More

    ವಿ.ಸೋಮಣ್ಣಗೆ ರಾಜ್ಯಸಭಾ ಸದಸ್ಯಸ್ಥಾನ ನೀಡಿ

    ಚಾಮರಾಜನಗರ: ವಿ.ಸೋಮಣ್ಣ ಸಂಘಟನಾ ಚತುರತೆಯನ್ನು ಗುರುತಿಸಿ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸಿ ಎಂದು ವಿ.ಸೋಮಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಕರಿನಂಜನಪುರ ವೀರಭದ್ರಸ್ವಾಮಿ ಒತ್ತಾಯಿಸಿದರು.


    ವಿ.ಸೋಮಣ್ಣ ರಾಜಕೀಯ ಚತುರತೆ ಹಾಗೂ ಅಭಿವೃದ್ಧಿಪರ ಕೆಲಸಗಳನ್ನು ಗುರುತಿಸಿ, ಬಿಜೆಪಿ ಹೈಕಮಾಂಡ್ ವರುಣಾ ಮತ್ತು ಚಾ.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಮಾಡಿತು. 75 ಸಾವಿರಕ್ಕಿಂತಲೂ ಅಧಿಕ ಮತಗಳನ್ನು ನೀಡಿದ ಕ್ಷೇತ್ರದ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ನಾವು ತಾಂತ್ರಿಕವಾಗಿ ಸೋತಿದ್ದೇವೆ ಹೊರತು ನೈತಿಕವಾಗಿ ಸೋತಿಲ್ಲ. ಆದ್ದರಿಂದ ಬಿಜೆಪಿ ಹೈಕಮಾಂಡ್ ವಿ.ಸೋಮಣ್ಣ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


    ಬಿಜೆಪಿಯ ಹಿರಿಯ ನಾಯಕ, ಸಂಘಟನಾ ಚತುರ ವಿ.ಸೋಮಣ್ಣ ಸೋಲಿನ ನೈತಿಕ ಹೊಣೆಯನ್ನು ನಾವೆಲ್ಲರೂ ಹೊರುತ್ತೇವೆ. ಜಿಲ್ಲೆಗೆ ವಿ.ಸೋಮಣ್ಣ ಅವಶ್ಯಕತೆ ತುಂಬಾ ಇತ್ತು. ನಾನು ಈ ಕ್ಷೇತ್ರದಿಂದ ಆಯ್ಕೆಯಾಗಿ ವಿಶೇಷ ಅನುದಾನವನ್ನು ತಂದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಆಶಯ ಹೊಂದಿದ್ದರು. ಪಕ್ಷದ ಕೆಲವು ಆಂತರಿಕ ವಿಚಾರಗಳಿಂದ ಸೋಲಾಗಿರಬಹುದು. ಈ ಸೋಲಿನಿಂದ ನೀವು ಧೃತಿಗೆಡುವುದು ಬೇಡ ಎಂದು ಮನವಿ ಮಾಡಿದ್ದೇವೆ.

    ವಿ.ಸೋಮಣ್ಣ ಅಭಿವೃದ್ಧಿಪರ ಕೆಲಸಗಳು, ಕಾರ್ಯವೈಖರಿಯನ್ನು ಪರಿಗಣಿಸಿ ರಾಜ್ಯಸಭಾ ಸದಸ್ಯರನ್ನಾಗಿಸಬೇಕು. ಇಲ್ಲವೇ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿಸಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಬಸವನಪುರ ರಾಜಶೇಖರ್, ಜಯರಾಮ್, ಸ್ವಾಮಿ ಲಿಂಗಪ್ಪ, ಸಿದ್ದರಾಜು, ಪ್ರವೀಣ್ ಕುಮಾರ್, ಮೂಡ್ಲುಪುರ ಬಸವಣ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts