More

    ನಕ್ಸಲ್​ರ ವಿರುದ್ಧದ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ ಪತ್ತೆಯಾಗದ 21 ಯೋಧರು..!

    ರಾಯ್ಪುರ್: ಛತ್ತೀಸ್​ಗಢದಲ್ಲಿ ಶನಿವಾರ ನಕ್ಸಲ್​ರ ವಿರುದ್ಧ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ 21 ಸೈನಿಕರು ನಾಪತ್ತೆಯಾಗಿದ್ದಾರೆ. ಸುಕ್ಮಾ-ಬಿಜಾಪುರ್​ ಗಡಿ ಭಾಗದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.

    24 ಸೈನಿಕರು ಗಾಯಗೊಂಡಿದ್ದು, ಅವರನ್ನು ಬಿಜಾಪುರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 7 ಮಂದಿಯನ್ನು ರಾಯ್ಪುರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಶಿಫಾರಸು ಮಾಡಲಾಗಿದೆ.

    ಭದ್ರತಾ ಸಿಬ್ಬಂದಿಯ ಸಾವನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಖಂಡಿಸಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಯ ಶತ್ರುಗಳ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಕ್ಸಲರಿಗೆ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಇದನ್ನೂ ಓದಿರಿ: ಸಮಾಜದಲ್ಲಿ ಹೆಚ್ಚಾಗುತ್ತಿದೆ ಕುರಿ ಮೆಂಟಾಲಿಟಿ; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟಿ ಸುಧಾರಾಣಿ

    ಶನಿವಾರ ಪ್ರಧಾನಿ ನರೇಂದ್ರ ಮೋದಿಯು ಸಹ ಗಾಯಗೊಂಡ ಭದ್ರತಾ ಸಿಬ್ಬಂದಿಯ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ. ಅಲ್ಲದೆ, ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಮಡಿದ ಯೋಧರ ಕುಟುಂಬದ ಜತೆ ನಾವಿರುತ್ತೇವೆಂದು ಟ್ವೀಟ್​ ಮೂಲಕ ಧೈರ್ಯ ತುಂಬಿದ್ದಾರೆ.

    ನಿನ್ನೆ ಬಿಜಾಫುರದ ಸಿಲಗರ್ ಅರಣ್ಯದಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮುಖಾಮುಖಿಯಾದ ಯೋಧರು ಹಾಗೂ ನಕ್ಸಲ್​ರು ಭೀಕರ ಗುಂಡಿನ ಕಾಳಗ ನಡೆಸಿದ್ದಾರೆ. ನಿನ್ನೆಯಿಂದ 21 ಯೋಧರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. (ಏಜೆನ್ಸೀಸ್​)

    ಮಾವೋವಾದಿಗಳ ಅಟ್ಟಹಾಸ: ಕೋಬ್ರಾ ಪಡೆಯ ಐವರು ಯೋಧರು ಹುತಾತ್ಮ

    ನಿರ್ಲಕ್ಷಿಸಿದರೆ ಸುರಕ್ಷತೆ ಪ್ರಾಣಕ್ಕೆ ಬರಲಿದೆ ಕುತ್ತು; ಗಣಿ ಜಾಗೃತಿ ದಿನ

    ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್​ ಕಮೋಡ್​ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts