More

    ಚಿಲ್ಲರೆ ಕೇಳುವ ನೆಪದಲ್ಲಿ ವಂಚನೆ

    ಕೋಟ: ದೊಡ್ಡ ಮೌಲ್ಯದ ನೋಟನ್ನು ನೀಡಿ ಚಿಲ್ಲರೆ ಮಾಡಿಸುವ ನೆಪದಲ್ಲಿ ಅಪರಿಚಿತ ತಂಡವೊಂದು ಅಂಗಡಿ ಮಾಲೀಕರಿಗೆ ವಂಚಿಸಿದ ಪ್ರಕರಣ ತೆಕ್ಕಟ್ಟೆ ಪೇಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ತೆಕ್ಕಟ್ಟೆಯ ಜವುಳಿ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಅಪರಿಚಿತರ ತಂಡ 2 ಸಾವಿರ ಮುಖಬೆಲೆಯ ಐದು ನೋಟನ್ನು ನೀಡಿ, ಅದಕ್ಕೆ ಸರಿಸಮನಾಗಿ 100 ರೂ. ಮುಖಬೆಲೆಯ ಚಿಲ್ಲರೆ ಕೊಡುವಂತೆ ಕೇಳುತ್ತಾರೆ. ಮಾಲೀಕ 100 ರೂ. ಮುಖಬೆಲೆ ಬದಲಾಗಿ 500 ರೂ. ಮುಖಬೆಲೆಯ 20 ರೂ. ನೋಟುಗಳನ್ನು ಖದೀಮರಿಗೆ ನೀಡಿದ್ದಾನೆ. ಅಂಗಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಇದ್ದುದನ್ನು ಗಮನಿಸಿದ ಖದೀಮರ ತಂಡ ಮಾಲೀಕ ನೀಡಿದ ನೋಟಿನ ಜತೆ, ತಾವು ನೀಡಿದ್ದ 2ಸಾವಿರ ಮುಖಬೆಲೆಯ ಐದು ನೋಟನ್ನೂ ಮರಳಿ ಪಡೆದು ಸ್ಥಳದಿಂದ ಕಾಲ್ಕಿತ್ತಿದೆ.

    ಆಟೋದಲ್ಲಿ ಆಗಮನ: ಈ ತಂಡದ ಸದಸ್ಯರು ಹೆಚ್ಚಾಗಿ ಜನರಿರುವ ಮಳಿಗೆಯನ್ನೇ ಆರಿಸಿಕೊಂಡು ಆಟೋದಲ್ಲಿ ಬರುತ್ತಾರೆ. ಅಂಗಡಿ ಅನತಿ ದೂರದಲ್ಲಿ ಆಟೋ ನಿಲ್ಲಿಸಿ ಸಾಮಾನ್ಯ ಗ್ರಾಹಕರಂತೆ ಅಂಗಡಿ ಪ್ರವೇಶಿಸಿ ಚಿಲ್ಲರೆ ಕೇಳುವ ನೆಪದಲ್ಲಿ ವಂಚಿಸಿದ್ದಾರೆ. ಜವುಳಿ ಅಂಗಡಿಯಲ್ಲಿ ನಡೆದಿರುವ ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಜವುಳಿ ಅಂಗಡಿ ಮಾಲೀಕರು ಸ್ಥಳೀಯ ಠಾಣೆ ಗಮನಕ್ಕೆ ತಂದಿದ್ದಾರೆ.

    Cheating, Shopkeepers, notes, ಅಂಗಡಿ, ಮಾಲೀಕ, ಚಿಲ್ಲರೆ, ನೋಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts