More

    ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆದ ಮಹಿಳೆ; ಅಂಥದ್ದೇನಾಯ್ತು?

    ಚೆನ್ನೈ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್​ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ ನೀಡಿದ್ದ ದೂರನ್ನು ಮಹಿಳೆ ವಾಪಸ್​ ಪಡೆದಿದ್ದಾರೆ.

    ಷಣ್ಮುಗಂ ಅವರು ಪಾರ್ಕಿಂಗ್​ ವಿಚಾರಕ್ಕೆ ನಮ್ಮೊಂದಿಗೆ ಜಗಳ ತೆಗೆದಿದ್ದಾರೆ. ಮನೆಯ ಬಾಗಿಲಿನ ಬಳಿ ಮೂತ್ರವಿಸರ್ಜನೆ ಮಾಡಿದ್ದಲ್ಲದೆ, ತಾವು ಬಳಸಿದ್ದ ಮಾಸ್ಕ್​ನ್ನು ನಮ್ಮ ಮನೆ ಬಳಿ ಎಸೆದಿದ್ದಾರೆ ಎಂದು ಅವರ ಪಕ್ಕದ ಮನೆಯ 62 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಫೂಟೇಜ್​ನ ಫೋಟೋಗಳನ್ನೂ ಪೊಲೀಸರಿಗೆ ನೀಡಿದ್ದರು.

    ಆದರೆ ಇಂದು ತಾವು ನೀಡಿದ ದೂರನ್ನು ಮಹಿಳೆ ವಾಪಸ್​ ಪಡೆದಿದ್ದಾರೆ. ಷಣ್ಮುಗಂ ಅವರು ನಮ್ಮ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ, ನಮ್ಮ ಕಟ್ಟಡದಲ್ಲಿದ್ದ ಅನೇಕರು ಬಂದು, ಈ ವಿಷಯವನ್ನು ಇಲ್ಲಿಗೇ ಬಿಟ್ಟು ಬಿಡಿ. ಮುಂದುವರಿಸಬೇಡಿ ಎಂದು ನಮಗೇ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ದೂರು ಹಿಂಪಡೆಯುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ.

    ಮಹಿಳೆ ದೂರು ಹಿಂಪಡೆಯುವುದಾಗಿ ಬರೆದುಕೊಟ್ಟಿದ್ದಾರೆ. ಆದರೆ ನಾವು ಎಫ್​ಐಆರ್​ ದಾಖಲಿಸಿಯಾಗಿದ್ದು, ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ₹100 ಲಂಚ ಕೊಡದ ಹುಡುಗನಿಗೆ ಸಿಕ್ಕಿತು ಮನೆ, ಉಚಿತ ಶಿಕ್ಷಣ!

    ಮಹಿಳೆ ದೂರು ಕೊಟ್ಟರೂ ಪೊಲೀಸರು ಸುಮ್ಮನಿದ್ದರು. ಆದರೆ ಮಹಿಳೆಯ ಸಂಬಂಧಿಯೋರ್ವ ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ಅಪಾರ ಖಂಡನೆ ವ್ಯಕ್ತವಾಗಿತ್ತು. ಹಾಗಾಗಿ ಜುಲೈ 25ರಂದು ಪೊಲೀಸರು ಷಣ್ಮುಗಂ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು.

    ಡಾ. ಸುಬ್ಬಯ್ಯ ಈ ಆರೋಪವನ್ನು ತಳ್ಳಿ ಹಾಕಿದ್ದರು. ನಾನು ಯಾವತ್ತೂ ಅಲ್ಲಿಗೆ ಕಸ ಎಸೆದಿಲ್ಲ…ಮೂತ್ರ ವಿಸರ್ಜನೆಯನ್ನೂ ಮಾಡಿಲ್ಲ. ಸಿಸಿಟಿವಿ ಫೂಟೇಜ್​ನ ಫೋಟೋಗಳು ಎಡಿಟ್​ ಮಾಡಿದವುಗಳು ಎಂದು ಹೇಳಿದ್ದರು.  ಸುಬ್ಬಯ್ಯ ಅವರಿಗೆ ಅಪಕೀರ್ತಿ ತರಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಎಬಿವಿಪಿ ಕಾರ್ಯದರ್ಶಿ ಹೇಳಿದ್ದರು. (ಏಜೆನ್ಸೀಸ್​)

    ಬಲು ರುಚಿ ಈ ‘ನ್ಯೂಡಲ್ಸ್​ ದೋಸಾ…’ಟ್ರೈ ಮಾಡಿ ನೋಡಿ..ಮಕ್ಕಳಿಗೂ ಕೊಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts