More

    ಸಂಪನ್ಮೂಲ ವ್ಯಕ್ತಿಗಳನ್ನು ಕಾಯಂಗೊಳಿಸಿ

    ಕಂಪ್ಲಿ: ಸೇವಾ ಹಿರಿತನ ಆಧಾರದ ಮೇಲೆ ವೇತನ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂಮಟ್ಟದ ಮುಖ್ಯ ಪುಸ್ತಕ ಬರಹಗಾರರ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದ ತಾಲೂಕು ಪದಾಧಿಕಾರಿಗಳು ಪಟ್ಟಣದಲ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡಗೆ ಮಂಗಳವಾರ ಮನವಿ ಸಲ್ಲಿಸಿದರು.

    ಸೇವಾ ಹಿರಿತನ ಆಧಾರದ ಮೇಲೆ ವೇತನ ಒದಗಿಸಿ

    ತೆಲಂಗಾಣ ಮಾದರಿಯಂತೆ ಮುಖ್ಯ ಪುಸ್ತಕ ಬರಹಗಾರರನ್ನು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಕಾಯಂಗೊಳಿಸಬೇಕು. ಮುಖ್ಯ ಪುಸ್ತಕ ಬರಹಗಾರರಿಗೆ ಸದ್ಯ ಮಾಸಿಕ 5000 ರೂ. ನೀಡಲಾಗುತ್ತಿದೆ. ಇದು ನರೇಗಾ ಕೂಲಿಗಿಂತಲೂ ಕಡಿಮೆಯಾಗಿದೆ. ಓಡಾಟದ ವೆಚ್ಚ ಅಧಿಕವಾಗಿದ್ದರಿಂದ ಮಾಸಿಕ 20 ಸಾವಿರ ರೂ. ಮುಖ್ಯ ಪುಸ್ತಕ ಬರಹಗಾರರಿಗೆ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಗೆ 15 ಸಾವಿರ ರೂ. ವೇತನ ನಿಗದಿಗೊಳಿಸಬೇಕು ಎಂದು ಮಹಾಒಕ್ಕೂಟದ ತಾಲೂಕು ಅಧ್ಯಕ್ಷೆ ಬಿ.ವಿ.ಪುಷ್ಪಲತಾ ಒತ್ತಾಯಿಸಿದರು.

    ಇದನ್ನೂ ಓದಿ:

    ಏಕರೂಪದ ವೇತನ ಶ್ರೇಣಿಯೊಂದಿಗೆ, ಸೇವಾ ಹಿರಿತನ ಆಧಾರದ ವೇತನವನ್ನು ನೀಡಬೇಕು. ಇಎಸ್‌ಐ, ಪಿಎಫ್, ಸಮವಸ್ತ್ರ, ಗುರುತಿನ ಚೀಟಿ ಸೌಲಭ್ಯಗಳನ್ನು ಒದಗಿಸಬೇಕು. ಒಕ್ಕೂಟದ ಕಚೇರಿಗಳಿಗೆ ಕಂಪ್ಯೂಟರ್ ಸೇರಿ ತಾಂತ್ರಿಕ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಬೇಡಿಕೆಗಳನ್ನು ಈಡೇರಿಸುವತನಕ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಡಿ.14ರಂದು ಬೆಳಗಾವಿಯ ಅಧಿವೇಶನದ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
    ಪಿಡಿಒ ಶ್ರೀಶೈಲಗೌಡ, ಮಹಾಒಕ್ಕೂಟದ ತಾಲೂಕು ಪದಾಧಿಕಾರಿಗಳಾದ ಸಿ.ದ್ರಾಕ್ಷಾಯಿಣಿ, ವಿದ್ಯಾವತಿ, ತ್ರಿವೇಣಿ, ಸರಸ್ವತಿ, ಲಕ್ಷ್ಮೀ, ಉಮಾ, ರೇವತಿ, ಅನ್ನಪೂರ್ಣ, ಮಂಜುಳಾ, ಗಾಳೆಮ್ಮ, ಕೃಷ್ಣವೇಣಿ, ರೋಜಾ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts