More

    ಹೆಣ್ಣು ಭ್ರೂಣ ಹತ್ಯೆ ದುಷ್ಕೃತ್ಯ ಖಂಡಿಸಿ

    ಚನ್ನಗಿರಿ: ಹೆಣ್ಣು ಭ್ರೂಣ ಹತ್ಯೆಯಂತ ದುಷ್ಕೃತ್ಯಕ್ಕೆ ಸಹಕಾರ ನೀಡಬಾರದು. ಅದನ್ನು ಖಂಡಿಸುವಂತ ಮನೋಭಾವ ಪ್ರತಿ ಹೆಣ್ಣಿನಲ್ಲಿ ಹುಟ್ಟಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಮಹಾಸ್ವಾಮಿಗಳು ತಿಳಿಸಿದರು.

    ಇಲ್ಲಿನ ರಾಮಮನೋಹರ ಲೋಹಿಯ ಭವನದಲ್ಲಿ ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಜನತಾ ಚಳುವಳಿಯಾಗಿ ಮಾನವ ಹಕ್ಕುಗಳು ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಸೋಮವಾರ ಮಾತನಾಡಿದರು.

    ಕುಟುಂಬದಲ್ಲಿ ಗಂಡು ಹುಟ್ಟಿದರೆ ಸಂತೋಷ ಪಡುವುದು, ಹೆಣ್ಣು ಜನಿಸಿದರೆ ನೋವು ಪಡುವುದು ಸರಿಯಲ್ಲ. ಹೆಣ್ಣಿಗೆ ದೇವರು ತಾಯಿ ಆಗುವಂತ ಪುಣ್ಯಪ್ರಾಪ್ತಿ ಮಾಡಿದ್ದಾನೆ. ಯಾವುದೇ ಮಗು ಜನಿಸಿದರು ಅದು ನಿಮ್ಮ ಮಗು. ಹಾಗಾಗಿ, ಮಗು ಜನಿಸುವ ಮೊದಲು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುವ ಕೆಟ್ಟ ಕುತೂಹಲ ಮನಸ್ಥಿತಿ ಬದಲಾಗಬೇಕು ಎಂದರು.

    ಪುರುಷರಿಗಿಂತ ಮಹಿಳೆಯರು ಹೆಚ್ಚು ಶ್ರಮಜೀವಿಗಳು. ಕುಟುಂಬ ನಿರ್ವಹಣೆ ಜತೆ ಸಮಾಜದಲ್ಲಿ ಪುರುಷರಿಗೆ ಸಮನಾಗಿ ಕೆಲಸ ನಿರ್ವಹಿಸುತ್ತಾಳೆ. ಪ್ರತಿ ಪುರುಷನ ಸಾಧನೆ ಹಿಂದೆ ಮಹಿಳೆ ಇದ್ದಾಳೆ ಎಂದು ವಿವರಿಸಿದರು.

    ಮಹಿಳಾ ಸಾಂತ್ವನ ಆಪ್ತ ಸಮಾಲೋಚಕಿ ಬಿ.ಎನ್. ನೇತ್ರಾವತಿ ಮಾತನಾಡಿ, ಎಲ್ಲಿ ಮಹಿಳೆ ನೆಮ್ಮದಿ ಹಾಗೂ ಸುಖದಿಂದ ಇರುತ್ತಾಳೋ ಅಂತಹ ಸ್ಥಳ ಪುಣ್ಯಭೂಮಿಯಾಗುತ್ತದೆ ಎಂದರು.

    ಕೆಪಿಸಿಸಿ ಸದಸ್ಯ ವಡ್ನಾಳ್ ಜಗದೀಶ್ ಮಾತನಾಡಿ, ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಬೇಕು ಎಂದು ಆಶಿಸಿದರು.

    ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಸ್ವಾಮಿಗಳು, ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ಜಿಲ್ಲಾ ಅಧ್ಯಕ್ಷ ಸುರೇಶ್‌ಗೌಡ್ರು, ಜಿಲ್ಲಾ ಕಾರ್ಯದರ್ಶಿ ಶೈಲೇಶ್‌ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ, ಮಹಿಳಾ ಘಟಕದ ಅಧ್ಯಕ್ಷೆ ಕೋರಿ ಜ್ಯೋತಿ, ಸುಮಿತ್ರಮ್ಮ, ಉಪನ್ಯಾಸಕಿ ಗೌರಮ್ಮ, ಲಿಂಗರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts