More

    ಕಸಾಪದಿಂದ ದತ್ತಿ ಉಪನ್ಯಾಸ

    ವಿಜಯಪುರ: ನಗರದ ಟಕ್ಕೆಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಹಾಂತ ಗುಲಗಂಜಿ ಹಾಗೂ ಗೌರಮ್ಮಾ ಕೊಟ್ರಬಸಯ್ಯ ತಂಬ್ರಹಳ್ಳಿಮಠ ಹೆಸರಲ್ಲಿ ಸೋಮವಾರ ದತ್ತಿ ಉಪನ್ಯಾಸ ನಡೆಯಿತು.

    ಶಾಂತವೀರ ಪಪೂ ಕಾಲೇಜಿನ ಉಪನ್ಯಾಸಕ ಪ್ರೊ.ಮಲ್ಲಿಕಾರ್ಜುನ ಅವಟಿ ಉಪನ್ಯಾಸ ನೀಡುತ್ತಾ, ಸಾಹಿತ್ಯ ಪರ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿರಬೇಕು. ಸಮ್ಮೇಳನಗಳು ಅರ್ಥಪೂರ್ಣವಾಗಿ ಜರುಗಬೇಕು. ಸಮ್ಮೇಳನಗಳು ವ್ಯವಸ್ಥೆಯ ಸಾಧಕ ಬಾಧಕಗಳಿಗೆ ಪರಿಹಾರ ಕಂಡುಕೊಳ್ಳುತ್ತವೆ. ಸಾಹಿತಿಗಳು, ವಿದ್ವಾಂಸರು, ಕೃಷಿಕರು, ಜಾನಪದ ಚಿಂತಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಸಹಕಾರಿ ಎಂದರು.

    ಪ್ರೊ. ಬಸವರಾಜ ಕುಂಬಾರ ಮಾತನಾಡಿ, ಈ ದೇಶದಲ್ಲಿ ಸಂತ ಕನಕದಾಸ, ಕಬೀರದಾಸ, ತುಕಾರಾಮ ಮುಂತಾದವರು ತಮ್ಮ ಸರಳತೆ, ಮಾನವೀಯ ದೃಷ್ಟಿಯಿಂದ ಸಮಾಜ ಕಲ್ಯಾಣ ಮಾಡುವ ಸಂಕಲ್ಪ ಮಾಡಿದರು. ನುಡಿದಂತೆ ನಡೆ ಅವರದಾಗಿತ್ತು. ಪವಿತ್ರ ಹಾಗೂ ನಿರ್ಮಲವಾದ ಮನಸ್ಸು ಅವರದಾಗಿತ್ತು. ಆಧ್ಯಾತ್ಮಿಕ ಪ್ರಪಂಚ ಕಟ್ಟುವಲ್ಲಿ ಅವರ ಪಾತ್ರ ಪ್ರಮುಖ ಎಂದರು.

    ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಅಧ್ಯಾಪಕಿ ಕಮಲಾ ಮುರಾಳ ಉದ್ಘಾಟಿಸಿದರು. ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು.

    ವಿಧ್ಯಾರ್ಥಿನಿಲಯ ಪಾಲಕ ಬಸವರಾಜ ಸಾವಳಗಿ ಕವನ ವಾಚಿಸಿದರು. ಮೆಹೆತಾಬ ಕಡಕೋಳ ಮಡಿವಾಳೇಶನ ತತ್ವ ಪದ ಹಾಡಿ ರಂಜಿಸಿದರು. ಚನ್ನಬಸಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts