More

    ಸಕಾಲದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲು ; 52,660 ಅರ್ಜಿಗಳ ಇತ್ಯರ್ಥ

    ಚಿಕ್ಕಬಳ್ಳಾಪುರ : ಸಕಾಲ ಯೋಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರಿದೆ. ಕಳೆದ ಅಕ್ಟೋಬರ್‌ನಲ್ಲಿ ಸಕಾಲ ಅಧಿನಿಯಮದಡಿ 53018 ಅರ್ಜಿ ಸ್ವೀಕರಿಸಿ, ಬಾಕಿ ಅರ್ಜಿ ಸೇರಿ 53,137 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿತ್ತು. ಬಳಿಕ ಸಕಾಲ ಸಪ್ತಾಹ ಕಾರ್ಯಕ್ರಮದಡಿ ಉತ್ತಮ ಸಾಧನೆ ತೋರಿದ್ದು ಡಿಸೆಂಬರ್‌ನಲ್ಲಿ 52,2217 ಅರ್ಜಿಗಳನ್ನು ಸ್ವೀಕರಿಸಿ, ಬಾಕಿ ಅರ್ಜಿ ಸೇರಿ 52,660 ಅರ್ಜಿಗಳನ್ನು ಇತ್ಯರ್ಥಪಡಿಸುವ ಮೂಲಕ ಮೊದಲನೇ ಸ್ಥಾನಕ್ಕೆ ಏರಿದೆ.

    ಇನ್ನು ಬೆಳಗಾವಿ (1,19,772 ಅರ್ಜಿ ಸ್ವೀಕಾರ ಪೈಕಿ 1,23,226 ಇತ್ಯರ್ಥ) ಕೊನೇ ಸ್ಥಾನದಲ್ಲಿದೆ. ಹಿಂದೆ ಯೋಜನೆಯಡಿ ಜಿಲ್ಲಾಡಳಿತವು ನಿರಂತರವಾಗಿ ಮೊದಲನೇ ಸ್ಥಾನದಲ್ಲಿದ್ದು ನಾಲ್ಕು ಬಾರಿ ಸರ್ಕಾರದಿಂದ ಪ್ರಶಂಸನಾ ಪತ್ರ ಪಡೆದಿತ್ತು. ಕರೊನಾ ಲಾಕ್‌ಡೌನ್ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅರ್ಜಿ ವಿಲೇವಾರಿಯಲ್ಲಿ ಹಿನ್ನಡೆ ಕಂಡಿದ್ದು 9ನೇ ಸ್ಥಾನಕ್ಕೆ ಕುಸಿದಿತ್ತು. ಬಳಿಕ ಮೂರನೇ ಸ್ಥಾನ, ಇದೀಗ ಮೊದಲ ಸ್ಥಾನಕ್ಕೆ ಏರಿದೆ.

    ಮುಂಬರುವ ದಿನಗಳಲ್ಲೂ ಜನರ ಅರ್ಜಿ ಸ್ವೀಕಾರ ಮತ್ತು ವಿಲೇವಾರಿ ಪ್ರಕ್ರಿಯೆ ಚುರುಕಾಗಿ ನಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ತೋರಬಾರದು. ಇದರ ಮೂಲಕ ನಿರಂತರವಾಗಿ ಮೊದಲನೇ ಸ್ಥಾನ ಗಳಿಕೆಯ ಸಾಧನೆ ತೋರಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಿಬ್ಬಂದಿಗೆ ಸೂಚಿಸಿದ್ದಾರೆ.

    ಸಕಾಲ ಯೋಜನೆ ಸದ್ವಿನಿಯೋಗ : ‘ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ್ಲ’ ಎಂಬ ಘೋಷ ವಾಕ್ಯದಡಿ ಸರ್ಕಾರವು ಸಕಾಲ ಯೋಜನೆ ಜಾರಿಗೆ ತಂದಿದೆ. ಇದರಡಿ ಕಂದಾಯ, ಸ್ಥಳೀಯ ಆಡಳಿತ ಸಂಸ್ಥೆ, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಅಂಗವಿಕಲರ ಕಲ್ಯಾಣಾಭಿವದ್ಧಿ ಇಲಾಖೆ, ಸಾರಿಗೆ ಇಲಾಖೆ ಸೇರಿ 98 ಇಲಾಖೆಗಳ ಸೇವೆ ಪಡೆಯಲು ಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಸಕಾಲ ಸೇವೆಯನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ, ವಾಣಿಜ್ಯ ಪರವಾನಗಿ, ಖಾತಾ ನಕಲು, ವಸತಿ ಕಟ್ಟಡಗಳಿಗೆ ನೀರು ಸರಬರಾಜು ಮತ್ತು ಒಳ ಚರಂಡಿಯ ಹೊಸ ಸಂಪರ್ಕ, ವಾಸ ದೃಢೀಕರಣ ಪ್ರಮಾಣ ಪತ್ರ ಸೇರಿ ಬರೋಬ್ಬರಿ 1025 ಸೇವೆಗಳನ್ನು ಸಕಾಲ ಸೇವೆಗಳು ಜನರಿಗೆ ಲಭಿಸುತ್ತವೆ. ಅದು ನಿಯಮಾನುಸಾರ ತ್ವರಿತ ಇತ್ಯರ್ಥ, ಅರ್ಜಿ ಸಲ್ಲಿಕೆಯು ಸರಳ. ಹಾಗೆಯೇ ಸ್ವೀಕೃತಿ ಪತ್ರ ಸಿಗುವುದರಿಂದ ಸೇವೆಯ ಖಾತ್ರಿ ಇರುತ್ತದೆ. ಇದರಿಂದ ಜನರು ಕಚೇರಿಗೆ ವಿವಿಧ ಸೇವೆಗಳನ್ನು ಬಯಸಿ ಸಲ್ಲಿಸಿದ ಬಹುತೇಕ ಅರ್ಜಿಗಳು ತ್ವರಿತವಾಗಿ ಇತ್ಯರ್ಥವಾಗುತ್ತದೆ. ಹಲವು ಬಾರಿ ಅಲೆದಾಡುವುದಕ್ಕೂ ಕಡಿವಾಣ ಬೀಳುತ್ತದೆ.

    ಜಿಲ್ಲೆಯಲ್ಲಿ ಸಕಾಲ ಸಪ್ತಾಹ ಕಾರ್ಯಕ್ರಮದಡಿ ತ್ವರಿತ ಅರ್ಜಿ ಸ್ವೀಕಾರ, ವಿಲೇವಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಯಿತು. ಇದರಿಂದ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿದೆ.
    ಆರ್. ಲತಾ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts