More

    ಕಪ್ಪತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ

    ಮುಂಡರಗಿ: ತಾಲೂಕಿನ ಡೋಣಿ ಗ್ರಾಮದಿಂದ ಕಪ್ಪತಗುಡ್ಡ ಅರಣ್ಯಕ್ಕೆ ತೆರಳುವ ಭಾಗದಲ್ಲಿ ಚಿರತೆ ಸೋಮವಾರ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

    ಡೋಣಿಯಿಂದ ಕಪ್ಪತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನ ಭಾಗಕ್ಕೆ ತೆರಳುವ ಅರಣ್ಯ ಪ್ರದೇಶದಲ್ಲಿ ಗಾಳಿ ವಿದ್ಯುತ್ ಯಂತ್ರದ ಸಿಬ್ಬಂದಿ ಕಾರ್​ನಲ್ಲಿ ತೆರಳುತ್ತಿರುವಾಗ ಕಾಣಿಸಿಕೊಂಡ ಚಿರತೆಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡೋಣಿ ಭಾಗದಲ್ಲಿ ಈ ಚಿರತೆ ಪದೇಪದೆ ಜನರಿಗೆ ಕಾಣಿಸಿಕೊಳ್ಳುತ್ತಿದೆ. ಕಪ್ಪತಗುಡ್ಡದ ಅರಣ್ಯ ಪ್ರದೇಶದ ಹಲವು ಭಾಗದಲ್ಲಿ ಆಗಾಗ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಆ ಭಾಗದಲ್ಲಿ ಸಂಚರಿಸಲು ಜನರು ಆತಂಕ ಪಡುವಂತಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಆರ್​ಎಫ್​ಒ ವೀರಣ್ಣ ಮರಿಬಸಣ್ಣವರ ಅವರು, ಡೋಣಿ, ಕಡಕೋಳ, ಹಾರೋಗೇರಿ, ಹೀರೇವಡ್ಡಟ್ಟಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಸುಮಾರು 3ರಿಂದ 4 ಚಿರತೆಗಳು ಇವೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಆಗಾಗ ಕಾಣಿಸಿಕೊಳ್ಳುತ್ತವೆ. ಹಲವು ವರ್ಷಗಳಿಂದ ಚಿರತೆ ಈ ಭಾಗದಲ್ಲಿದ್ದು ಯಾರಿಗೂ ತೊಂದರೆ ನೀಡಿಲ್ಲ. ಜನರು ಆತಂಕ ಪಡಬೇಕಿಲ್ಲ, ಸುಮ್ಮನೆ ಅರಣ್ಯದೊಳಗಡೆ ಹೋಗಬಾರದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts