More

    ನಾಳೆ ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಚಾಲನೆ

    ಕೊಳ್ಳೇಗಾಲ: ಐತಿಹಾಸಿಕ, ಭಕ್ತಿ ಪರಕಾಷ್ಠೆಯ ಜಾತ್ರೆ ಎಂದೇ ಜನ ಜನಿತವಾಗಿರುವ ತಾಲೂಕಿನ ಚಿಕ್ಕಲ್ಲೂರು ಘನನೀಲಿ ಶ್ರೀ ಸಿದ್ದಪ್ಪಾಜಿ ಜಾತ್ರೆಗೆ ಗುರುವಾರ ಚಾಲನೆ ಸಿಗಲಿದೆ. ಈ ಸಂಬಂಧ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಹಾಗೂ ತಾಲೂಕು ದಂಡಾಧಿಕಾರಿ ಮಂಜುಳಾ ಬುಧವಾರ ಶ್ರೀ ಕ್ಷೇತ್ರ ಚಿಕ್ಕಲ್ಲೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹಳೇ ಮಠದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಎಸಿ ಬಿ.ಆರ್.ಮಹೇಶ್, ಜಾತ್ರೆಯಲ್ಲಿ ವಹಿಸಿಕೊಂಡಿರುವ ಪ್ರತಿಯೊಂದು ಜವಾಬ್ದಾರಿಯನ್ನು ಇಲಾಖಾ ಅಧಿಕಾರಿಗಳು ಎಲ್ಲಿಯೂ ಲೋಪವಾಗದಂತೆ ನಿರ್ವಹಿಸಬೇಕು. ಹೈಕೋರ್ಟ್ ಆದೇಶ ಹಾಗೂ ಜಿಲ್ಲಾಡಳಿತ ಆದೇಶಗಳನ್ನು ಪಾಲನೆ ಮಾಡಬೇಕು. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1959 ಕಲಂ(3) ಪ್ರಕಾರ ದೇವಾಸ್ಥಾನ, ಪೂಜಾ ಸ್ಥಳದಲ್ಲಿ ಮತ್ತು ದೇವಾಲಯದ ಪರಿಧಿಯಲ್ಲಿ ಪ್ರಾಣಿಬಲಿ ನಿಷೇಧಿಸಲಾಗಿದೆ. ಇದನ್ನು ಮನಗಂಡು ಸೆಕ್ಟರ್ ಆಫೀಸರ್‌ಗಳು ಹಾಗೂ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಐದು ದಿನಗಳ ಕಾಲ 24*7 ಬಿಗಿ ಆಗಿರಬೇಕು. ಕಾನೂನು ಉಲಂಘನೆ ಆಗದಂತೆ ಕಾರ್ಯ ನಿರ್ವಹಿಸಬೇಕೆಂದು ಎಂದು ಸೂಚನೆ ನೀಡಿದರು.

    ಜಾತ್ರೆ ಶುರುವಾಗುವ ಮುನ್ನ ಗ್ರಾಪಂ ಹಾಗೂ ಮಠದ ವತಿಯಿಂದ ಭಕ್ತರಿಗೆ ಅನುಕೂಲವಾಗುವಂತೆ ಸ್ವಚ್ಛತೆ, ಶೌಚಗೃಹ ನಿರ್ಮಾಣ, ನೀರಿನ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಹಿಸಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಬೇಕು ಎಂದು ಸೂಚನೆ ನೀಡಿದರು.

    ಎಸಿ ಮಹೇಶ್, ತಹಸೀಲ್ದಾರ್ ಮಂಜುಳಾ, ಡಿವೈಎಸ್ಪಿ ಜಿ.ಯು.ಸೋಮೇಗೌಡ, ಪಿಡಬ್ಲ್ಯುಡಿ ಎಇಇ ಪುರುಷೋತ್ತಮ್, ತೆಳ್ಳನೂರು ಪಿಡಿಒ ಶೋಭಾ, ನೀರಾವರಿ ಇಲಾಖೆ ಎಇಇ ರಾಮಕೃಷ್ಣ ಇತರ ಅಧಿಕಾರಿಗಳು ಜಾತ್ರೆಗೆ ಕೈಗೊಂಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಿದ್ದಪ್ಪಾಜಿ ಗದ್ದಿಗೆ ಸುತ್ತಲಿರುವ ಜಾತ್ರೆಯ ಪ್ರದೇಶ, ವ್ಯಾಪಾರಿಗಳಿಗೆ ನೀಡಿರುವ ಸ್ಥಳಗಳು, ಹೊಸ ಮಠವನ್ನು ವೀಕ್ಷಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts