More

    ಸೂಳೆಕೆರೆಗೆ ಮಾಡಾಳ್ ಭೇಟಿ, ಜಲವೈಭವ ಕಣ್ತುಂಬಿಕೊಂಡ ಶಾಸಕ

    ಚನ್ನಗಿರಿ: ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚನ್ನಗಿರಿ ತಾಲೂಕಿನ ಸೂಳೆಕೆರೆ ಕೋಡಿ ಬಿದ್ದಿರುವುದನ್ನು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.

    ಶಾಸಕನಾದ ಬಳಿಕ ಮೂರು ಬಾರಿ ಕೆರೆ ತುಂಬಿರುವುದನ್ನು ಕಂಡಿದ್ದೇನೆ. 2014ರಲ್ಲೂ ಹೀಗೆ ಕರೆ ತುಂಬಿ ಕೋಡಿ ಬಿದ್ದಿತ್ತು ಎಂದು ನೆನಪಿಸಿಕೊಂಡ ಮಾಡಾಳ್, ತಾಲೂಕಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿದೆ ಎಂದು ಹೇಳಿದರು.

    ಸೂಳೆಕೆರೆ ಸುತ್ತಲಿನ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಈ ಬಾರಿ ಅಧಿಕಾರಿಗಳಿಗೆ ಬೆಳೆ ನಷ್ಟ, ಮನೆಗಳು ಬಿದ್ದಿರುವ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದು, ಜನತೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಹೇಳಿದರು.

    ಕೃಷಿ ಜಮೀನು ಹಾಗೂ ಅಡಕೆ ತೋಟಗಳೂ ಜಲಾವೃತವಾಗಿದ್ದು, ರೈತರು ಜಮೀನುಗಳಿಗೆ ಹೋಗುವುದು ಕಷ್ಟವಾಗಿದೆ. ಮಳೆಯಿಂದ ನೂರಾರು ಮನೆಗಳೂ ಬಿದ್ದಿವೆ. ಮನೆ ಇಲ್ಲದವರಿಗೆ ಮನೆ ನೀಡುವ ವ್ಯವಸ್ಥೆಯನ್ನು ಗ್ರಾಪಂ ಮೂಲಕ ಮಾಡಲಾಗಿದೆ. ಬೆಳೆ ಹಾನಿ, ಮನೆ ಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts