More

    VIDEO: ನೀರಿನೊಳಗೆ ಕುಳಿತ ಯುವಕನ ಕೈಯ್ಯಲ್ಲಿ ರೂಬಿಕ್​​ ಕ್ಯೂಬ್ಸ್​; ಆತನ ಹೆಸರು ಈಗ ಗಿನ್ನೀಸ್​ ದಾಖಲೆಯಲ್ಲಿ

    ರೂಬಿಕ್​ ಕ್ಯೂಬ್ಸ್​ ಆಟ ಒಂದು ಒಗಟಿನಂತೆ. ಆರೂ ಆಯಾಮಗಳಲ್ಲಿ ಒಂದೇ ತರಹದ ಬಣ್ಣ ಹೊಂದಿಸುವುದು ದೊಡ್ಡ ಸವಾಲು. ಅದೆಷ್ಟೋ ಜನ ಈ ಆಟವನ್ನು ಆಡುತ್ತಾರೆ. ಒಂದೆರಡು ಆಯಾಮಗಳನ್ನು ಸರಿಪಡಿಸುವವರು ತುಂಬ ಜನರಿದ್ದಾರೆ. ಹಾಗೇ ಕೆಲವರು ಆರೂ ಬದಿಗಳನ್ನೂ ಸೆಟ್​ ಮಾಡುವ ಜಾಣ್ಮೆಯುಳ್ಳವರನ್ನೂ ನೋಡಿದ್ದೇವೆ.
    ಆದರೆ ಇಲ್ಲೊಬ್ಬ ಯುವಕ ಈ ರೂಬಿಕ್​ ಕ್ಯೂಬ್​​ನ್ನು ಅತ್ಯಂತ ವಿಭಿನ್ನವಾಗಿ ಆಡಿ, ಗಿನ್ನೀಸ್​ ವಿಶ್ವ ದಾಖಲೆ ಪಟ್ಟಿ ಸೇರಿದ್ದಾನೆ.

    ಇಳಯರಾಮ್​ ಶೇಖರ್​ ಎಂಬಾತ25 ವರ್ಷದ ಯುವಕ. ಇವರು ಅಂಡರ್​ ವಾಟರ್​ನಲ್ಲಿ ಉಸಿರು ಕಟ್ಟಿಕೊಂಡು ಕುಳಿತು ಆರು ರೂಬಿಕ್​ ಕ್ಯೂಬ್​ನ ಆರೂ ಆಯಾಮಗಳನ್ನು ಸರಿಯಾಗಿ ಹೊಂದಿಸಿದ್ದಾರೆ.
    ಎರಡು ನಿಮಿಷ 17 ಸೆಕೆಂಡ್​​ಗಳ ಕಾಲ ಉಸಿರುಕಟ್ಟಿ ನೀರಿನೊಳಗೆ ಕುಳಿತು ಟಾಸ್ಕ್​ ಪೂರ್ಣಗೊಳಿಸಿದ ಇವರ ಚಾಕಚಕ್ಯತೆಗೆ ಇದೀಗ ಜಗತ್ತೇ ಬೆರಗಾಗಿದೆ. ಇದನ್ನೂ ಓದಿ: ಎರಡು ಸಲ ಮೃತಪಟ್ಟ 12 ವರ್ಷದ ಬಾಲಕಿ; ಶವಕ್ಕೆ ಸ್ನಾನ ಮಾಡಿಸುವಾಗ ಬೆಚ್ಚಿಬಿದ್ದ ಪಾಲಕರು

    2013ರಿಂದಲೂ ಶೇಖರ್ ರೂಬಿಕ್​ ಕ್ಯೂಬ್ಸ್​ ಹೊಂದಿಸುವ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ನೀರಿನೊಳಗೆ ದೀರ್ಘ ಸಮಯದವರೆಗೆ ಉಸಿರು ಹಿಡಿದು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಯೋಗಾಭ್ಯಾಸದ ಮೂಲಕ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.

    ಕೆಲವು ತಿಂಗಳುಗಳ ಹಿಂದೆ ಮುಂಬೈನ ನಿವಾಸಿಯಾದ ಚಿನ್ಮಯ್​ ಪ್ರಭು ಎಂಬುವರು ಅಂಡರ್​ವಾಟರ್​​ನಲ್ಲಿ ಕುಳಿತು 48 ಸೆಕೆಂಡ್​ಗಳಲ್ಲಿ ಪಿರಮಿಂಕ್ಸ್​ನ್ನು ಹೊಂದಿಸುವ ಮೂಲಕ ಗಿನ್ನೀಸ್​ ವಿಶ್ವ ದಾಖಲೆ ಪಟ್ಟಿ ಸೇರಿದ್ದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts