

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ವಾರ ಆಗಿದೆ. ಅವರ ಮನೆಯಲ್ಲಿ ದುಃಖ ಇನ್ನೂ ಹಾಗೇ ಮಡುಗಟ್ಟಿದೆ.
ಇಂದು ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಕುಟುಂಬದವರು ಕೆ.ಆರ್.ರಸ್ತೆಯಲ್ಲಿರುವ ಚಿರಂಜೀವಿ ಸರ್ಜಾ ಮನೆಗೆ ಭೇಟಿ ನೀಡಿದ್ದರು. ಚಿರು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಸುಮಾರು ನಾಲ್ಕು ತಾಸು ಅಲ್ಲಿಯೇ ಇದ್ದ ರಾಘಣ್ಣ ಕುಟುಂಬ, ಗರ್ಭಿಣಿ ಮೇಘನಾ ರಾಜ್ ಅವರಿಗೂ ಧೈರ್ಯ ತುಂಬಿದ್ದಾರೆ.