More

    ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಪಕ್ಷದ ಮಾತು ಕೇಳಲೇಬೇಕು

    ಚಿಕ್ಕಮಗಳೂರು: ಪಕ್ಷದ ಕಾರ್ಯಕರ್ತರು ಜಿಪಂ ಚುನಾವಣೆಯಲ್ಲಿ ಬೀದಿ ಬೀದಿ ಸುತ್ತಿ ಅಭ್ಯರ್ಥಿಗಳನ್ನು ಗೆಲ್ಲಿಸಿದ ಪರಿಣಾಮ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಗೆಲ್ಲಿಸಿರುವುದು ಪಕ್ಷ ಹಾಗಾಗಿ ಪಕ್ಷದ ಮಾತನ್ನು ಸುಜಾತ ಕೃಷ್ಣಪ್ಪ ಕೇಳಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ದೂರವಾಣಿ ಮೂಲಕ ಸುಜಾತ ಕೃಷ್ಣಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಅಧ್ಯಕ್ಷರಾಗಿ 29 ತಿಂಗಳಾಗಿರುವುದರಿಂದ ರಾಜೀನಾಮೆ ನೀಡಲೇಬೇಕು. ನಿಮ್ಮನ್ನು ಇಷ್ಟೆಲ್ಲ ಮಾಡಿದ ಪಕ್ಷದಲ್ಲಿ ಎಲ್ಲರೂ ಮುಜುಗರಕ್ಕೆ ಒಳಗಾಗುತ್ತಿರುವುದು ನಿಮಗೆ ಸಂತೋಷ ತರುತ್ತದೆಯೇ ಎಂದು ಪ್ರಶ್ನಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಹಿಂದಿನವರು ರಾಜೀನಾಮೆ ನೀಡದಿದ್ದಾಗ ನಾನು ಪಕ್ಷದ ನಿಷ್ಠಾವಂತೆ ಎಂದು ನನ್ನ ಬಳಿ ಕಣ್ಣೀರಿಡುತ್ತ ಬಂದಾಗ ಮುಖಂಡರು ಸೇರಿ ರ್ಚಚಿಸಿ ಈ ಹಿಂದಿನ ಅಧ್ಯಕ್ಷೆಯಿಂದ ರಾಜೀನಾಮೆ ಕೊಡಿಸಿದ್ದೀವಿ. ಕೊನೆಯ 10 ತಿಂಗಳು ಬಿಟ್ಟು ಕೊಡುವುದಾಗಿ ಅಂದಿನ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಬಳಿ ನೀವು ಮಾತು ಕೊಟ್ಟಿದ್ದೀರಿ. ಪಕ್ಷ ನಿಮ್ಮನ್ನು ತಾಪಂ ಅಧ್ಯಕ್ಷರನ್ನಾಗಿ ಮಾಡಿದಾಗ ಹೀಗೆ ಮಾಡಿದ್ದರೆ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಬಡ್ತಿಯೇ ಸಿಗುತ್ತಿರಲಿಲ್ಲ. ಅಧಿಕಾರ ಶಾಶ್ವತವಲ್ಲ. ಪಕ್ಷ ಹೇಳುವುದನ್ನು ಕೇಳಿ ಎಂದು ಬುದ್ಧಿಮಾತು ಹೇಳಿದ್ದೇನೆ ಎಂದರು.

    ಅನ್ಯರು ಈ ವಿಷಯ ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಅವರ ಕ್ಷೇತ್ರ ಹೊರತು ಪಡಿಸಿ ಜಿಲ್ಲೆಯ ಬೇರೆ ಕ್ಷೇತ್ರದಲ್ಲಿ ಸುಜಾತ ಕೃಷ್ಣಪ್ಪ ಹೆಸರಿನಲ್ಲಿ ಬಿಜೆಪಿ ಸದಸ್ಯರು ಗೆದ್ದುಬಂದಿಲ್ಲ. ಎಸ್ಸಿ ಮೀಸಲು ಇರುವುದರಿಂದ ಮತ್ತೋರ್ವ ಅದೇ ಸಮುದಾಯದವರನ್ನೇ ಆಯ್ಕೆ ಮಾಡಬೇಕು. ಬೇರೆ ಸಮುದಾಯದವರನ್ನು ಕೂರಿಸಲು ಸಾಧ್ಯವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts