More

    ಐಫೆಲ್​ ಟವರ್​ಗಿಂತ ಎತ್ತರವಾದ ರೈಲ್ವೆ ಮೇಲ್ಸೇತುವೆ ಮೇಲೆ 2022ರಲ್ಲಿ ರೈಲು ಸಂಚಾರ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಚೆನಾಬ್​ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಐಫೆಲ್​ ಟವರ್​ಗಿಂತ ಎತ್ತರವಾದ ರೈಲ್ವೆ ಮೇಲ್ಸೇತುವೆ 2021ರ ವೇಳೆಗೆ ಸಿದ್ಧವಾಗುವ ನಿರೀಕ್ಷೆ ಇದೆ. 2022ರ ವೇಳೆಗೆ ಈ ಸೇತುವೆಯ ಮೇಲೆ ರೈಲು ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ನದಿಯ ದಡ ಮಟ್ಟದಿಂದ 359 ಮೀಟರ್​ ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಇದರ ಈ ಸೇತುವೆ 467 ಮೀಟರ್​ ಉದ್ದವಿದೆ. ದೆಹಲಿಯಲ್ಲಿರುವ ಕುತುಬ್​ ಮಿನಾರ್​ 72 ಮೀಟರ್​ ಎತ್ತರವಾಗಿದ್ದರೆ, ಪ್ಯಾರಿಸ್​ನ ಐಫೆಲ್​ ಟವರ್​ 324 ಮೀಟರ್​ ಎತ್ತರವಿದೆ. ಹಾಗಾಗಿ ಐಫೆಲ್​ ಟವರ್​ಗಿಂತ ಎತ್ತರವಾಗಿರುವ ರೈಲ್ವೆ ಮೇಲ್ಸೇತುವೆ ಎಂಬ ಹೆಗ್ಗಳಿಕೆ ಇದ್ದರದ್ದಾಗಿದೆ.

    ಇದು ವಿಶ್ವದ ಅತಿಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಗಂಟೆಗೆ 266 ಕಿ.ಮೀ. ವೇಗವಾಗಿ ಬೀಸುವ ಗಾಳಿಯನ್ನು ತಡೆದುಕೊಳ್ಳುವ ರೀತಿ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ರಜಪೂತ್​ ಬಳಸುತ್ತಿದ್ದ ಸಿಮ್​ ಕಾರ್ಡ್​ಗಳು ಅವರ ಹೆಸರಿನಲ್ಲಿ ಇರಲಿಲ್ಲ…

    ಕಳೆದ ವರ್ಷದಿಂದ ಈ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾಮಗಾರಿಗಳು 2021ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆನಂತರದಲ್ಲಿ ವಿವಿಧ ಬಗೆಯ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಬಳಿಕ ಇದನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಹಾಗಾಗಿ 2022ರ ವೇಳೆಗೆ ಈ ಸೇತುವೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಇತರೆ ಪ್ರದೇಶಗಳೊಂದಿಗೆ ಸಂಪರ್ಕ ಒದಗಿಸುವ ನಿರೀಕ್ಷೆ ಇದೆ.

    ಈ ರೈಲು ಮಾರ್ಗದಲ್ಲಿ ಬರುವ ಉಧಂಪುರ-ಕಾಟ್ರಾ (25 ಕಿ.ಮೀ), ಬನಿಹಾಲ್​-ಖಾಜಿಗುಂಡ್​ (18 ಕಿ.ಮೀ.) ಮತ್ತು ಖಾಜಿಗುಂಡ್​-ಬಾರಾಮುಲ್ಲಾ (118 ಕಿ.ಮೀ.) ಅಂತರದ ಮಾರ್ಗಗಳಲ್ಲಿ ಈಗಾಗಲೆ ರೈಲು ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಬಾಕಿಯಿರುವ ಕಟ್ರಾ-ಬನಿಹಾಲ್​ (111 ಕಿ.ಮೀ.) ಮಾರ್ಗ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಮಾರ್ಗ ಕೂಡ 2022ರ ಡಿಸೆಂಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಒಟ್ಟಾರೆ 174 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, ಇದರ ಪೈಕಿ 126 ಕಿ.ಮೀ. ಉದ್ದದ ಸುರಂಗ ಮಾರ್ಗ ಸಿದ್ಧವಾಗಿದೆ.

    ಕಾಂಗ್ರೆಸ್‌ ಮುಖಂಡನ ಫೋನ್‌ನಿಂದ ಅಶ್ಲೀಲ ಫೋಟೋ ಹರಿದಾಟ- ಅಲ್ಲೋಲ ಕಲ್ಲೋಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts