More

    10 ವರ್ಷಗಳಿಂದ ನಕ್ಸಲರೊಂದಿಗೆ ನಂಟು ಹೊಂದಿದ್ದ ಬಿಜೆಪಿ ಮುಖಂಡ ಅರೆಸ್ಟ್​

    ದಂತೇವಾಡ: ನಕ್ಸಲರಿಗೆ ಸಹಾಯ ಮಾಡುತ್ತಿದ್ದ ಆರೋಪದಡಿ ಬಿಜೆಪಿಯ ದಂತೇವಾಡಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಗತ್​ ಪೂಜಾರಿ ಮತ್ತು ಇನ್ನೀರ್ವರು ಬಂಧಿತರಾಗಿದ್ದಾರೆ.

    ಛತ್ತೀಸ್​ಗಢದಲ್ಲಿ ನಕ್ಸಲರ ಹಾವಳಿ ವಿಪರೀತವಾಗಿದೆ. ಅವರಿಗೆ ಬಿಜೆಪಿ ಉಪಾಧ್ಯಕ್ಷ ಮತ್ತಿತರರು ಸೇರಿ ಟ್ರ್ಯಾಕ್ಟರ್​, ಗೂಡ್ಸ್​ ಸೇರಿ ಹಲವು ಸರಕು, ಸಾಮಗ್ರಿಗಳನ್ನು ಒದಗಿಸುತ್ತಿದ್ದರು. ಸುಮಾರು ಒಂದು ದಶಕಗಳಿಂದಲೂ ನಕ್ಸಲರಿಗೆ ನೆರವು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಮೂವರನ್ನು ಮಾವೋವಾದಿ ಮುಖಂಡ ಅಜಯ್​ ಅಲಾಮಿಗಾಗಿ 9,10, 000 ರೂ.ಮೌಲ್ಯದ ಟ್ರ್ಯಾಕ್ಟರ್ ಖರೀದಿ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಅಜಯ್​ ಬಂಧನಕ್ಕಾಗಿ ಆತ ತಲೆಗೆ 5 ಲಕ್ಷ ರೂಪಾಯಿಯನ್ನು ಈ ಹಿಂದೆಯೇ ಕಟ್ಟಲಾಗಿದೆ. ಯಾರೇ ಆತನ ಸುಳಿವು ನೀಡಿ, ಬಂಧನಕ್ಕೆ ಸಹಕಾರ ನೀಡಿದರೂ ಅವರಿಗೆ 5 ಲಕ್ಷ ರೂ.ಬಹುಮಾನ ಕೊಡುವುದಾಗಿ ಹಿಂದೆಯೇ ಘೋಷಿಸಿದ್ದೆವು. ಇದೀಗ ಟ್ರ್ಯಾಕ್ಟರ್​ನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಸುಶಾಂತ್​ ನೋವಿಗೆ ಕಾರಣ? ಇವರ ಸಾವಿನ ಸುದ್ದಿ ಕೇಳಿ ಫೋನ್​ ಕೆಳಗಿಟ್ಟ ಅಂಕಿತಾ

    ಜಗತ್​ ಪೂಜಾರಿ ಮತ್ತು ಅಲಾಮಿ ನಡುವೆ ಹಲವು ರೀತಿಯ ವ್ಯವಹಾರಗಳು ನಡೆಯುತ್ತಿವೆ. ಬಿಜೆಪಿ ಮುಖಂಡ ನಕ್ಸಲರಿಗೆ ಹಲವು ಸರಕು, ಸಾಮಗ್ರಿಗಳನ್ನು ಒದಗಿಸಿ, ಹಣ ಗಳಿಸುತ್ತಿದ್ದಾರೆಂಬ ನಿಖರ ಮಾಹಿತಿ ಸಿಕ್ಕಿತ್ತು. ಹಾಗಾಗಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ಗೀದಮ್​ ಬಳಿ ಎರಡು ಕಡೆ ಬ್ಯಾರಿಕೇಡ್​ ಹಾಕಿ, ಎಲ್ಲ ಟ್ರ್ಯಾಕ್ಟರ್​ಗಳನ್ನೂ ಪರಿಶೀಲನೆ ಮಾಡಲಾಗುತ್ತಿತ್ತು. ಆಗಲೇ ಸಿಕ್ಕಿಬಿದ್ದಿದ್ದಾರೆ. ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಜಗತ್​ ಪೂಜಾರಿ ಕೂಡ ಒಪ್ಪಿಕೊಂಡಿದ್ದಾರೆ. 10 ವರ್ಷಗಳಿಂದಲೂ ನಕ್ಸಲರಿಗೆ ಟ್ರ್ಯಾಕ್ಟರ್​ ಸೇರಿ, ಅನೇಕ ಸರಕು ಒದಗಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಎಸ್​​ಪಿ ತಿಳಿಸಿದ್ದಾರೆ.  ಇದನ್ನೂ ಓದಿ: ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ​ಕುಮಾರ್​ ಕುಟುಂಬ

    ಈ ಕಾರ್ಯಾಚರಣೆ ಒಮ್ಮಿಂದೊಮ್ಮೆಲೇ ಆಗಿದ್ದಲ್ಲ. ಸುಮಾರು ಒಂದು ತಿಂಗಳ ಕಾಲ ಗುಪ್ತಚರ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್​ ಪೂಜಾರಿ ಮಾವೋವಾದಿಗಳನ್ನು ಭೇಟಿಯಾಗುತ್ತಿದ್ದರು. ಅವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದರು ಎಂಬುದು ಖಚಿತವಾದ ಬಳಿಕ ಪೊಲೀಸರು ಅಧಿಕೃತವಾಗಿ ತನಿಖೆಗೆ ಇಳಿದಿದ್ದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ‘ಆತ ನನ್ನನ್ನು ತುಂಬ ಪ್ರೀತಿಸುತ್ತಿದ್ದ…ನಾನು ಅವನ ಮಿಸ್​ ಮಾಡಿಕೊಳ್ಳುತ್ತೇನೆ…’: ಶಾರುಖ್​ ಖಾನ್​ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts