More

    ಸಹಕಾರ ಕ್ಷೇತ್ರಕ್ಕೆ ಚಂದೂಪುರ ಪಾಪಣ್ಣ ಕೊಡುಗೆ ಅಪಾರ

    ಕೆ.ಎಂ.ದೊಡ್ಡಿ: ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರ ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದ ಚಂದೂಪುರ ಪಾಪಣ್ಣ ಹುಟ್ಟು ಹೋರಾಟಗಾರ ಎಂದು ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ತಿಳಿಸಿದರು.

    ಇಲ್ಲಿನ ಬಾಲಾಜಿ ಸಮುದಾಯ ಭವನದಲ್ಲಿ ಸಹಕಾರಿ ಧುರೀಣ ಚಂದೂಪುರ ಪಾಪಣ್ಣ ಅಭಿಮಾನಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ನುಡಿ- ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌಡರು ಭಾರತೀನಗರದಲ್ಲಿ ಯಾವುದೇ ಕಚೇರಿ ಆರಂಭಿಸಿದರೂ ಅದು ಚಂದೂಪುರಕ್ಕೂ ಬೇಕು ಎಂದು ಹಠ ಹಿಡಿದು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ಭಾವುಕರಾದರು.

    ಉತ್ತಮ ಕೆಲಸಗಳನ್ನು ಮಾಡುತ್ತ ರೈತರು, ಸಾಮಾನ್ಯರಿಗೆ ಕೊಂಡಿಯಾಗಿ ನಿಂತಿದ್ದ ಚಂದೂಪುರ ಪಾಪಣ್ಣ ಸಹಕಾರ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಸಹಕಾರ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಅವರ ಅಗಲಿಕೆಯಿಂದ ಸಹಕಾರ ಕ್ಷೇತ್ರಕ್ಕೆ ತುಂಬಾಲಾರದ ನಷ್ಟ ಉಂಟಾಗಿದೆ ಎಂದರು.
    ಹನುಮಂತನಗರ ಕ್ಯಾಂಪಸ್‌ನ ಬಿಇಟಿ ಕಾರ್ಯದರ್ಶಿ ಗುರುದೇವರಹಳ್ಳಿ ಸಿದ್ದೇಗೌಡ ಮಾತನಾಡಿ, ಜಿ.ಮಾದೇಗೌಡರ ಅಪ್ಪಟ ಬೆಂಬಲಿಗರಾಗಿದ್ದ ಪಾಪಣ್ಣ ಅವರು ಭಾರತೀ ವಿದ್ಯಾಸಂಸ್ಥೆ ಏಳಿಗೆಗೆ ಅವಿರತವಾಗಿ ಶ್ರಮಿಸಿದ್ದರು ಎಂದರು.

    ಈ ವೇಳೆ ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್ ಅವರನ್ನು ಅಭಿನಂದಿಸಲಾಯಿತು. ಹಿರಿಯ ಗ್ರಂಥಪಾಲಕ ಮೆಣಸಗೆರೆ ಆಲೂರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ, ಬಾಲಾಜಿ ಸಮುದಾಯ ಭವನದ ಮಾಲೀಕ ಚಿಕ್ಕವೆಂಕಟೇಗೌಡ, ಚಂದೂಪುರ ಹರೀಶ್, ಕರಡಕೆರೆ ಶಿವಲಿಂಗೇಗೌಡ, ಬಿದರಹಳ್ಳಿ ಬಂದೀಗೌಡ, ಗುತ್ತಿಗೆದಾರ ಹಾಗಲಹಳ್ಳಿ ಪುಟ್ಟಸ್ವಾಮಿ, ವಿನಯ್ ಹೊನ್ನೇಗೌಡ, ಬೊಪ್ಪಸಮುದ್ರ ಶ್ರೀಕಂಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts