More

    ಚೀನಾದಿಂದಲೇ ಕಾಟ ಕೊಡುತ್ತಿದ್ದ ಖದೀಮರು; ಸಾಲ-ಹೂಡಿಕೆ ಆ್ಯಪ್​ಗಳ ಮೂಲಕ ಕಾರ್ಯಾಚರಣೆ, ಕೋಟ್ಯಂತರ ರೂ. ಜಪ್ತಿ..

    ಬೆಂಗಳೂರು: ಚೀನಾ ಸಾಲದ ಆ್ಯಪ್ ಮತ್ತು ಹೂಡಿಕೆ ಆ್ಯಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್​​ನಲ್ಲಿನ 6.17 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

    ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಕೊಡುವುದಾಗಿ ಹೇಳಿ ಆ್ಯಪ್‌ನಲ್ಲಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಚೀನಾ ಆ್ಯಪ್‌ಗಳು. ಇದಲ್ಲದೆ, ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷ ಒಡ್ಡಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಹೂಡಿಕೆ ಆ್ಯಪ್‌ಗಳ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್‌ಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿವೆ.
    ಕೋಟ್ಯಂತರ ರೂ. ಅಕ್ರಮ ವಹಿವಾಟ ನಡೆದಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೇರೆಗೆ ಜಾರಿ ನಿರ್ದೇಶನಾಲಯ ಪ್ರತ್ಯೇಕ ತನಿಖೆ ಕೈಗೊಂಡು ಸಂಬಂಧಪಟ್ಟ ಚೀನಿ ಆ್ಯಪ್‌ಗಳ ಕಂಪನಿಯ ಮತ್ತು ಅಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿನ ಹಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ಲಾಕ್‌ಡೌನ್‌ನಲ್ಲಿ ಆರ್ಥಿಕ ಸಂಕಷ್ಟ ಮತ್ತು ನಿರುದ್ಯೋಗ ಸಮಸ್ಯೆ ಎದುರಾಗಿತ್ತು. ಇದನ್ನೇ ಲಾಭ ಮಾಡಿಕೊಂಡ ಚೀನಾ ಪ್ರಜೆಗಳು, ಭಾರತದಲ್ಲಿ ಸ್ಥಳೀಯರನ್ನು ಬಳಸಿಕೊಂಡು ಅವರ ಹೆಸರಿನಲ್ಲಿ ಹಣಕಾಸು ವಹಿವಾಟು ಕಂಪನಿ ತೆರೆದು ಸಾಲ ಮತ್ತು ಹೂಡಿಕೆ ಆ್ಯಪ್‌ಗಳನ್ನು ಅಭಿವೃದ್ಧಿ ಪಡಿಸಿ ಪ್ರಚಾರ ಮಾಡಿದರು.

    ಉದಾಹರಣೆಗೆ ಕ್ಯಾಷ್ ಮಾಸ್ಟರ್, ಕ್ರೇಜಿ ರುಪೀ, ಕ್ಯಾಷಿನ್, ರುಪೇ ಮೆನು ಇತ್ಯಾದಿ ಮೊಬೈಲ್ ಆ್ಯಪ್‌ಗಳು. ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಒಟಿಪಿ ನಮೂದು ಮಾಡಿದರೆ ಸಾಕು 5 ಸಾವಿರದಿಂದ 1 ಲಕ್ಷ ರೂ. ಸಾಲ ಸಿಗುತ್ತಿತ್ತು. ಕಂಪನಿ ತೆರೆಯಲು ಸ್ಥಳೀಯ ಲೆಕ್ಕಪರಿಶೋಧಕರ ಸಹಾಯ ಪಡೆದು, ಭಾರತೀಯ ಪ್ರಜೆಗಳ ಕೆವೈಸಿ ಮಾಡಿಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದರು.

    ಕಂಪನಿ ಮತ್ತು ಬ್ಯಾಂಕ್ ಖಾತೆಗಳನ್ನು ಚೀನಾದಲ್ಲಿ ಕುಳಿತು ಚೀನಿಯರು ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಸುಲಭವಾಗಿ ಸಾಲ ಕೊಟ್ಟು ಅವರಿಂದ ದುಬಾರಿ ಬಡ್ಡಿ ಮತ್ತು ಪ್ರಕ್ರಿಯೆ ಶುಲ್ಕ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಕೊಡದೆ ಇದ್ದರೆ ಅವರ ಮೊಬೈಲ್‌ಫೋನ್​ನಿಂದ ಡೇಟಾ ಕಳವು ಮಾಡಿ, ಕಾಂಟ್ಯಾಕ್ಟ್​​ನಲ್ಲಿರುವ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ನಿಂದಿಸಿ ಕಿರುಕುಳ ಕೊಡುತ್ತಿದ್ದರು.

    ಮತ್ತೊಂದೆಡೆ ದುಬಾರಿ ಬಡ್ಡಿ ಕೊಡುವುದಾಗಿ ಆ್ಯಪ್‌ನಲ್ಲೇ ಹಣ ಹೂಡಿಕೆ ಮಾಡಿಸಿಕೊಂಡು ಜನರಿಗೆ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಸುಲಿಗೆ ಮಾಡಿದ ಹಣವನ್ನು ಅಕ್ರಮವಾಗಿ ವಿದೇಶಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟಕದಲ್ಲಿದೆ ‘ನರೇಂದ್ರ ಮೋದಿ ನಿಲಯ’!; ಇಲ್ಲಿದೆ ವಿವರ…

    ರಾಜಿ ಮಾಡಿಸಿದ್ದರೂ ಆತ್ಮಹತ್ಯೆ; ಪತಿಯ ಮನೆಯಲ್ಲಿ ಪತ್ನಿಯ ದುರಂತ ಅಂತ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts