More

    ರಸ್ತೆ ಬದಿಯಲ್ಲೇ ಹೊಂಚು ಹಾಕುವ ಚಿರತೆ, ಬೈಕ್​ ಸವಾರರ ಮೇಲೆ ದಾಳಿ!

    ಚನ್ನಪಟ್ಟಣ: ರಸ್ತೆ ಬದಿಯಲ್ಲೇ ಹೊಂಚು ಹಾಕುತ್ತಿದ್ದ ಚಿರತೆಯೊಂದು ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

    ಮದ್ದೂರು ಮೂಲದ ಮೂವರು ಕಬ್ಬಾಳು ಗ್ರಾಮದಿಂದ ಚನ್ನಪಟ್ಟಣಕ್ಕೆ ಭಾನುವಾರ ಸಂಜೆ ಬೈಕ್​ನಲ್ಲಿ ತೆರಳುತ್ತಿದ್ದರು. ಹನಿಯೂರು ಸಮೀಪ ಬೈಕ್​ ಮೇಲೆ ಚಿರತೆ ಎಗರಿದೆ.

    ಇದನ್ನೂ ಓದಿರಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ, ಚಿಕಿತ್ಸೆ ಸಿಗದೆ 7 ತಿಂಗಳ ಮಗು ಸಾವು

    ಚಿರತೆ ದಾಳಿಯಿಂದಾಗಿ ಬೈಕ್​ ಸವಾರರು ಕೆಳಗೆ ಬಿದ್ದರು. ಆಗಲೂ ಚಿರತೆ ದಾಳಿಗೆ ಯತ್ನಿಸಿದ್ದು, ಈ ಮೂವರ ಮತ್ತು ಸ್ಥಳೀಯರ ಚೀರಾಟಕ್ಕೆ ಚಿರತೆ ಸ್ಥಳದಿಂದ ಪೊದೆಯೊಕ್ಕಿತು. ಇಬ್ಬರ ತಲೆಭಾಗಕ್ಕೆ ಪೆಟ್ಟು ಬಿದ್ದಿದೆ. ಸ್ಥಳೀಯರ ಆಗಮನದಿಂದ ದುರಂತ ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ತಾಲೂಕಿನ ಗಡಿ ಗ್ರಾಮ ಇಗ್ಗಲೂರಿನಲ್ಲಿ ನಾಗರಾಜು ಅವರ ಸೀಮೆಹಸುವನ್ನು ಚಿರತೆ ಕೊಂದು ಹಾಕಿ ದೇಹದ ಕೆಲ ಭಾಗವನ್ನು ತಿಂದಿದೆ. ತಾಲೂಕು ಮಾತ್ರವಲ್ಲ, ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಸಾಕಷ್ಟು ಸಾವು-ನೋವು ಸಂಭವಿಸಿದೆ.

    ಮನೆಯ ಪಡಸಾಲೆಯಲ್ಲಿ ಮಲಗಿದ್ದ 3 ವರ್ಷದ ಬಾಲಕ, ಮನೆಯ ಹಿತ್ತಲಲ್ಲಿ ಇದ್ದ ವೃದ್ಧೆಯನ್ನು ಚಿರತೆ ತಿಂದು ಹಾಕಿದ್ದ ಘಟನೆ ಇನ್ನೂ ಹಸಿಯಾಗೆ ಇದೆ. ಇದೀಗ ಬೈಕ್​ ಸವಾರರ ಮೇಲೂ ಚಿರತೆ ದಾಳಿ ಮಾಡುತ್ತಿರುವುದು ಸ್ಥಳೀಯರಲ್ಲಿ ಜೀವಭಯ ಆವರಿಸಿದೆ.

    ಇಗ್ಗಲೂರು ಸಮೀಪದ ಚಿಕ್ಕಬೋರೆಗೌಡನದೊಡ್ಡಿ ಬಳಿ ಈಗಾಗಲೇ ಚಿರತೆ ಸೆರೆಗಾಗಿ ಬೋನು ಇಡಲಾಗಿದೆ. ಆ ಭಾಗದಲ್ಲಿ ಕೆಲದಿನಗಳಿಂದ ಚಿರತೆ ಕಾಟದ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಇದೀಗ, ಇಗ್ಗಲೂರು ಗ್ರಾಮದ ಬಳಿಯೂ ಚಿರತೆ ಸೆರೆಗಾಗಿ ಬೋನು ಇಡಲಾಗುವುದು. ಸಾರ್ವಜನಿಕರು ಆತಂಕಪಡದೆ ಇಲಾಖೆ ಜತೆ ಸಹಕರಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಮಹಮದ್​ ಮನ್ಸೂರ್​ ತಿಳಿಸಿದ್ದಾರೆ.

    ಒಂದು ರೂಪಾಯಿ ಅವ್ಯವಹಾರ ಸಾಬೀತು ಪಡಿಸಿದ್ರೆ ರಾಜೀನಾಮೆ; ಶ್ರೀರಾಮುಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts