More

  ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು

  ರಾಯಬಾಗ: ವಿದ್ಯಾರ್ಥಿಗಳು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಹೇಳಿದರು.
  ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನ, ವಾಣಿಜ್ಯ ಪ್ರಾಜೆಕ್ಟ್ ಕಾಂಪಿಟೇಷನ್ ಮತ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಕಾರಿ ಎಂದರು.

  ಪ್ರಾಚಾರ್ಯ ಆರ್.ಕೆ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಹೊರಹಾಕಲು ಇಂತಹ ಕಾರ್ಯಕ್ರಮಗಳು ಒಳ್ಳೆಯ ವೇದಿಕೆಗಳಾಗಿವೆ ಎಂದರು. ಉಪನ್ಯಾಸಕ ಎಂ.ಆರ್.ಹೊಸಮನಿ ಮಾತನಾಡಿದರು.

  ಆಡಳಿತ ಮಂಡಳಿ ಚೇರ್ಮನ್ ಅಪ್ಪಾಸಾಹೇಬ ಕುಲಗುಡೆ, ಸದಸ್ಯರಾದ ಎಂ.ಎಂ.ನಿಶಾನದಾರ, ಡಿ.ಎಲ್.ಮಿರ್ಜೆ, ವಿ.ಪಿ.ಪಾಟೀಲ, ಎಲ್.ಬಿ.ಪಾಟೀಲ, ಉಪನ್ಯಾಸಕರಾದ ಆರ್.ಎಸ್.ಬುಗಡಿಕಟ್ಟಿ, ಪಿ.ಆರ್.ಭಿರಡೆ, ಎ.ಜಿ.ಹಂಜೆ, ವಿ.ಎ.ಮಂಡಕಿ, ಬಿ.ಇ.ಪಾಟೀಲ, ಸುರಜ ಮಂಗಾವತಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts