More

    ದೇಗುಲ ನಿರ್ವಹಣೆಗೆ ನೀಡಿ ಆದ್ಯತೆ

    ಚನ್ನಗಿರಿ: ಶಕ್ತಿ ಕೇಂದ್ರವಾಗಿ ದೇವಸ್ಥಾನಗಳನ್ನು ನಿರ್ಮಿಸಿದ ಮೇಲೆ ದಿನಂಪ್ರತಿ ಪೂಜೆ ಪುನಸ್ಕಾರ ಜರುಗಬೇಕು, ನಿರ್ವಹಣೆ ಸುಲಲಿತವಾಗಿರಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

    ಚನ್ನಗಿರಿ ತಾಲೂಕು ಎರೇಹಳ್ಳಿ ಗ್ರಾಮದಲ್ಲಿ ಬುಧವಾರ, 20 ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ, ಕರಿಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

    ದೇವಸ್ಥಾನಗಳ ನಿರ್ಮಾಣ ಕಷ್ಟವಲ್ಲ. ಸರ್ಕಾರ ಹಣ ನೀಡುತ್ತದೆ, ಸಮೂದಾಯಗಳೂ ದೇಣಿಗೆ ನೀಡುತ್ತವೆ. ಕಟ್ಟಡವೇನೋ ನಿರ್ಮಾಣವಾಗುತ್ತದೆ. ಆದರೆ ದೇಗುಲ ನಿರ್ವಹಣೆ ಸದಾ ಕಾಲ ನಡೆಯುವಂತಿರಬೇಕು ಎಂದು ಹೇಳಿದರು.

    ಚನ್ನಗಿರಿ ತಾಲೂಕಿನಲ್ಲಿ 24 ವಾಲ್ಮೀಕಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಪಟ್ಟಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ಉದ್ಘಾಟನೆಗೆ ಸಿದ್ಧವಾಗಿದೆ. ಸದ್ಯದಲ್ಲೇ ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಸಮಾಜದವರ ಸಮ್ಮಖದಲ್ಲಿನ ಉದ್ಘಾಟನೆ ನಡೆಸಲಾಗುತ್ತದೆ ಎಂದರು.

    ಇದೇ ವೇಳೆ ಗ್ರಾಮದಲ್ಲಿ ನಿರ್ಮಿಸಿದ್ದ ನೂತನ ಮಾತಂಗಿ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಯಿತು. ತಾಪಂ ಮಾಜಿ ಅಧ್ಯಕ್ಷ ಪಿ.ಲೋಹಿತ್ ಕುಮಾರ್, ಹರೋನಹಳ್ಳಿ ಗ್ರಾಪಂ ಧ್ಯಕ್ಷ ಶಶಿಕುಮಾರ್, ಸದಸ್ಯರಾದ ರಾಜಶೇಖರ್, ವಿಜಯಕುಮಾರ್, ಶಿವಕುಮಾರ್, ಚಂದ್ರಪ್ಪ, ರುದ್ರಪ್ಪ, ಭರತ್, ಪಿಡಿಒ ಚಂದ್ರಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts