More

    ಚನ್ನಮ್ಮಳ ಭಾವಚಿತ್ರ ಗುರುತಿಗೆ ಸಮಿತಿ ನೇಮಿಸಿ

    ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮಳ ನೈಜ ಭಾವಚಿತ್ರ ಗುರುತಿಸಲು ರಾಜ್ಯ ಸರ್ಕಾರ ಇತಿಹಾಸ ತಜ್ಞರ ಸಮಿತಿ ರಚಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಶೀಘ್ರ ಮನವಿ ಸಲ್ಲಿಸಲಾಗುವುದು ಎಂದು ರಾಣಿ ಚನ್ನಮ್ಮ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಯ.ರು. ಪಾಟೀಲ ಹೇಳಿದ್ದಾರೆ.

    ತಾಲೂಕಿನ ಕಾಕತಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವೀರರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ಚನ್ನಮ್ಮಳ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಸರ್ಕಾರದಿಂದ ರಾಜ್ಯಾದ್ಯಂತ ಆಚರಿಸಲು ಆದೇಶಿಸುವಂತೆ ಈ ಭಾಗದ ಜನಪ್ರತಿನಿಧಿಗಳು ಹಾಗೂ ರಾಣಿ ಚನ್ನಮ್ಮ ಅಭಿಮಾನಿಗಳು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

    ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿ ಕಿತ್ತೂರು ಚನ್ನಮ್ಮಳ ಸಾಹಸಗಾಥೆೆ ಕುರಿತು ಪಠ್ಯ ಅಳವಡಿಸಬೇಕು ಎಂದರು. ಪ್ರತಿಷ್ಠಾನದ ಸದಸ್ಯರಾದ ಬಸರಾಜ ಗಾರ್ಗಿ ಮಾತನಾಡಿದರು. ಶಿವಪೂಜಿಮಠದ ರಾಚಯ್ಯ ಸ್ವಾಮೀಜಿ, ಜಿಪಂ ಸದಸ್ಯ ಸಿದ್ಧಗೌಡ ಸುಣಗಾರ, ತಾಪಂ ಸದಸ್ಯ ಯಲ್ಲಪ್ಪ ಕೊಳೇಕರ, ರಾಣಿ ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಡಿ. ಪಾಟೀಲ, ಸಮಿತಿ ಉಪಾಧ್ಯಕ್ಷ ಶಶಿಕಾಂತ ಪಾಟೀಲ, ಕಾರ್ಯದರ್ಶಿ ಬಾಬಾಸಾಹೇಬ ದೇಸಾಯಿ, ಸೂರ್ಯಕಾಂತ ಪಾಟೀಲ, ಆರ್.ಕೆ. ಪಾಟಿಲ, ಅಪ್ಪಾಸಾಹೇಬ ದೇಸಾಯಿ, ಮಲ್ಲಪ್ಪಣ್ಣ ಗಾಣಗಿ, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಜ್ಯೋತಿ ಬದಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts