More

    ಪಾರ್ಟಿ ಫ್ರೀಕ್​ನಲ್ಲಿ ಚಂದನ್- ನಿವೇದಿತಾ ಕುಣಿತ

    ಬೆಂಗಳೂರು: ಗಾಯಕ, ಸಂಗೀತ ನಿರ್ದೇಶಕ, ಗೀತ ಸಾಹಿತಿ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ‘ಪಾರ್ಟಿ ಫ್ರೀಕ್’ ಮೂಲಕ ಆಗಮಿಸಿದ್ದಾರೆ. ಇಷ್ಟು ದಿನ ಬೇರೆ ಬೇರೆ ನಟಿಯರೊಂದಿಗೆ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಂದನ್, ಇದೀಗ ‘ಪಾರ್ಟಿ ಫ್ರೀಕ್’ ಹಾಡಿನಲ್ಲಿ ಪತ್ನಿ ನಿವೇದಿತಾ ಗೌಡ ಜತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಯುನೈಟೆಡ್ ಆಡಿಯೋಸ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಈ ಹಾಡಿಗೆ ಸಂಗೀತದ ಜತೆಗೆ ಸಾಹಿತ್ಯ ಬರೆದು ಧ್ವನಿಯನ್ನೂ ನೀಡಿದ್ದಾರೆ ಚಂದನ್.

    ಚೈತನ್ಯ ಲಕಂಸಾನಿ ಯುನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ವಣವಾಗಿರುವ ಈ ಹಾಡಿನಲ್ಲಿ ನಿವೇದಿತಾ ಕಾಣಿಸಿಕೊಳ್ಳಲು ಹಾಡಿನ ಸಾಹಿತ್ಯದ ಸಾಲೊಂದು ಕಾರಣವಂತೆ. ‘ಹಾಡಿನಲ್ಲಿ ಸಿಕ್ಕಾಪಟ್ಟೆ ಕ್ಯೂಟು.. ಫ್ರಂ ಕರ್ನಾಟಕ ಸ್ಟೇಟು.. ಎಂಬ ಸಾಲನ್ನು ಬರೆದಿದ್ದೆ. ಅದಕ್ಕಾಗಿ ಯಾರನ್ನು ಕರೆತರುವುದು ಎಂದು ಹುಡುಕುತ್ತಿದ್ದಾಗ ಪತ್ನಿ ನಿವೇದಿತಾ ಅವರನ್ನೇ ಹಾಡಿನಲ್ಲಿ ಪರಿಚಯಿಸಿದ್ದೇನೆ. ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ಚಂದನ್. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಹಾಡು ಬಿಡುಗಡೆ ಆಗಲಿದ್ದು, ಅದಕ್ಕೆ ಬೇರೆಯದೇ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್ ಶ್ರೀರವಿ ವಸ್ತ್ರವಿನ್ಯಾಸ ಮಾಡಿದ್ದಾರೆ. ನಟ ಧರ್ಮ ಈ ಹಾಡಿನಲ್ಲಿದ್ದು, ನಿಶ್ವಿಕಾ ನಾಯ್ಡು ಗ್ಲಾಮರಸ್ ಆಗಿ ಮಿಂಚಿದ್ದಾರೆ.

    ಮತ್ತೆ ಹೆಚ್ಚಾಯ್ತು ಅಕ್ಷಯ್​ ಸಂಭಾವನೆ … ಈ ಬಾರಿ ಎಷ್ಟು ಹೇಳಿ?

    ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಜಗ್ಗೇಶ್​- ಗುರುಪ್ರಸಾದ್​ ಜೋಡಿಯ​ ‘ರಂಗನಾಯಕ’

    ನಿರ್ದೇಶಕ ಎಸ್​ ನಾರಾಯಣ್​ಗೆ ಪುತ್ರನಿಂದಲೇ ಆ್ಯಕ್ಷನ್​ ಕಟ್​; ಇದು ‘ನವಮಿ 9.9.1999′ ಚಿತ್ರದ ವಿಶೇಷ

    ‘ಬನ್ನಿ ಪಾರ್ಟಿ ಮಾಡೋಣ’; ಸ್ಯಾಂಡಲ್​ವುಡ್ ಗುರು ಕಡೆಯಿಂದ ಹಾಡಿನ ಆಹ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts