ್ನ 11 ಗಂಟೆಗೆ ಡಾ. ಭಾಸ್ಕರ್ ನೇತೃತ್ವದ ತಂಡ ಮೊದಲು ಹೃದಯವನ್ನು ತೆಗೆದು ಜಿರೋ ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ನಲ್ಲಿ ಐಡಿಎಸ್‌ಜಿ ಹೆಲಿಪ್ಯಾಡ್‌ಗೆ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕೊಂಡೊಯ್ದು 9 ವರ್ಷದ ಮಗುವಿಗೆ ಯಶಸ್ವಿಯಾಗಿ ಜೋಡಣೆ ಮಾಡಿತು. 11.45ಕ್ಕೆ ಲಿವರ್, ಕಣ್ಣು, ಕಿಡ್ನಿ, ಸೇರಿದಂತೆ ವಿವಿಧ ಅಂಗಾಂಗಗಳನ್ನು ಬೇರ್ಪಡಿಸಿ ವಿವಿಧ ಆಸ್ಪತ್ರೆಗೆ ರವಾನೆ ಮಾಡಲಾಯಿತು.
    ಐಡಿಎಸ್‌ಜಿ ಕಾಲೇಜು ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ನಲ್ಲಿ ಹೃದಯ ಕೊಂಡೊಯ್ಯುವಾಗ ಕಾಲೇಜು ವಿದ್ಯಾರ್ಥಿಗಳು ಸೇರಿ ನೂರಾರು ಜನ ಜಮಾಯಿಸಿ ವೀಕ್ಷಿಸಿದರು. ಒಬ್ಬರಿಗೆ ಹೃದಯ, ಎರಡು ಕಣ್ಣುಗಳನ್ನು ನಾಲ್ಕು ಮಂದಿಗೆ, ಇಬ್ಬರಿಗೆ ಕಿಡ್ನಿ, ಇಬ್ಬರಿಗೆ ಲಿವರ್ ಸೇರಿ 9 ಮಂದಿಗೆ ಅಂಗಾಂಗಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ದಾನದ ಶಸ್ತ್ರಚಿಕಿತ್ಸೆ ಮಾಡಿದ ಪ್ರಥಮ ಆಸ್ಪತ್ರೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಾಗಿದ್ದು ವೈದ್ಯರ ತಂಡಕ್ಕೆ ಮೆಚ್ಚುಗೆ ಕರೆಗಳು ಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts