More

    ರಾಜ್ಯಕ್ಕೆ ಮತ್ತೆ ಕರೆಂಟ್ ಶಾಕ್?; ಯೂನಿಟ್​ಗೆ 1.39 ರೂ. ಹೆಚ್ಚಳಕ್ಕೆ ಶೀಘ್ರ ಪ್ರಸ್ತಾವನೆ

    ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಇಂಧನ ಕ್ಷೇತ್ರ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೆ ವಿದ್ಯುತ್ ದರ ಏರಿಸುವ ಸಲುವಾಗಿ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಶುರುವಾಗಿದೆ. ಕಳೆದ ವರ್ಷ ನವೆಂಬರ್​ನಲ್ಲಿ ಪ್ರತಿ ಯೂನಿಟ್​ಗೆ 33 ಪೈಸೆ ಹೆಚ್ಚಿಸಲು ಕೆಇಆರ್​ಸಿ ಅನುಮತಿ ನೀಡಿತ್ತು. ಆದರೆ ಅದು ಸೀಮಿತ ಅವಧಿಗೆ ನೀಡಿದ ದರ ಏರಿಕೆಯಾಗಿತ್ತು. ಆದ್ದರಿಂದಲೇ ಈಗ ಮತ್ತೊಮ್ಮೆ ಪ್ರತಿ ಯೂನಿಟ್​ಗೆ 1.39 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು ಸಿದ್ಧವಾಗುತ್ತಿವೆ. ಕರೊನಾ ಕಾರಣದಿಂದ ಎಸ್ಕಾಂಗಳು ಕೇಳಿದಷ್ಟು ದರ ಹೆಚ್ಚಿಸುವುದಕ್ಕೆ ಕೆಇಆರ್​ಸಿ ಒಪ್ಪಿರಲಿಲ್ಲ. ಆದರೆ ಹಿಂದಿನ ಪ್ರಸ್ತಾವನೆ ಬಾಕಿಯೂ ಸೇರಿ ಮುಂದಿನ 2 ವರ್ಷ ವಿದ್ಯುತ್ ದರ ಹೆಚ್ಚಳ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ಮೂಲಗಳು ಖಚಿತಪಡಿಸಿವೆ. ಇದರ ಜತೆಗೆ ಗ್ರಾಹಕರಿಂದ ವಸೂಲಿ ಮಾಡುವ ನಿಗದಿತ ಶುಲ್ಕವನ್ನೂ ಪ್ರತಿ ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ.

    5 ತಿಂಗಳಿಗೆ ಸೀಮಿತ: ಕಳೆದ ವರ್ಷ ನವೆಂಬರ್​ನಲ್ಲಿ ದರ ಹೆಚ್ಚಳಕ್ಕೆ ಕೆಇಆರ್​ಸಿ ನೀಡಿದ್ದ ಅನುಮತಿ ಐದು ತಿಂಗಳಿಗೆ ಸೀಮಿತವಾಗಿತ್ತು. ದರ ಹೆಚ್ಚಳದ ಮೂಲಕ 2473 ಕೋಟಿ ರೂ.ಗಳನ್ನು ಏಳು ತಿಂಗಳ ಅವಧಿಯಲ್ಲಿ ವಸೂಲಿ ಮಾಡಬಹುದಾಗಿದ್ದು, ಅದರಲ್ಲಿ 1443 ಕೋಟಿ ರೂ.ಗಳನ್ನು ನಿಯಂತ್ರಕ ಸ್ವತ್ತಾಗಿ ಇಟ್ಟು ಆ ಮೊತ್ತವನ್ನು 2022-23ನೇ ಸಾಲಿನಲ್ಲಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಉಳಿದ 1030 ಕೋಟಿ ರೂ.ಗಳನ್ನು 2021ನೇ ಸಾಲಿನ ಐದು ತಿಂಗಳ ಅವಧಿಗೆ ದರ ಪರಿಷ್ಕರಣೆಯ ಮೂಲಕ ವಸೂಲಿಗೆ ತೀರ್ವನಿಸಲಾಗಿದೆ.

    ತಿಂಗಳ ವೆಚ್ಚ

    • ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದಗಳ ಕಾರಣ ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿಗದಿತ ವೆಚ್ಚ
    • ಸಿಬ್ಬಂದಿ ವೇತನ ಪರಿಷ್ಕರಣೆ, ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚ
    • ಬಂಡವಾಳ ವೆಚ್ಚ ಹಾಗೂ ಸಾಲದ ಮೇಲಿನ ಬಡ್ಡಿ ಪಾವತಿ

    5872 ಕೋಟಿ ರೂಪಾಯಿ ಹೊರೆ: ರಾಜ್ಯದ 5 ಎಸ್ಕಾಂಗಳು 5872 ಕೋಟಿ ರೂ.ಗಳ ಕೊರತೆ ಎದುರಿಸುತ್ತಿವೆ. ಆ ಹೊರೆಯನ್ನು ವಿದ್ಯುತ್ ದರ ಏರಿಕೆಯ ಮೂಲಕ ಭರಿಸಿಕೊಳ್ಳಲು ಮುಂದಾಗಿರುವುದಾಗಿ ಇಂಧನ ಇಲಾ ಖೆಯ ಮೂಲಗಳು ಖಚಿತ ಪಡಿಸಿವೆ.

    ಸಮರ್ಥನೆ ಏನು?

    • ವಿದ್ಯುತ್ ಖರೀದಿ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತಿರುವುದು ಸವಾಲಾಗಿದೆ
    • ಕಾರ್ಯ, ನಿರ್ವಹಣೆ, ಬಂಡವಾಳ ವೆಚ್ಚಕ್ಕೆ ಪಡೆಯುವ ಸಾಲ ಹೆಚ್ಚಳ

    2021ರಲ್ಲಿ ವೆಚ್ಚದ ಹೆಚ್ಚಳ

    • ವಿದ್ಯುತ್ ಖರೀದಿಗೆ ಹೆಚ್ಚುವರಿ 3132 ಕೋಟಿ ರೂ. (ಶೇ.9.2)
    • ಕಾರ್ಯ ಮತ್ತು ನಿರ್ವವಣೆ ವೆಚ್ಚದಲ್ಲಿ ಹೆಚ್ಚುವರಿ 1050 ಕೋಟಿ ರೂ. (ಶೇ.21.45)
    • ಬಡ್ಡಿ ಹಾಗೂ ಇತರ ವೆಚ್ಚದಲ್ಲಿ ಹೆಚ್ಚುವರಿ 212 ಕೋಟಿ ರೂ.
    • 2019ರ ಕೊರತೆ 1837.16 ಕೋಟಿ ರೂ.ಗಳನ್ನು ಮುಂದಕ್ಕೆ ಕೊಂಡೊಯ್ದಿರುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts