More

    ಪಾತ್ರಗಳ ನಿರ್ವಹಣೆಯಿಂದ ಪೌರಾಣಿಕ ಕಥಾಹಂದರ

    ಕವಿತಾಳ: ಬಯಲಾಟಗಳಿಂದ ಪೌರಾಣಿಕ ಕತೆಗಳು ಪರಿಚಯವಾಗಲಿವೆ ಎಂದು ಜೆಡಿಎಸ್ ಪ್ರಮುಖರಾದ ರಾಜಶೇಖರ ಸಾಹುಕಾರ ಹೇಳಿದರು.

    ಇದನ್ನೂ ಓದಿ: ದರ್ಶನ್ ಜತೆ ಪೌರಾಣಿಕ ಸಿನಿಮಾ ಮಾಡುವ ಸುಳಿವು ಕೊಟ್ರಾ ತರುಣ್?

    ಸಮೀಪದ ತೊಪ್ಪಲದೊಡ್ಡಿ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ತೊಪ್ಪಲದೊಡ್ಡಿಯ ಕಲಾವಿದರು ಹಮ್ಮಿಕೊಂಡ ‘ರತಿ ಕಲ್ಯಾಣ ನಾಟಕ’ವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

    ಬಯಲಾಟಗಳು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುತ್ತವೆ. ರತಿಕಲ್ಯಾಣ ನಾಟಕದಲ್ಲಿ ಕೃಷ್ಣ, ಧರ್ಮರಾಜ, ಅರ್ಜುನ, ಕೌಡ್ಲಿಕ, ದ್ರೌಪದಿ, ಶ್ರೀದೇವಿಗಳ ಪಾತ್ರಗಳನ್ನು ಕಲಾವಿದರು ನಿರ್ವಹಿಸುವ ಮೂಲಕ ಪೌರಾಣಿಕ ಕಥೆ ಸಾರವನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುವರು. ಎಲ್ಲರೂ ನಾಟಕಗಳನ್ನು ಪ್ರೋತ್ಸಾಹಿಸಿ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ನಾಗನಗೌಡ ಮಾಪಾ, ಸೂಗಪ್ಪ ಮೇಟಿ, ನರಸಣ್ನ ಆದಿಮನಿ, ಅಕ್ಷಯ್ ಕುಮಾರ ದೇಸಾಯಿ, ಗೋವಿಂದಪ್ಪ ನಾಯಕ, ಹೊಂದಲಯ್ಯ ಚಟ್ನಿ, ಹನುಮಮತ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts