More

    ನಾಪೋಕ್ಲುವಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

    ನಾಪೋಕ್ಲು: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮಂಗಳವಾರ ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇರುವೈಲು ರಘುರಾಮ ಆಸ್ರಣ್ಣ ಮತ್ತು ಲೀಲಾ ಆಸ್ರಣ್ಣ ದತ್ತಿನಿದಿ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಉದ್ಘಾಟಿಸಿದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಪರಶುರಾಮ ಅವರು ಕನ್ನಡ ನಾಡು ನುಡಿ ಪರಂಪರೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಹಾಗೂ ಸಾಹಿತಿ ಬಾರಿಯಂಡ ಜೋಯಪ್ಪ ಕೊಡಗಿನ ಆರ್ಥಿಕ ಸ್ಥಿತಿ ಅಂದು-ಇಂದು ಕುರಿತು ಉಪನ್ಯಾಸ ನೀಡಿದರು.
    ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ಲು ನವೀನ್ ಮಾತನಾಡಿ, ದತ್ತಿನಿಧಿ ಹಾಗೂ ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಮೂಲಕ ಕನ್ನಡದ ಬಗ್ಗೆ ಒಲವು ತೋರಿಸಬೇಕೆಂದರು. ನಿವೃತ್ತ ಉಪನ್ಯಾಸಕ ಕಸ್ತೂರಿ ಗೋವಿಂದಮಯ್ಯ, ಬೈನೆರವನ ಯಶೋದಿನಿ, ಮುಕ್ಕಾಟಿ ಪುಷ್ಪ ಗಣೇಶ್,ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುದಿಯನೆರವನ ರಿಶೀತ್ ಮಾದಯ್ಯ, ಉಪನ್ಯಾಸಕರಾದ ಎನ್.ಎಸ್. ವಾಣಿ, ಶ್ರೀನಿವಾಸ ಹಾಗೂ ಯೋಗಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts