More

    ನೂತನ ವಿವಿಗೆ ಸಿಎಂ ಚಾಲನೆ

    ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ಬಜೆಟ್‌ನಲ್ಲಿ ೋಷಣೆ ಮಾಡಿದ್ದ ನೂತನ ವಿಶ್ವ ವಿದ್ಯಾಲಯವನ್ನು ಮಂಗಳವಾರ ಉದ್ಘಾಟನೆ ಮಾಡಲಾಯಿತು.


    ಸುವರ್ಣಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ವರ್ಚುವಲ್ ಮೂಲಕ ಭಾಗವಹಿಸಿದ ಸಿಎಂ ಬಸವರಾಜ ಬೊಮ್ಮಾಯಿ ನೂತನ ವಿವಿಗೆ ಚಾಲನೆ ನೀಡಿದರು. ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಭಾಗವಹಿಸಿದ್ದರು. ಬಳಿಕ ಸಭಾ ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿ ಮಾತನಾಡಿ, ಇಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಕ್ಕೆ ಹಲವರ ಕೊಡುಗೆ ಇದೆ. ಇಂದು ವಿಶ್ವವಿದ್ಯಾನಿಲಯ ಕೂಡ ಆರಂಭವಾಗಿದೆ. ಶೈಕ್ಷಣಿಕ ಸೌಲಭ್ಯಗಳು ಜಿಲ್ಲೆಗೆ ಬಂದಿವೆ. ಪ್ರತ್ಯೇಕ ಮಹಿಳಾ ಕಾಲೇಜು ಇದೆ. ಈ ಹಿಂದೆಯೇ ಆರಂಭಗೊಂಡಿರುವ ಕೃಷಿ ವಿಜ್ಞಾನ ಕಾಲೇಜಿಗೆ ಯಡಬೆಟ್ಟದ ಬಳಿ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ ಎಂದರು.

    ಜಿಲ್ಲೆಯು ಅಭಿವೃದ್ಧ್ದಿಯತ್ತ ಸಾಗುತ್ತಿದೆ. ಕೆರೆಗಳಿಗೆ ನೀರು, ಮೂಲ ಸೌಕರ್ಯಗಳು ಲಭಿಸಿವೆ. ಪ್ರಸ್ತುತ ಪ್ರಾರಂಭವಾಗಿರುವ ನೂತನ ವಿವಿಗೆ ಹೆಚ್ಚಿನ ಭೂಮಿ ಅವಶ್ಯಕತೆ ಇದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಪ್ರಾಥಮಿಕ ಶಿಕ್ಷಣದಿಂದ ವಿವಿಧ ಹಂತದ ವ್ಯಾಸಂಗ ಮಾಡಿ ವಿವಿಗೂ ಹೆಜ್ಜೆ ಇಟ್ಟು ಸ್ನಾತಕೋತ್ತರ ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಬೇಕು. ಅಲ್ಲಿ ಇಡೀ ವಿಶ್ವವನ್ನೇ ಸೃಷ್ಟಿಸುವಂತಾಗಬೇಕು. ಆಗ ಸಾರ್ಥಕತೆಯಾಗಲಿದೆ. ನೂತನ ವಿವಿ ಇಡೀ ರಾಷ್ಟ್ರದಲ್ಲೇ ಹೆಸರು ಗಳಿಸುವಂತಾಗಲಿ. ಉನ್ನತ ಮಟ್ಟಕ್ಕೆ ಏರಿ ಜಿಲ್ಲೆಯ ಸಾಧನೆ ಬೆಳಗಲಿ. ಇಲ್ಲಿನ ವೈಶಿಷ್ಟ್ಯ ಪೂರ್ಣತೆಯನ್ನು ಪಸರಿಸಲಿ ಎಂದು ಹಾರೈಸಿದರು.
    ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಇಂದು ಸುವರ್ಣ ದಿನ. ವಿವಿ ಆರಂಭಕ್ಕೆ ಹಲವು ಗಣ್ಯರು ಶ್ರಮಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡುವ ಗುಣವುಳ್ಳವರಾಗಿದ್ದಾರೆ. ಮೈಸೂರು ವಿವಿ ಘಟಿಕೋತ್ಸವದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದವರು ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಎಂಬುದು ಹಿರಿಮೆಯಾಗಿದೆ ಎಂದರು.

    ಚಾಮರಾಜನಗರ ವಿವಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಗುರಿ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಪದವಿಗಷ್ಟೇ ಗಮನ ಹರಿಸುವುದಿಲ್ಲ. ಸ್ಪರ್ಧಾತ್ಮಕ ಪ್ರಪಂಚವಾಗಿರುವ ಪ್ರಸ್ತುತ ಸಂದರ್ಭದಲ್ಲಿ ವೃತ್ತಿಪರ ತರಬೇತಿ ಯನ್ನು ವಿವಿಯಲ್ಲಿ ಆರಂಭಿಸುವ ಚಿಂತನೆ ಇದೆ ಎಂದರು. ಪ್ರಾಧ್ಯಾಪಕ ಬಸವಣ್ಣ ಮೂಕಳ್ಳಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts