ಬಜರಂಗಿ ಕೆಣಕಿದ ಕಾಂಗ್ರೆಸ್ ರಾಜಕೀಯ ಭಸ್ಮ

Channagiri, BJP, Bajrangi,

ಚನ್ನಗಿರಿ: ಬಜರಂಗಿಯನ್ನು ಕೆಣಕಿದ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಸುಟ್ಟು ಬೂದಿಯಾಗುವುದು ಗ್ಯಾರಂಟಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ. ರವಿ ಹೇಳಿದರು.

blank

ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಮಾಯಣದಲ್ಲಿ ಹನುಮಂತ ಲಂಕೆಯನ್ನು ಸುಟ್ಟ. ಈಗ ಕಾಂಗ್ರೆಸ್ ಭಜರಂಗದಳದ ಬಾಲಕ್ಕೆ ಬೆಂಕಿ ಇಡಲು ಹೊರಟಿದೆ. ಹಾಗಾಗಿ, ಕಾಂಗ್ರೆಸ್ ರಾಜಕೀಯವಾಗಿ ಭಸ್ಮವಾಗಲಿದೆ ಎಂದರು.

ಬಿಜೆಪಿಯ ನೀತಿ ಬಡವರಿಗೆ ಬಲ ತುಂಬುವಂತದ್ದು. ದಲಿತರಿಗೆ ಶಕ್ತಿ ಕೊಡುವಂತದ್ದು. ಆದರೆ, ತಾಲಿಬಾನ್ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬರುವುದು ಕಾಂಗ್ರೆಸ್ ನೀತಿ ಎಂದು ಕುಟುಕಿದರು.

ಬಿಜೆಪಿ ಅಭ್ಯರ್ಥಿ ಎಚ್.ಎಸ್. ಶಿವಕುಮಾರ್ ಮಾತನಾಡಿ, ನಾನು ಆಯ್ಕೆಯಾದರೆ ಚನ್ನಗಿರಿ ಕ್ಷೇತ್ರಕ್ಕೆ ಹೊಸ ಕಲ್ಪನೆ ಕೊಡುವೆ. ತಾಲೂಕು ಕಚೇರಿಯಲ್ಲಿರುವ ಅವ್ಯವಸ್ಥೆ ಸರಿಪಡಿಸಿ ಸಾರ್ವಜನಿಕ ಸ್ನೇಹಿ ಆಡಳಿತ ನೀಡುವೆ ಎಂದರು.

ಒಂದು ರೂ.. ಲಂಚ ನೀಡದೇ ಸರ್ಕಾರದ ಸೌಲಭ್ಯಗಳು ಸರ್ವರಿಗೂ ದೊರೆಯುವಂತೆ ಮಾಡುವೆ, ಮನೆ ಇಲ್ಲದವರಿಗೆ ಸೂರು ಸೇರಿದಂತೆ ಜನ ಕಲ್ಯಾಣ ಕಾರ್ಯಕ್ರಮ ತರುವೆ ಎಂದರು.

ನಾನು ತುಮ್‌ಕೋಸ್ ಅಧ್ಯಕ್ಷನಾಗಿದ್ದಾಗ ಅದರ ವಹಿವಾಟು ಹೆಚ್ಚಿಸಿ ರಾಷ್ಟ್ರದ ಅತ್ಯುತ್ತಮ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗುವಂತೆ ಮಾಡಿರುವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ತಾಲೂಕು ಉಪಾಧ್ಯಕ್ಷ ಕಾಯಿ ಮಂಜಣ್ಣ, ಜಿ.ಎಸ್. ಅಜಿತ್‌ಕುಮಾರ್, ಕಡ್ಲೆಬಾಳು ಧನಂಜಯ, ತಾಲೂಕು ಅಧ್ಯಕ್ಷ ಗಿರೀಶ್, ಹೊಸಬಾಲೆ ಮಂಜಪ್ಪ ಇದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank