More

    ಬಂಗಾರಪ್ಪ ರಾಜ್ಯ ಕಂಡ ಧೀಮಂತ ರಾಜಕಾರಣಿ

    ಚನ್ನಗಿರಿ: ಬಡವರ ಶ್ರೇಯೋಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಎಂದು ಕಸಬಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಚಿನ್ನಸ್ವಾಮಿ ತಿಳಿಸಿದರು.

    ಇಲ್ಲಿನ ಸಾಯಿಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 89ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ರಾಜಕಾರಣದಲ್ಲಿ ಸಾವಿರಾರು ನಾಯಕರು ಬಂದು ಹೋಗುತ್ತಾರೆ. ಇದರಲ್ಲಿ ಕೆಲವರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ. ಇಂಥವರ ಸಾಲಿನಲ್ಲಿ ಬಂಗಾರಪ್ಪ ಒಬ್ಬರಾಗಿದ್ದಾರೆ. ಹೋರಾಟದ ಮೂಲಕ ರಾಜಕಾರಣದಲ್ಲಿ ಗುರುತಿಸಿಕೊಂಡ ಅವರು, ಅಧಿಕಾರ ಅಂತಸ್ತಿಗಿಂತ ಜನಸೇವೆಯನ್ನೇ ಉಸಿರಾಗಿಸಿಕೊಂಡಿದ್ದರಿಂದ ಮುಖ್ಯಮಂತ್ರಿ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿತು ಎಂದರು.

    ಎಲ್ಲರೂ ಅಕ್ಷರಸ್ಥರಾಗಬೇಕೆಂಬ ಉದ್ದೇಶದಿಂದ ಅಕ್ಷರ ತುಂಗಾ ಯೋಜನೆ ಜಾರಿ ತಂದರು. ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳ ಮೂಲಕ ಗ್ರಾಮೀಣರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಿದರು. ಅವರಿಂದು ನಮ್ಮೊಂದಿಗೆ ಇಲ್ಲ, ಆದರೆ ಅವರ ಯೋಜನೆಗಳು ಸದಾಕಾಲ ಮಾತನಾಡುತ್ತಿರುತ್ತವೆ ಎಂದರು.

    ಪಪಂ ಮಾಜಿ ಸದಸ್ಯ ಕೆ.ಸುರೇಶ್, ಎಲ್.ಜಯನಾಯ್ಕ, ಜಿ.ಎಂ.ವೈಶಾಖ ಪಾಟೀಲ್, ಎಸ್.ಹರ್ಷ, ಕೆ.ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts