More

    ಚೆನ್ನಿ, ಸಬಿತಾ, ರಾಜಾಗೆ ಪರಸ್ಪರ ಪ್ರಶಸ್ತಿ

    ಸಾಗರ: ಪರಸ್ಪರ ಸಾಹಿತ್ಯ ವೇದಿಕೆ ನೀಡುವ 2023-24ನೇ ಸಾಲಿನ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು.
    ರೆ.ಎ್.ಕಿಟೆಲ್ ಪ್ರಶಸ್ತಿಯನ್ನು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ, ಅಕ್ಕಮಹಾದೇವಿ ಪ್ರಶಸ್ತಿಯನ್ನು ಕವಿ ಮತ್ತು ಅಂಕಣಗಾರ್ತಿ ಡಾ. ಸಬಿತಾ ಬನ್ನಾಡಿ, ಸಂತ ಶಿಶುನಾಳ ಷರ್ೀ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆಯ ಕವಿ ಆರ್ಿ ರಾಜಾಗೆ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.14ರ ಬೆಳಗ್ಗೆ 11ಕ್ಕೆ ವರದಶ್ರೀ ಸಭಾಂಗಣದಲ್ಲಿ ನಡೆಯಲಿದ್ದು ಡಾ. ಜಿ.ಎಸ್.ಭಟ್ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರಶಸ್ತಿಯು 10 ಸಾವಿರ ರೂ. ನಗದು, ಸನ್ಮಾನ ಪತ್ರ ಒಳಗೊಂಡಿದೆ. ಭಾವೈಕ್ಯ, ಸಾಮಾಜಿಕ ಕಾಳಜಿ ಹಾಗೂ ಕನ್ನಡದಲ್ಲಿ ಸಾಹಿತ್ಯ ರಚನೆ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಚಿಂತಕರು, ಹೋರಾಟಗಾರರು ಹಾಗೂ ಬರಹಗಾರರನ್ನು ಪ್ರೋತ್ಸಾಹಿಸಲು ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
    ವೇದಿಕೆ ಅಧ್ಯಕ್ಷ ಡಾ. ರ್ಸ್ರಾಜ್ ಚಂದ್ರಗುತ್ತಿ ಮಾತನಾಡಿ, ವೇದಿಕೆ ಪ್ರಾರಂಭವಾಗಿ 20 ವರ್ಷ ಕಳೆದಿದ್ದು ಕಳೆದ ನಾಲ್ಕು ವರ್ಷಗಳಿಂದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವೇದಿಕೆ ಆಶ್ರಯದಲ್ಲಿ ಸಾಗರಕ್ಕೆ ಹೆಸರಾಂತ ಸಾಹಿತಿ, ಕಲಾವಿದರನ್ನು ಕರೆಸಿ ವಿಚಾರಗೋಷ್ಠಿ, ಉಪನ್ಯಾಸ, ಸಂವಾದ, ಕನ್ನಡ ಭಾಷಾ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವುದು, ಗ್ರಾಮೀಣ ಭಾಗದ ಸಾಧಕರನ್ನು ಸನ್ಮಾನಿಸುವುದು, ಹೊಸ ಓದು ಮಾಲಿಕೆಯಡಿ ಕೃತಿಗಳ ಚರ್ಚೆ ಇನ್ನಿತರ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ದತ್ತಾತ್ರೇಯ ಬೊಂಗಾಳೆ, ಗಣಪತಿ, ಎಂ.ಸಿ.ವೀರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts