More

    ರೈಲ್ವೆ ಸಿಗ್ನಲ್ ವ್ಯವಸ್ಥೆ ಬದಲಾವಣೆ; 1 ಲಕ್ಷ ಕೋಟಿಯ ಯೋಜನೆ

    ಭಾರತದ ವಿಶಾಲವಾದ ರೈಲು ಜಾಲದ ಉದ್ದಕ್ಕೂ ಮುಂದಿನ ಆರು ವರ್ಷಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸಲು -ಠಿ; 1 ಲಕ್ಷ ಕೋಟಿ ವೆಚ್ಚದ ಬೃಹತ್ ಯೋಜನೆಯ ಅನುಷ್ಠಾನಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಕಳೆದ ಜೂನ್​ನಲ್ಲಿ ಒರಿಸ್ಸಾದ ಬಾಲಾಸೋರ್​ನಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಕಾರಣವಾದ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ.

    ಮಾನವ ದೋಷ ಮತ್ತು ಸಿಗ್ನಲಿಂಗ್ ವೈಫಲ್ಯಗಳ ಸಾಧ್ಯತೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗ ಅಸ್ತಿತ್ವದಲ್ಲಿರುವ ಎಲೆಕ್ಟ್ರೋ-ಮೆಕ್ಯಾನಿಕಲ್ ವ್ಯವಸ್ಥೆ ಬದಲಾಗಿ ಘನ-ಸ್ಥಿತಿಯ ಎಲೆಕ್ಟ್ರಾನಿಕ್ ರೂಟ್ ರಿಲೇ ಸಾಧನಗಳು ಮತ್ತು ಸಿಗ್ನಲ್​ಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 2ರಂದು ಒಡಿಶಾದ ಬಾಲಸೋರ್​ನಲ್ಲಿ 294 ಜನರ ಸಾವಿಗೆ ಕಾರಣವಾದ ಮೂರು ರೈಲುಗಳ ನಡುವಿನ ಸರಣಿ ಅಪಘಾತಕ್ಕೆ ಸಿಗ್ನಲಿಂಗ್ ದೋಷಗಳು ಕಾರಣವಾಗಿರಬಹುದು ಎಂಬ ರೈಲ್ವೆ ಸುರಕ್ಷತಾ ಆಯುಕ್ತರ ವರದಿ ಕೂಡ ರೈಲ್ವೆಯು ಸಂಪೂರ್ಣ ಎಲೆಕ್ಟ್ರಾನಿಕ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರಿದೆ.

    ಹೊಸ ವ್ಯವಸ್ಥೆಗೆ ಅಗತ್ಯವಾದ ಉಪಕರಣಗಳನ್ನು ಪೂರೈಸಲು ರೈಲ್ವೆ ಸಚಿವಾಲಯವು ಪ್ರಸ್ತುತ ಮಾರಾಟಗಾರರ ಪಟ್ಟಿಯನ್ನು ರಚಿಸುತ್ತಿದೆ, ಉದ್ದೇಶಿತ ನೂತನ ವ್ಯವಸ್ಥೆಯು ಮೇಲಿಂದ ಮೇಲೆ ನಿರ್ವಹಣೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ದುರುದ್ದೇಶದ ಹಸ್ತಕ್ಷೇಪವನ್ನು ತಡೆಯುತ್ತದೆ ಎನ್ನಲಾಗಿದೆ.

    ಜಪಾನ್​ನ ಸಿಗ್ನಲ್ ಸಿಸ್ಟಮ್ ತಯಾರಕ ಕ್ಯೋಸಾನ್ ಕಂಪನಿಯನ್ನು ಈಗಾಗಲೇ ಮಾರಾಟಗಾರರಾಗಿ ಅನುಮೋದಿಸಲಾಗಿದ್ದು, ಮೊದಲ ಹಂತದ ಖರೀದಿ ಆದೇಶಗಳನ್ನು ಈ ಕಂಪನಿಗೆ ನೀಡಬಹುದಾಗಿದೆ. ಆದರೆ, ರೈಲ್ವೆ ಜಾಲವು ದೇಶಾದ್ಯಂತ ವಿಸ್ತರಿಸಿರುವುದರಿಂದ ಸಿಗ್ನಲ್ ವ್ಯವಸ್ಥೆ ಬದಲಾಯಿಸುವ ಕೆಲಸ ಬಹಳ ದೊಡ್ಡ ಪ್ರಮಾಣದ್ದಾಗಿದೆ. ಹೀಗಾಗಿ, ಸಿಗ್ನಲ್ ವ್ಯವಸ್ಥೆ ಖರೀದಿಗೆ ಹೆಚ್ಚಿನ ಮಾರಾಟಗಾರರನ್ನು ಗುರುತಿಸಲಾಗುತ್ತಿದೆ. ಹೆಚ್ಚಿನ ಮಾರಾಟಗಾರರನ್ನು ಅನುಮೋದಿಸಿದ ನಂತರ ಸಿಗ್ನಲಿಂಗ್ ಕೂಲಂಕಷ ಪರೀಕ್ಷೆಗೆ ಟೆಂಡರ್​ಗಳನ್ನು ಆಹ್ವಾನಿಸಲಾಗುತ್ತದೆ. ಇದಾದ ಕೆಲವು ತಿಂಗಳುಗಳಲ್ಲಿ ನಿಜವಾದ ಕೆಲಸವು ಪ್ರಾರಂಭವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಭಾರತದ 70,000-ಕಿಲೋಮೀಟರ್ ರೈಲು ಮಾರ್ಗದ ಜಾಲವು ಅಂದಾಜು 8,000 ನಿಲ್ದಾಣಗಳು ಮತ್ತು 700,000-800,000 ಸಿಗ್ನಲಿಂಗ್ ಪಾಯಿಂಟ್​ಗಳನ್ನು ಹೊಂದಿದೆ. ಭಾರತೀಯ ರೈಲ್ವೇ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸುತ್ತಿರುವುದರಿಂದ ಹೊಸ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುವ ಕೆಲಸವು ಯೋಜಿತ ಆರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದಾಗಿದೆ. ಅಲ್ಲದೆ, ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಕೆಲಸದ ಅಗತ್ಯವೂ ಉಂಟಾಗಬಹುದಾಗಿದೆ.

    ಘರ್ಷಣೆ ತಪ್ಪಿಸುವ ಕವಚ: ರೈಲ್ವೆ ಕಾರ್ಯಾಚರಣೆಗಳ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳಲು ರೈಲ್ವೆ ಇಲಾಖೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ. ಪ್ಯಾನಲ್ ಇಂಟರ್​ಲಾಕಿಂಗ್, ರೂಟ್ ರಿಲೇ ಇಂಟರ್​ಲಾಕಿಂಗ್, ಎಲೆಕ್ಟ್ರಾನಿಕ್ ಇಂಟರ್​ಲಾಕಿಂಗ್ ಮತ್ತು ಮಲ್ಟಿಪಲ್ ಆಸ್ಪೆಕ್ಟ್ ಕಲರ್ ಲೈಟ್ ಸಿಗ್ನಲ್​ಗಳನ್ನು ಒಳಗೊಂಡ ಸುಧಾರಿತ ಸಿಗ್ನಲಿಂಗ್ ಸಿಸ್ಟಮ್ಳನ್ನು 6,396 ನಿಲ್ದಾಣಗಳಲ್ಲಿ ಒದಗಿಸಿದೆ. ಮುಂದಿನ ರೈಲಿಗೆ ಲೈನ್ ಕ್ಲಿಯರ್ ನೀಡುವ ಮೊದಲು, ಹಸ್ತಚಾಲಿತ ಹಸ್ತಕ್ಷೇಪವಿಲ್ಲದೆ ರೈಲಿನ ಸಂಪೂರ್ಣ ಆಗಮನವನ್ನು ಖಚಿತಪಡಿಸಿಕೊಳ್ಳಲು ಆಕ್ಸಲ್ ಕೌಂಟರ್ ಮೂಲಕ ಬ್ಲಾಕ್ ಸಾಬೀತುಪಡಿಸುವಿಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಲ್ಲದೆ, ರಿಸರ್ಚ್ ಡಿಸೈನ್ಸ್ ಅಂಡ್ ಸ್ಟಾ್ಯಂಡರ್ಡ್ಸ್ ಆರ್ಗನೈಸೇಶನ್ (ಆರ್​ಡಿಎಸ್​ಒ) ಹಾಗೂ ಭಾರತೀಯ ಮೂಲ ಉಪಕರಣ ತಯಾರಕರೊಂದಿಗೆ ಜತೆಗೂಡಿ ಕವಚ (ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ) ಎಂಬ ಹೆಸರಿನ ಭಾರತದ ಸ್ವಂತ ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಸಿಗ್ನಲ್ ಅನುಸಾರ ಮತ್ತು ಶಾಶ್ವತ ವೇಗದ ನಿರ್ಬಂಧಗಳ ಪ್ರಕಾರ ರೈಲನ್ನು ನಿಯಂತ್ರಿಸಲು ರೈಲಿನ ಚಾಲಕನು ವಿಫಲನಾದ ಸಂದರ್ಭದಲ್ಲಿ ರೈಲು ಬ್ರೇಕಿಂಗ್ ವ್ಯವಸ್ಥೆಯನ್ನು ಸ್ವಯಂಚಾಲಿತವಾಗಿ ಇದು ಸಕ್ರಿಯಗೊಳಿಸುತ್ತದೆ. ಸಕ್ರಿಯ ಕವಚ ವ್ಯವಸ್ಥೆಯನ್ನು ಹೊಂದಿದ ಎರಡು ರೈಲುಗಳ ನಡುವಿನ ಘರ್ಷಣೆಯನ್ನು ಕೂಡ ಇದು ತಪ್ಪಿಸುತ್ತದೆ.

    signal operating

    ವಿರೂಪಗೊಳಿಸಲು ಇಲ್ಲ ಅವಕಾಶ: ‘ನಾವು ನಮ್ಮ ಸಿಗ್ನಲಿಂಗ್ ವ್ಯವಸ್ಥೆಯನ್ನು ಪ್ರಸ್ತುತ ಇರುವ ಎಲೆಕ್ಟ್ರೋ-ಮೆಕ್ಯಾನಿಕಲ್ ರೂಟ್ ರಿಲೇ ಸಿಸ್ಟಮ್ಂದ ಸಂಪೂರ್ಣ ಎಲೆಕ್ಟ್ರಾನಿಕ್ ಸಿಸ್ಟಮ್ೆ ಬದಲಾಯಿಸಲು ಕೆಲಸ ಮಾಡುತ್ತಿದ್ದೇವೆ. ಮುಂದಿನ ಐದಾರು ವರ್ಷಗಳಲ್ಲಿ ಈ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸಲಿದ್ದೇವೆ. ನೂತನ ಸಿಗ್ನಲಿಂಗ್ ವ್ಯವಸ್ಥೆಯು ಕಂಪ್ಯೂಟರ್ ಚಿಪ್ ಆಧಾರಿತ ನಿಯಂತ್ರಣಗಳನ್ನು ಹೊಂದಿರುವ ಘನ ಸ್ಥಿತಿಯ ಸಾಧನಗಳಿಂದ ಕೂಡಿರುತ್ತದೆ. ಹೀಗಾಗಿ, ಈ ವ್ಯವಸ್ಥೆಯಲ್ಲಿ ತಂತಿಗಳನ್ನು ವಿರೂಪಗೊಳಿಸುವುದು ಅಥವಾ ಮಾನವ ಹಸ್ತಕ್ಷೇಪದ ಸಾಧ್ಯತೆಗಳನ್ನು ನಿವಾರಿಸಲಾಗುತ್ತದೆ. ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ವಿವರಿಸುತ್ತಾರೆ. ಪ್ರಸ್ತುತ ರೈಲ್ವೆಯು ಬಳಸುತ್ತಿರುವ ಸಿಗ್ನಲ್ ವ್ಯವಸ್ಥೆಯು ಫೂಲ್​ಪೂ›ಫ್ ಮತ್ತು ವಿಫಲ ನಿರೋಧಕ ವ್ಯವಸ್ಥೆಯಾಗಿದ್ದು, ಪ್ರಪಂಚದಾದ್ಯಂತದ ರೈಲ್ವೇ ನೆಟ್​ವರ್ಕ್​ಗಳು ಇದನ್ನು ಬಳಸುತ್ತಿವೆ. ಆದರೆ, ಉದ್ದೇಶಿತ ನೂತನ ಬದಲಾವಣೆಯು, ಮಾರ್ಗದ ರಿಲೇ ಪ್ಯಾನೆಲ್​ಗಳಲ್ಲಿ ಇರುವ ಸ್ವಿಚ್​ಗಳಲ್ಲಿ ಆಗಾಗ್ಗೆ ವೈರಿಂಗ್ ಬದಲಾವಣೆಗಳ ಅಗತ್ಯವನ್ನು ನಿವಾರಿಸುತ್ತದೆ. ಇದು ಸಿಗ್ನಲಿಂಗ್ ನೆಟ್​ವರ್ಕ್​ನ ಭಾಗವಾಗಿರುವ ಎಲೆಕ್ಟ್ರಾನಿಕ್ ಇಂಟರ್​ಲಾಕಿಂಗ್ ಮತ್ತು ಟ್ರಾ್ಯಕ್ ಪಾಯಿಂಟ್​ಗಳನ್ನು ನಿರ್ವಹಿಸುತ್ತದೆ ಎಂದೂ ಅಧಿಕಾರಿಗಳು ಹೇಳುತ್ತಾರೆ.

    ಸುರಕ್ಷತೆಗೆ ಹೆಚ್ಚು ಹೂಡಿಕೆ, ಅಪಘಾತ ಸಂಖ್ಯೆ ಇಳಿಮುಖ: 2023-24ನೇ ಹಣಕಾಸು ವರ್ಷದಲ್ಲಿ -ಠಿ; 2.40 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಜೆಟ್ ಬಂಡವಾಳವನ್ನು ರೈಲ್ವೆ ಇಲಾಖೆ ಪಡೆದುಕೊಂಡಿದೆ. ಈಗ ಸಿಗ್ನಲಿಂಗ್ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ವಿವಿಧ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಹಣವನ್ನು ನಿರೀಕ್ಷಿಸುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ರೈಲು ಸುರಕ್ಷತೆಯಲ್ಲಿನ ಹೂಡಿಕೆಗಳು -ಠಿ; 1.78 ಲಕ್ಷ ಕೋಟಿ ತಲುಪಿವೆ. 2004 ಮತ್ತು 2014 ರ ನಡುವಿನ 10 ವರ್ಷಗಳ ಅವಧಿಯಲ್ಲಿ ಸುರಕ್ಷತೆಗಾಗಿ ಮಾಡಲಾದ ಹೂಡಿಕೆಗಳ ಎರಡೂವರೆ ಪಟ್ಟು ಹೆಚ್ಚಿನ ಮೊತ್ತ ಇದಾಗಿದೆ. ಇದರಿಂದಾಗಿ, 2014ರ ಮೊದಲು ಪ್ರತಿವರ್ಷ ಆಗುತ್ತಿದ್ದ ಸರಾಸರಿ ಅಪಘಾತಗಳ ಸಂಖ್ಯೆಯು 180ರಿಂದ ತದನಂತರದ ವರ್ಷಗಳಲ್ಲಿ 70ಕ್ಕೆ ಇಳಿಮುಖವಾಗಿದೆ.

    ಜಪಾನ್​ನಲ್ಲಿ ಈಗಾಗಲೇ ಬಳಕೆ: ವಿದ್ಯುನ್ಮಾನ ಘನ ಸ್ಥಿತಿಯ ರಿಲೇ ಪ್ಯಾನೆಲ್​ಗಳನ್ನು ಜಪಾನ್ ಮತ್ತು ಇತರ ಕೆಲವು ದೇಶಗಳಲ್ಲಿ ರೈಲ್ವೇ ನೆಟ್​ವರ್ಕ್​ಗಳು ಸಕ್ರಿಯವಾಗಿ ಬಳಸುತ್ತಿವೆ. ಅಲ್ಲದೆ, ರೈಲ್ವೆ ಸಿಗ್ನಲಿಂಗ್ ಅನ್ನು ನಿರ್ವಹಿಸಲು ಈ ವ್ಯವಸ್ಥೆಯನ್ನು ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಭಾರತವು ಶೀಘ್ರದಲ್ಲೇ ಪ್ರವೇಶಿಸಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೊಸ ವ್ಯವಸ್ಥೆಗೆ ಪರಿಚಯಿಸುವ ಮೊದಲು ಅನೇಕ ಪರಿಶೀಲನೆಗಳನ್ನು ಮಾಡುವ ಅವಶ್ಯಕತೆ ಇದೆ ಎಂದೂ ಅವರು ಹೇಳುತ್ತಾರೆ.

    ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ಫಿಕ್ಸ್​; ಪ್ರಿಯಾಂಕ ಗಾಂಧಿ ಚಾಲನೆ

    ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಪುರುಷ-ಮಹಿಳಾ ತಂಡಕ್ಕೆ ಸಮಾನ ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts