ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

1 Min Read
ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಚಿಕ್ಕಮಗಳೂರು: ಬೀದಿಬದಿ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದವರು ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವುದರಿಂದ ಅವರಿಗೆ ಬದಲಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಸಹೋದರತ್ವ ಸಮಿತಿ ಕಾರ್ಯಕರ್ತರು ಪೌರಾಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.

ಲಾಕ್​ಡೌನ್ ಆರಂಭವಾದಾಗಿನಿಂದ ಬೀದಿಬದಿ ವ್ಯಾಪಾರಸ್ಥರ ಬದುಕು ನಲುಗಿದೆ. ಎಂ.ಜಿ.ರಸ್ತೆಯಲ್ಲಿ ಖಾಲಿ ಇರುವ ತರಕಾರಿ ಮಾರುಕಟ್ಟೆ ನಿವೇಶನದಲ್ಲಿ ವಾಹನ ನಿಲುಗಡೆ ಜತೆ ಕಟ್ಟಡ ನಿರ್ವಿುಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವಂತೆ ಕೋರಿದರು.

ಕೆಲ ವರ್ಷಗಳ ಹಿಂದೆ ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ ಅಗಲೀಕರಣ ಸಂದರ್ಭ ಹೆರಿಗೆ ಆಸ್ಪತ್ರೆ ಎದುರಿನ ಅಂಬೇಡ್ಕರ್ ವೃತ್ತವನ್ನುತೆರವುಗೊಳಿಸಲಾಗಿತ್ತು. ಅದೇ ಜಾಗದಲ್ಲಿ ವೃತ್ತ ಮರುನಿರ್ವಣ ಮಾಡಿಲ್ಲ. ಕೂಡಲೆ ವೃತ್ತ ನಿರ್ವಿುಸುವಂತೆ ಒತ್ತಾಯಿಸಿದರು.

ಅಮೃತ್ ಯೋಜನೆಯಡಿ ಪೈಪ್​ಲೈನ್ ಅಳವಡಿಸಲು ರಸ್ತೆಗಳಲ್ಲಿ ತೆಗೆದ ಕಾಲುವೆಗಳನ್ನು ಮುಚ್ಚಿ ಸರಿಪಡಿಸಬೇಕು. ಬಹುತೇಕ ಮುಖ್ಯರಸ್ತೆಗಳಲ್ಲಿ ಅನುಮತಿ ಪಡೆಯದೆ ಕಲ್ಯಾಣ ಮಂಟಪ ಮತ್ತು ಲಾಡ್ಜ್ ನಿರ್ವಿುಸಿ ವಾಹನ ರ್ಪಾಂಗ್​ಗೆ ವ್ಯವಸ್ಥೆ ಇಲ್ಲದೆ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಅಂಥ ಮಾಲೀಕರ ವಿರುದ್ಧ ನಗರಸಭೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

See also  ನೆರೆ ಪೀಡಿತ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಹಾನಿ ವರದಿ ಸರ್ಕಾರಕ್ಕೆ
Share This Article