More

    ಚಿಕನ್​, ಮೊಟ್ಟೆ ಮಾರಾಟ ನಿಷೇಧ! ರೆಸ್ಟೋರೆಂಟ್​ ಖಾದ್ಯಗಳ ಮೇಲೂ ನಿರ್ಬಂಧ

    ನವದೆಹಲಿ: ದೇಶದ ಹಲವು ರಾಷ್ಟ್ರಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಹಕ್ಕಿ ಜ್ವರ ಪತ್ತೆಯಾಗಿದ್ದು, ರಾಜ್ಯದ ಎರಡು ಮಹಾನಗರ ಪಾಲಿಕೆಗಳು ಕೋಳಿ ಮಾಂಸ ಮತ್ತು ಮೊಟ್ಟೆಯ ಮಾರಾಟಕ್ಕೆ ನಿಷೇಧ ಹೇರಿವೆ. ಹಾಗೆಯೇ ಮೊಟ್ಟೆ ಮತ್ತು ಮಾಂಸದಿಂದ ಮಾಡಲಾದ ಖಾದ್ಯಗಳನ್ನು ಗ್ರಾಹಕರಿಗೆ ನೀಡದಂತೆ ರೆಸ್ಟೋರೆಂಟ್​ಗಳಿಗೆ ನಿರ್ಬಂಧ ಹೇರಲಾಗಿದೆ.

    ಇದನ್ನೂ ಓದಿ: ಗೊರಿಲ್ಲಾಗಳಿಗೂ ಕರೋನಾ? ಅಮೆರಿಕಾದ ಜೂನಲ್ಲಿ ನಡೆದದ್ದೇನು?

    ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕೋಳಿ ಮಾಂಸ ಮಾರಾಟ ನಿಷೇಧ ಮಾಡುವ ಅಗತ್ಯವಿದೆ. ಮುಂದಿನ ಆದೇಶದವರೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾರಾಟ ಮಾಡುವಂತಿಲ್ಲ. ಹಾಗೆಯೇ ರೆಸ್ಟೋರೆಂಟ್​ಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯಿಂದ ಯಾವುದೇ ರೀತಿಯ ಖಾದ್ಯ ತಯಾರಿಸುವಂತಿಲ್ಲ ಎಂದು ದೆಹಲಿ ಉತ್ತರ ಮತ್ತು ದಕ್ಷಿಣದ ಮಹಾನಗರ ಪಾಲಿಕೆಗಳು ಆದೇಶ ಹೊರಡಿಸಿವೆ.

    ಇದನ್ನೂ ಓದಿ: VIDEO| ಕಾಳಿಂಗ ಸರ್ಪ ಹಿಡಿಯುವಾಗ ಬಚಾವಾಗಿದ್ದೇ ಆಶ್ಚರ್ಯ! ಶಿವಮೊಗ್ಗದ ಈ ಸ್ನೇಕ್​ ಕ್ಯಾಚರ್​ ಮಾಡಿದ ಚಮತ್ಕಾರ ನೋಡಿ

    ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಲ್ಸಿಯಸ್​ನಲ್ಲಿ 30 ನಿಮಿಷಗಳ ಕಾಲ ಬೇಯಿಸಿ ತಿನ್ನುವುದರಿಂದ ಹಕ್ಕಿ ಜ್ವರ ಬರುವುದಿಲ್ಲ. ಆದರೆ ಸರಿಯಾದ ರೀತಿಯಲ್ಲಿ ಬೇಯಿಸದೆ ತಿಂದರೆ ಹಕ್ಕಿ ಜ್ವರ ಮನುಷ್ಯರಿಗೂ ಹಬ್ಬುವ ಸಾಧ್ಯತೆಗಳಿರುತ್ತದೆ ಎಂದು ಆರೋಗ್ಯ ಇಲಾಖೆ ಈ ಹಿಂದೆಯೇ ತಿಳಿಸಿತ್ತು. ಹಾಫ್​ ಬಾಯ್ಲಡ್​ ಮೊಟ್ಟೆ, ಮಾಂಸವನ್ನು ತಿನ್ನಬೇಡಿ ಎಂದು ರಾಜ್ಯ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮಹಾನಗರ ಪಾಲಿಕೆಗಳು ಈ ಆದೇಶ ಹೊರಡಿಸಿವೆ. (ಏಜೆನ್ಸೀಸ್​)

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts