More

    ಚಿ. ಉದಯಶಂಕರ್ ಪತ್ನಿ ಶಾರದಮ್ಮ ಇನ್ನಿಲ್ಲ

    ಕನ್ನಡ ಚಿತ್ರರಂಗದ ಮೇರು ಚಿತ್ರಸಾಹಿತಿ ಚಿ. ಉದಯಶಂಕರ್ ಅವರ ಪತ್ನಿ ಶಾರದಮ್ಮ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ರ ಚಿ. ಗುರುದತ್, ಮಗಳು ಶ್ಯಾಮಲ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಶಾರದಮ್ಮ ಅವರಿಗೆ 75 ವರ್ಷ ವಯಸ್ಸಾಗಿತ್ತು.

    ‘ಸಾಹಿತ್ಯ ರತ್ನ’ ಉದಯಶಂಕರ್ ಅವರನ್ನು 1964ರಲ್ಲಿ ಮದುವೆಯಾಗಿದ್ದ ಶಾರದಾ ಅವರು, ಅಂದಿನ ಮದರಾಸಿನಲ್ಲಿ ನೆಲೆಗೊಂಡಿದ್ದರು. ಹಲವು ವರ್ಷಗಳ ಕಾಲ ಅಲ್ಲೇ ಜೀವನ ನಡೆಸಿದ ಚಿ.ಉ ಕುಟುಂಬ, 80ರ ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಗೊಂಡಿತ್ತು. 1993ರಲ್ಲಿ ಚಿ. ಉದಯಶಂಕರ್ ಅವರ ನಿಧನದ ನಂತರ ಮಗ ಚಿ. ಗುರುದತ್ ಜತೆಗೆ ಯಶವಂತಪುರದ ಅಪಾಟ್​ರ್ಮೆಂಟ್​ವೊಂದರಲ್ಲಿ ಶಾರದಮ್ಮ ವಾಸವಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು, ಗುರುವಾರ ನಿಧನರಾದರು. ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್​ನಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು. ಚಿತ್ರರಂಗದ ಕೆಲವೇ ಗಣ್ಯರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.

    ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಬಾಲಿವುಡ್ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts