More

    ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಗುರಿ

    ಚನ್ನರಾಯಪಟ್ಟಣ: ಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿರುವ ತಾಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ ಅವರ ನಿವಾಸಕ್ಕೆ ಲೋಕೋಪಯೋಗಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶನಿವಾರ ಭೇಟಿ ನೀಡಿ ಉಪಹಾರ ಸ್ವೀಕರಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯೇ ಬಿಜೆಪಿ ಸರ್ಕಾರದ ಮುಂದಿರುವ ಪ್ರಮುಖ ಗುರಿಯಾಗಿದ್ದು, ಉತ್ತಮ ಯೋಜನೆಗಳನ್ನು ರೂಪಿಸುವ ಮೂಲಕ ರೈತ ಸಮುದಾಯವನ್ನು ಮೇಲೆತ್ತುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.

    ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಸಮಸ್ಯೆಗಳಿಲ್ಲದೆ ಸರ್ಕಾರವು ಸುಗಮವಾಗಿ ಸಾಗುತ್ತಿದೆ. ಸದ್ಯ ಹತ್ತು ಶಾಸಕರು ಸಚಿವರಾಗಿ ಮೊನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದು, ಖಾತೆ ಹಂಚಿಕೆಯೂ ನಿರ್ವಿಘ್ನವಾಗಿ ನೆರವೇರಲಿದೆ ಎಂದು ತಿಳಿಸಿದರು.

    ಹಾಸನ ಜಿಲ್ಲೆಯು ಧಾರ್ಮಿಕ ಕ್ಷೇತ್ರ ಹಾಗೂ ಉತ್ತಮ ಪ್ರಕೃತಿಯೊಂದಿಗೆ ಆಕರ್ಷಣೀಯ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಜನಪ್ರತಿನಿಧಿಗಳನ್ನು ಒಂದಲ್ಲ ಒಂದು ಕಾರ್ಯಕ್ರಮಗಳ ಮೂಲಕ ತನ್ನತ್ತ ಬರಮಾಡಿಕೊಳ್ಳುತ್ತಿದೆ. ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮವು ಯಶಸ್ಸಿನತ್ತ ಹೆಜ್ಜೆ ಇರಿಸಿದ್ದು, ನಮಗೂ ಆಹ್ವಾನವಿರುವುದರಿಂದ ತೆರಳುತಿದ್ದೇವೆ ಎಂದರು.

    ಜಿಲ್ಲೆಯ ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ತೆರಳುತಿದ್ದ ವೇಳೆ ಚನ್ನರಾಯಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷರು ಆಹ್ವಾನವಿತ್ತ ಹಿನ್ನೆಲೆಯಲ್ಲಿ ಆಗಮಿಸಿದ್ದು, ಉಪಹಾರ ಹಾಗೂ ಚಹ ಸವಿದಿದ್ದೇವೆ. ಇದು ಒಂದು ಸೌಜನ್ಯದ ಭೇಟಿಯಾಗಿದ್ದು, ಇಲ್ಲಿ ರಾಜಕೀಯ ಬೆಳವಣಿಗೆ ಅದೂ, ಇದೂ.. ಏನೂ ಇಲ್ಲ ಎಂದು ನಗೆಯ ಚಟಾಕಿ ಹಾರಿಸಿದರು.

    ಮುಂದಿನ ತಿಂಗಳ ಕೊನೆಯ ವಾರ ಚನ್ನರಾಯಪಟ್ಟಣಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದೇನೆ. ಸಾಧ್ಯವಾದಷ್ಟು ಸಮಯ ತಾಲೂಕು ವ್ಯಾಪ್ತಿ ಸಂಚರಿಸಿ ಸ್ಥಿತಿಗತಿಗಳೊಂದಿಗೆ ಸಮಸ್ಯೆಗಳನ್ನು ಪರಿಶೀಲಿಸಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ಇದಕ್ಕೂ ಮೊದಲು ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ತಾಲೂಕು ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

    ಹಾಸನ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ವಿಕ್ರಮ್, ತಾಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ಬಿಜೆಪಿ ಮುಖಂಡರಾದ ಶ್ರೀಕಂಠಪ್ಪ ಮತ್ತು ನಂಜುಂಡ ಮೈಮ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಣತಿ ಶೇಖರ್, ಯುವ ಮುಖಂಡರಾದ ಧರಣೀಶ್, ಜಗದೀಶ್ ಹಾಗೂ ಕಾರ್ಯಕರ್ತರಿದ್ದರು.

    8ಸಿಆರ್‌ಪಿ1
    ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿರುವ ತಾಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ ಅವರ ನಿವಾಸಕ್ಕೆ ಲೋಕೋಪಯೋಗಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರು ಶನಿವಾರ ಭೇಟಿ ನೀಡಿದರು, ವಿಜಯ್ ವಿಕ್ರಮ್, ಶಿವನಂಜೇಗೌಡ, ಶ್ರೀಕಂಠಪ್ಪ, ನಂಜುಂಡಮೈಮ್, ಅಣತಿ ಶೇಖರ್, ಧರಣೀಶ್, ಜಗದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts