More

    ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

    ಬೆಂಗಳೂರು: ಸ್ಟಾರ್​ ನಟ ನಟಿಯರ ಮಕ್ಕಳು ಹುಟ್ಟಿನಿಂದಲೇ ಸುದ್ದಿ ಮಾಧ್ಯಮಕ್ಕೆ ಬರುವಂತವರು. ಅವರು ಏನೇ ಮಾಡಿದರೂ ಅದೊಂದು ಸುದ್ದಿಯೇ. ಅಂತದರಲ್ಲಿ ನಮ್ಮ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಗಳು ತಮ್ಮಚಿಕ್ಕ ವಯಸ್ಸಿಗೇ ಚೆಫ್​ ಆಗಿ ಬದಲಾಗಿಬಿಟ್ಟಿದ್ದಾರೆ. ಮಗಳು ಅಡುಗೆ ಮಾಡುವ ವಿಡಿಯೋವನ್ನು ಗಣೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಟಾಯ್ಲೆಟ್​ನಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ! ಗರ್ಭಿಣಿ ಎನ್ನುವ ವಿಚಾರ ಅವಳಿಗೇ ಗೊತ್ತಿರಲಿಲ್ಲ

    ಗಣೇಶ್​ ಅವರ ಮಗಳು ಚರಿತ್ರಿಯಾ ಅಡುಗೆ ಮನೆಯಲ್ಲಿ ಏನೋ ಖಾದ್ಯ ತಯಾರಿಸುತ್ತಿದ್ದಾರೆ. ಅದರ ಬಗ್ಗೆ ಇಂಗ್ಲಿಷ್​ನಲ್ಲಿ ಒಂದಿಷ್ಟು ವಿಶ್ಲೇಷಣೆಯನ್ನೂ ಕೊಡುತ್ತಾರೆ. ಮೊದಲು ನೋಡುವವರಿಗೆ ಇದ್ಯಾರೋ ಯೂಟ್ಯೂಬ್​ ಇನ್​ಫ್ಲೂಯೆನ್ಸರ್​ ಇರಬಹುದು ಎನ್ನುವಷ್ಟರ ಮಟ್ಟಿಗಿದೆ ಈ ವಿಡಿಯೋ. ಮಗಳ ಇಂಗ್ಲಿಷ್​ ವ್ಯಾಖ್ಯಾನ ಮುಗಿದ ಮೇಲೆ ಗಣೇಶ್​, ‘ಮಗಳೇ, ಕರೆಕ್ಟಾಗಿ ಹೇಳು ಏನು ಮಾಡ್ತಿದ್ದೀಯ’ ಅಂತ ಕೇಳುತ್ತಾರೆ. ಆಗ ಆಮ್ಲೆಟ್​ ಮಾಡುತ್ತಿರುವುದಾಗಿ ಚರಿತ್ರಿಯಾ ತಿಳಿಸುತ್ತಾರೆ.

    ಇದನ್ನೂ ಓದಿ: ರಸ್ತೆ ಅಭಿವೃದ್ಧಿಗೆ 12.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧ

    ಈ ವಿಡಿಯೋದಲ್ಲಿ ಇನ್ನೋರ್ವ ವಿಶೇಷ ವ್ಯಕ್ತಿಯೂ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ. ಗಣೇಶ್​ ಅವರ ಮಗ ವಿಹಾನ್​ ವಿಡಿಯೋಕ್ಕೆ ಡಿಸ್ಟರ್ಬ್​ ಮಾಡುವ ಸಲುವಾಗಿ ಮಧ್ಯೆ ಮಧ್ಯೆ ಮಾತನಾಡಿದ್ದಾರೆ. ಮಕ್ಕಳ ಜತೆಗಿನ ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಗಣೇಶ್​ ಇದೆಲ್ಲ ಯೂಟ್ಯೂಬ್​ ಪ್ರಭಾವ ಎಂದು ಹೇಳಿದ್ದಾರೆ. ಪುಟಾಣಿ ಚರಿತ್ರಿಯಾ ಅವರ ಆಮ್ಲೆಟ್​, ಗಣೇಶ್​ ಅವರ ಸ್ಮೈಲ್​ ಮತ್ತು ವಿಹಾನ್​ ಅವರ ಮುಗ್ಧ ಮಾತು ನಿಮ್ಮನ್ನು ಸೂರೆಗೊಳ್ಳುವುದು ಗ್ಯಾರಂಟಿ.

    ಟೀ ಪ್ರೇಮಿಗಳೇ ಎಚ್ಚರ! ಟೀ ಕುಡಿದು ನಾಶವಾಯಿತು ಪೂರ್ತಿ ಕುಟುಂಬ

    ಮಗಳ ಲಗ್ನ ಪತ್ರಿಕೆಯಲ್ಲೇ ಡೆತ್​ ನೋಟ್​ ಬರೆದಿಟ್ಟು ಸಾವಿಗೆ ಶರಣಾದ ಅಪ್ಪ; ಇಷ್ಟಕ್ಕೆಲ್ಲ ಕಾರಣವಾಗಿದ್ದು ವರನ ಮನೆಯವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts