More

    ಥೇಟ್​ ಧೋನಿಯಂತೆ ಕಾಣಿಸುತ್ತಿದೆ 3D ಮಾದರಿಯ ಚಾಣಕ್ಯ! ಹೀಗಾಗಲು ಹೇಗೆ ಸಾಧ್ಯ? ಎಂದ ಮಾಹಿ ಫ್ಯಾನ್ಸ್​

    ನವದೆಹಲಿ: ಮಗಧ ಡಿಎಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಿಂದ ರಚಿಸಲ್ಪಟ್ಟ 3ಡಿ ಮಾದರಿಯ ಚಾಣಕ್ಯ ರೂಪ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ತೀವ್ರ ಗೊಂದಲಕ್ಕೀಡಾದ ನೆಟ್ಟಿಗರು, ಈ ಮಾಡೆಲ್ ಥೇಟ್ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಂತೆಯೇ ಕಾಣಿಸುತ್ತಿದೆ ಅಲ್ವಾ! ಇದು ಹೇಗೆ ಸಾಧ್ಯ? ಎಂದು ಬ್ಯಾಕ್ ಟು ಬ್ಯಾಕ್ ಕಮೆಂಟ್​ಗಳ ಸುರಿಮಳೆ ಹರಿಸಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆ ರಾಮಾಸ್ತ್ರದ ಬಳಿಕ ನಮೋ ಪೌರಾಸ್ತ್ರ! 3 ದೇಶಗಳ ಅಲ್ಪಸಂಖ್ಯಾತ ಹಿಂದುಗಳಿಗೆ ಪೌರತ್ವ

    ಮಗಧ ಡಿಎಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ರಚಿಸಿದ್ದಾರೆಂದು ವರದಿಯಾಗಿರುವ ಸ್ಕಾಲರ್ ಪುರಾತನ ಮತ್ತು ದಾರ್ಶನಿಕ ಚಾಣಕ್ಯನ 3D ಮಾದರಿಯು ಮುಂಬರುವ ಐಪಿಎಲ್ 2024ರಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿರುವ ಐದು ಬಾರಿ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಅವರ ಮುಖ ಹೋಲಿಕೆಯನ್ನು ಹೊಂದಿದೆ ಎಂದು ನೆಟ್ಟಿಗರು ಹಾಗೂ ಮಾಹಿ ಫ್ಯಾನ್ಸ್​ಗಳು ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ. ಮಾದರಿಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಆಗುತ್ತಿದ್ದಂತೆ ಈ ಬೆಳವಣಿಗೆ ಮುನ್ನೆಲೆಗೆ ಬಂದಿದೆ.

    ಇದನ್ನೂ ಓದಿ: ಇಂದು 2 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

    ಚಾಣಕ್ಯ ಇದ್ದಿದ್ದರೇ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾಗಧ ಡಿಎಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಯಾರಿಸಿದ ಚಾಣಕ್ಯರ 3D ಮಾದರಿ ಇದೀಗ ಥೇಟ್​ ಧೋನಿಯವರನ್ನು ಹೋಲುತ್ತಿದ್ದು, ನೆಟ್ಟಿಗರಲ್ಲಿ ಭಾರೀ ಗೊಂದಲ ಮೂಡಿಸಿದೆ. ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಾಣಕ್ಯ ತಂತ್ರಜ್ಞ ಮತ್ತು ತತ್ವಜ್ಞಾನಿ ಕೂಡ ಆಗಿದ್ದರು.

    ಒಂದೆಡೆ ಕ್ರಿಕೆಟ್ ಇತಿಹಾಸದಲ್ಲಿ ಚಾಣಕ್ಯ ಆಟಗಾರ, ಶ್ರೇಷ್ಟ ನಾಯಕ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಅವರ ಮುಖ ಚಾಣಕ್ಯ ಅವರ 3ಡಿ ಮಾದರಿ ಹೋಲುತ್ತಿರುವುದನ್ನು ಗಮನಿಸಿ, ಮಾಹಿ ಕೂಡ ಕ್ರಿಕೆಟ್​ ಚಾಣಕ್ಯರಾಗಿರುವ ಕಾರಣ ಅದು ಹೋಲುತ್ತಿದೆ ಎಂದು ಫ್ಯಾನ್ಸ್​ ಅಭಿಪ್ರಾಯಿಸಿದರೆ, ಮತ್ತೊಬ್ಬರು ‘ಇದು ಖಂಡಿತವಾಗಿ ಧೋನಿಯೇ’ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಎಂಎಸ್​ಡಿ ಮತ್ತೊಮ್ಮೆ ಪರೋಕ್ಷವಾಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ,(ಏಜೆನ್ಸೀಸ್).

    80ರ ದಶಕದಲ್ಲಿ ಸ್ಟಾರ್​ ಆಗಿ ಮಿಂಚಿದ ನಟಿ ಮಾಧವಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ? ಇಲ್ಲಿವೆ ನೋಡಿ ಫೋಟೋಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts