More

    ಚಂದ್ರಯಾನ 3 ಲ್ಯಾಂಡಿಂಗ್​ ಪ್ರಭಾವಕ್ಕೆ ಚಂದ್ರನ ಮೇಲ್ಮೈನಲ್ಲಿ 2.06 ಟನ್​ಗಳಷ್ಟು ಕಲ್ಲು, ಮಣ್ಣು ಸ್ಥಾನಪಲ್ಲಟ!

    ನವದೆಹಲಿ: ಚಂದ್ರಯಾನ 3 ನೌಕೆಯ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆದ ಪ್ರಭಾವಕ್ಕೆ ಚಂದ್ರನ ಮೇಲ್ಮೈನಲ್ಲಿದ್ದ ಸುಮಾರು 2.06 ಟನ್​ಗಳಷ್ಟು ಮಣ್ಣು ಮತ್ತು ಕಲ್ಲುಗಳು ಸ್ಥಾನ ಪಲ್ಲಟವಾಗಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬಹಿರಂಗಪಡಿಸಿದೆ.

    ಚಂದ್ರಯಾನ 3 ಆಗಸ್ಟ್​ 23ರ ಸಂಜೆ 6 ಗಂಟೆಗೆ ಚಂದ್ರನ ಅಂಗಳವನ್ನು ಸ್ಪರ್ಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಕ್ರಮ್​ ಹೆಸರಿನ ಲ್ಯಾಂಡರ್​ ಮಾಡ್ಯೂಲ್​ ಮತ್ತು ಪ್ರಗ್ಯಾನ್​ ಹೆಸರಿನ ರೋವರ್​ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಲ್ಯಾಂಡ್​ ಆದ ಸ್ಥಳವನ್ನು ಕೇಂದ್ರ ಸರ್ಕಾರ ಶಿವಶಕ್ತಿ ಕೇಂದ್ರ ಎಂದು ಕರೆದಿದೆ.

    ವಿಕ್ರಮ್​ ಲ್ಯಾಂಡರ್​ ಚಂದ್ರನ ಅಂಗಳಕ್ಕೆ ಇಳಿಯುತ್ತಿದ್ದಂತೆ ಚಂದ್ರನ ಮೇಲ್ಮೈನಲ್ಲಿದ್ದ ಕಲ್ಲು ಮತ್ತು ಮಣ್ಣುಗಳನ್ನು ಸ್ಥಳಾಂತರಿಸಿದೆ. ಈ ವಿದ್ಯಾಮಾನವನ್ನು ಇಜೆಕ್ಟಾ ಹಾಲೋ ಎಂದು ಕರೆಯಲಾಗುತ್ತದೆ. ಇದನ್ನು ಸೆರೆಹಿಡಿದು, ಇಸ್ರೋದ ಭಾಗವಾಗಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್​ಆರ್​ಎಸ್​ಸಿ) ನ ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದು, ಅದರ ಪ್ರಕಾರ ಸುಮಾರು 2.06 ಟನ್​ಗಳಷ್ಟು ಚಂದ್ರನ ಎಪಿರೆಗೋಲಿತ್ ಅಥವಾ ಚಂದ್ರನ ಮೇಲ್ಮೈ ವಸ್ತುಗಳನ್ನು ಹೊರಹಾಕಿದೆ ಮತ್ತು ಲ್ಯಾಂಡಿಂಗ್ ಸೈಟ್ ಸುತ್ತಲೂ 108.4 ಚದರ ಮೀಟರ್ ಪ್ರದೇಶದಲ್ಲಿ ಸ್ಥಳಾಂತರಿಸಲಾಗಿದೆ.

    ಚಂದ್ರಯಾನ 3 ಯೋಜನೆಯು ಚಂದ್ರಯಾನ 2 ಯೋಜನೆಯ ಮುಂದುವರಿದ ಭಾಗವಾಗಿದೆ. ಚಂದ್ರನ ಮೇಲೆ ಸೇಫ್​ ಆಗಿ ಲ್ಯಾಂಡ್​ ಮಾಡಿ ಅದರ ಮೇಲ್ಮೈ ಮೇಲೆ ಅಡ್ಡಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಚಂದ್ರಯಾನ ಯೋಜನೆ ಇನ್ನೇನು ಚಂದ್ರನ ಮೇಲೆ ಲ್ಯಾಂಡ್​ ಆಗಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಡಿದುಕೊಂಡು ಯೋಜನೆ ಫೇಲಾಯಿತು. ಚಂದ್ರಯಾನ 2ರ ವಿಕ್ರಮ್​ ಲ್ಯಾಂಡರ್​ ಚಂದ್ರನ ಅಂಗಳಕ್ಕೆ ಅಪ್ಪಳಿಸಿತು ಎಂದು ಹೇಳಲಾಗಿದೆ. ಇದೇ ಉದ್ದೇಶದೊಂದಿಗೆ ಚಂದ್ರಯಾನ 3 ಯೋಜನೆ ಆರಂಭಿಸಲಾಯಿತು. ಜುಲೈ 14ರಂದು ಉಟಾವಣೆಯಾದ ಚಂದ್ರಯಾನ 3 ಯೋಜನೆ ಆಗಸ್ಟ್​ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಮತ್ತು ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎಂಬ ಇತಿಹಾಸವನ್ನು ಭಾರತ ಬರೆದಿದೆ.

    ಚಂದ್ರಯಾನ-2 ಆರ್ಬಿಟರ್‌ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾದಿಂದ (OHRC) ಲ್ಯಾಂಡಿಂಗ್ ಪೂರ್ವ ಮತ್ತು ನಂತರದ ಹೆಚ್ಚಿನ ರೆಸಲ್ಯೂಶನ್ ಚಿತ್ರಣವನ್ನು ವಿಜ್ಞಾನಿಗಳು ಹೋಲಿಸಿದ್ದಾರೆ. ಲ್ಯಾಂಡಿಂಗ್ ಈವೆಂಟ್‌ಗೂ ಗಂಟೆಗಳ ಮೊದಲು ಮತ್ತು ನಂತರ ಚಿತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು, ಲ್ಯಾಂಡರ್ ಅನ್ನು ಸುತ್ತುವರೆದಿರುವ ಅನಿಯಮಿತ ಪ್ರಕಾಶಮಾನವಾದ ಪ್ಯಾಚ್‌ನಂತೆ ಗೋಚರಿಸುವುದು “ಇಜೆಕ್ಟಾ ಹಾಲೋ” ವನ್ನು ಇದು ನಿರೂಪಿಸಿದೆ.

    ‘ಇಜೆಕ್ಟಾ ಹಾಲೋ’ ವಿದ್ಯಮಾನದ ವಿವರವಾದ ವಿಶ್ಲೇಷಣೆಯನ್ನು ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. “OHRC ಚಿತ್ರಣವನ್ನು ಬಳಸಿಕೊಂಡು ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸುತ್ತಲೂ ಚಂದ್ರನ ಮೇಲ್ಮೈಯಲ್ಲಿ ಎಜೆಕ್ಟಾ ಹಾಲೋ ಗುಣಲಕ್ಷಣಗಳು” ಎಂಬ ಶೀರ್ಷಿಕೆಯ ಅಧ್ಯಯನವು ಚಂದ್ರನ ಮೇಲ್ಮೈಯಲ್ಲಿ ಚಂದ್ರನ ಇಳಿಯುವಿಕೆಯ ಪ್ರಭಾವದ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುತ್ತದೆ.

    ಅಂದಹಾಗೆ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಇಳಿಯುವಿಕೆಯನ್ನು ಸಾಧಿಸುವುದು, ಚಂದ್ರನ ಮೇಲೆ ರೋವರ್‌ನ ಚಲನಶೀಲತೆಯನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಚಂದ್ರಯಾನ 3 ಮಿಷನ್ ಉದ್ದೇಶಗಳಾಗಿವೆ. (ಏಜೆನ್ಸೀಸ್​)

    BBKS10: ವಿನಯ್‌-ಕಾರ್ತಿಕ್‌ಗೆ ತಣ್ಣೀರಿನ ಶಿಕ್ಷೆ!

    ಆ ದೇಶಕ್ಕೆ ಭಾರತೀಯರು ಪ್ರಯಾಣಿಸಿದರೆ $1,000 ಹೆಚ್ಚುವರಿ ತೆರಿಗೆ ಕಟ್ಟಲೇಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts