More

    ಹುಬ್ಬಳ್ಳಿ ಘಟನೆಗೆ ಬೇರೆ ಅರ್ಥ ಕಲ್ಪಿಸಬೇಡಿ

    ಬಾಗಲಕೋಟೆ: ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿಯ ಹತ್ಯೆ ಘಟನೆಯನ್ನು ಅಪರಾಧ ಪ್ರಕರಣ ಎಂದಷ್ಟೇ ನೋಡಬೇಕೆ ಹೊರತು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ಹುಬ್ಬಳ್ಳಿ ಪ್ರಕರಣವನ್ನು ಮುತಾಲಿಕ್ ಸೇರಿದಂತೆ ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಬಣ್ಣಿಸುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ ಅದು ವೈಯಕ್ತಿಕ ಘಟನೆ. ಅಪರಾಧ ಎಂದಷ್ಟೇ ನೋಡಬೇಕು. ಅವರಿಗೆ ಅಷ್ಟು ಸಿಕ್ಕರೆ ಬಣ್ಣ ಕಟ್ಟುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ಗೆದ್ದರೆ ರಂಜಾನ್-ರೋಜಾ ಮಾಡಬೇಕಾಗುತ್ತದೆ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ಜೆಡಿಎಸ್‌ನಲ್ಲಿದ್ದಾಗ ಯತ್ನಾಳ ಅವರೂ ಟೋಪಿ ಹಾಕಿದ್ದರು. ಬಿಜೆಪಿ ನಾಯಕರು ಟಿಪ್ಪು ಜಯಂತಿ ಆಚರಿಸಿದ್ದರು. ಅದೆಲ್ಲ ರಾಜಕೀಯಕ್ಕಾಗಿ ಮಾತನಾಡುತ್ತಾರೆ ಎಂದರು.

    ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಕುರ್ಚಿ ಅಲ್ಲಾಡುತ್ತದೆ ಎಂಬ ಯತ್ನಾಳ ಟೀಕೆಗೂ ಉತ್ತರಿಸಿದ ಅವರು, ಕಾಂಗ್ರೆಸ್ ಗೆಲ್ಲುವುದರಿಂದ ಸಿಎಂ ಕುರ್ಚಿ ಅಲ್ಲಾಡುವುದಿಲ್ಲ ಗಟ್ಟಿಯಾಗುತ್ತದೆ. ಟಿಕೆಟ್ ಸಿಗುವವರೆಗೆ ಮಾತ್ರ ಎಲ್ಲರಿಗೂ ಬೆಂಬಲಿಗರು, ಮತ್ತೊಂದು ಎಂಬುದು ಇರುತ್ತದೆ. ಟಿಕೆಟ್ ಸಿಕ್ಕ ನಂತರ ಪಕ್ಷವೊಂದನ್ನೇ ನೋಡಬೇಕಾಗುತ್ತದೆ. ಹೀಗಾಗಿ ಇದೆಲ್ಲ ಸುಳ್ಳು. ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದೊಂದೇ ಗುರಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts