More

    ಚಿಕ್ಕತಿರುಪತಿ ಹುಂಡಿಯಲ್ಲಿ 63.97 ಲಕ್ಷ ರೂ.ಸಂಗ್ರಹ ; 64 ಗ್ರಾಂ ಚಿನ್ನ, 327 ಗ್ರಾಂ ಬೆಳ್ಳಿ ಕಾಣಿಕೆ

    ಲಕ್ಕೂರು : ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ನಡೆದಿದ್ದು, 114 ದಿನಗಳಲ್ಲಿ 63.97 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಸಂಗ್ರಹವಾಗಿದೆ. ವಿದೇಶಿ ನೋಟುಗಳೂ ಇದ್ದು, 2020-21ನೇ ಸಾಲಿನಲ್ಲಿ ಒಟ್ಟಾರೆ 1.33 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

    ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ 3 ಹುಂಡಿಗಳನ್ನು ಜಿಲ್ಲಾ ಮುಜರಾಯಿ ತಹಸೀಲ್ದಾರ್ ನಾಗವೇಣಿ, ತಹಸೀಲ್ದಾರ್ ಎಂ.ಮಂಜುನಾಥ್, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮಂಜುಳಾ ನೇತೃತ್ವದಲ್ಲಿ
    ತೆರೆದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ರವರೆಗೆ ಎಣಿಕೆ ನಡೆಯಿತು.

    ಚಿಲ್ಲರೆ ಹಣ ಹಾಗೂ ಅನ್ನದಾಸೋಹ ಹುಂಡಿ ಎಣಿಕೆ ನಡೆದಿಲ್ಲ. ಭಕ್ತರೊಬ್ಬರು ದೇವರ ಸೇವೆ ವಾಡಲು ಅವಕಾಶ ವಾಡಿಕೊಡುವಂತೆ ಪ್ರಾರ್ಥಿಸಿ ಅರ್ಪಿಸಿದ್ದ ಪತ್ರವೂ ಕಂಡುಬಂತು.  ಈ ಸಾಲಿನಲ್ಲಿ 2 ಬಾರಿ ಎಣಿಕೆ ವಾಡಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ 69,82,402 ರೂ ಸಂಗ್ರಹವಾಗಿತ್ತು. ಒಟ್ಟಾರೆ ಆದಾಯ 1.50 ಕೋಟಿ ಮೀರಲಿದೆ. ಹಣವನ್ನು ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ಗೆ ಜವಾ ವಾಡಲಾಯಿತು. ಎಣಿಕೆ ಕಾರ್ಯ ಚಿತ್ರೀಕರಿಸಲಾಗಿದೆ.

    ಲಕ್ಕೂರು ಠಾಣೆ ಎಎಸ್‌ಐ ನಾಗಭೂಷಣ್,ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಂದನ್.ವಿ.ಗೌಡ, ಸದಸ್ಯರಾದ ಎಂ.ವೀರಭದ್ರಪ್ಪ, ಟಿ.ಆರ್.ವೆಂಕಟೇಶ್‌ಗೌಡ, ಎ.ಎಂ.ನಾರಾಯಣಪ್ಪ, ಜಗದೇನಹಳ್ಳಿ ಮುನಿರೆಡ್ಡಿ, ಲಕ್ಷ್ಮಮ್ಮ ವೆಂಕಟಪ್ಪ, ಬ್ಯಾಂಕ್ ವ್ಯವಸ್ಥಾಪಕ ರಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts