More

    ಕೆ.ಶೆಟ್ಟಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಚನ್ನೇಗೌಡ

    ಕೆ.ಎಂ.ದೊಡ್ಡಿ: ಸಮೀಪದ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಸಿ.ಚನ್ನೇಗೌಡ, ಉಪಾಧ್ಯಕ್ಷೆಯಾಗಿ ಪದ್ಮಮ್ಮ ಆಯ್ಕೆಯಾಗಿದ್ದಾರೆ.

    12 ನಿರ್ದೇಶಕರೊಳಗೊಂಡ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಿ.ಚನ್ನೇಗೌಡ 7 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಬೊಮ್ಮೇಗೌಡ (5 ಮತ) ವಿರುದ್ಧ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಸಹಕಾರ ಇಲಾಖೆಯ ಸುಧಾಕರ್ ವಿಜೇತ ಅಭ್ಯರ್ಥಿಗಳ ಆಯ್ಕೆ ಘೋಷಿಸಿದರು.

    ಸಿ.ಚನ್ನೇಗೌಡ ಮಾತನಾಡಿ, ಸಂಘದ ಅಭಿವೃದ್ಧಿಗೆ ಶ್ರಮಿಸುತ್ತ, ಸೂಕ್ತ ವೇಳೆಗೆ ರೈತರಿಗೆ ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಪೂರೈಸಲು ಹಾಗೂ ರೈತರ ಹಿತ ಕಾಯಲು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಮಾಣಿಕ ಶ್ರಮಿಸುತ್ತೇನೆ ಎಂದು ತಿಳಿಸಿದರು.

    ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎಚ್. ಇಂದಿರಾ, ಮರಿಸ್ವಾಮಿಗೌಡ, ತಿಮ್ಮರಾಜು, ಸಿ.ಎಚ್ ಶಿವಲಿಂಗೇಗೌಡ, ಮುಖಂಡರಾದ ಬಿ.ಹನುಮಂತೇಗೌಡ, ಅಂಗಡಿ ಶೇಖರ್, ಮೋಳ್ಳೆನಿಂಗೇಗೌಡ, ನಾಡಗೌಡ ಪುಟ್ಟರಾಮು, ಬೋರೇಗೌಡ, ರಘು ಬೋರೇಗೌಡ, ಕರಡಕೆರೆ ಮನು ಹಾಗೂ ಗಿರೀಶ್, ಸುನಿಲ್, ಕುಮಾರ್, ಚಿಕ್ಕಮರಿಗೌಡ, ಪ್ರೇಮ್‌ಕುಮಾರ್, ಮಂಜು, ಸುನಿಲ್ ಕುಮಾರ, ಕರಡಕೆರೆ ಮಹೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts