More

    ಆರಂಭದಲ್ಲೇ ಎಡವಿದ್ರಾ ಸಿಎಂ ಬಸವರಾಜ ಬೊಮ್ಮಾಯಿ?

    ಚಾಮರಾಜನಗರ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರಂಭದಲ್ಲೇ ಎಡವಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ್ ಅವರು ಹೇಳಿದರು.

    ಆರಂಭದಲ್ಲೇ ಎಡವಿದ್ರಾ ಸಿಎಂ ಬಸವರಾಜ ಬೊಮ್ಮಾಯಿ?ಚಾಮರಾಜಗರದಲ್ಲಿಂದು ಮಾತನಾಡಿದ ಧ್ರುವನಾರಾಯಣ್​, ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಅಸಮತೋಲನ ಕಾಣಿಸುತ್ತಿದೆ. ಹಳೇ ಮೈಸೂರು ಭಾಗಕ್ಕೆ ರಾಜಕೀಯ ಪ್ರಾತಿನಿದ್ಯವನ್ನು ತೋರಿಲ್ಲ. ಯಡಿಯೂರಪ್ಪ ಸಹ ಹಳೇ ಮೈಸೂರು ಭಾಗವನ್ನು ಕಡೆಗಣಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಮೈಸೂರು ಭಾಗಕ್ಕೆ ಸಾಕಷ್ಟು ಪ್ರಾದಿನಿತ್ಯವನ್ನು ಕೊಟ್ಟಿತ್ತು ಎಂದರು.

    13 ಜಿಲ್ಲೆಗಳಿಗೆ ರಾಜಕೀಯ ಪ್ರಾತಿನಿದ್ಯವನ್ನು ಕೊಟ್ಟಿಲ್ಲ. ಬೆಂಗಳೂರಿಗೆ ಮಾತ್ರ ಸಿಂಹಪಾಲು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆದವರಿಗೆ ಹೃದಯ ವೈಶಾಲತೆ ಇರಬೇಕು. ಸಮಾನವಾದ ಅವಕಾಶವನ್ನು ಎಲ್ಲರಿಗೂ ಕೊಡಬೇಕು. ಈ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ವಿಫಲರಾಗಿದ್ದಾರೆ ಎಂದು ಧ್ರುವನಾರಾಯಣ್ ಹೇಳಿದರು.

    ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ನೂತನ‌ ಸಿಎಂ ಆಗಮಿಸಬೇಕು. ನಮ್ಮ ಜಿಲ್ಲೆಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕು. ಯಡಿಯೂರಪ್ಪ ಅಧಿಕಾರಿದಲ್ಲಿದಾಗ ಚಾಮರಾಜನಗರಕ್ಕೆ ಬರಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಬರದಿದ್ದರು ಅಧಿಕಾರ ಕಳೆದುಕೊಂಡಿದ್ದಾರೆ ಎಂದರು.

    ಬಿಜೆಪಿ ಸರ್ಕಾರದ ಎಲ್ಲರೂ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಇದೊಂದು ಬಂಡ ಸರ್ಕಾರ. ನೇರವಾಗಿ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡ ಶಶಿಕಲಾ ಜೋಲ್ಲೆ ಅವರನ್ನ ಮಂತ್ರಿ ಮಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರವನ್ನು ಪೋಷಣೆ ಮಾಡುತ್ತಿದೆ. ಸರ್ಕಾರಕ್ಕೆ ನೈತಿಕತೆ, ಬದ್ಧತೆ ಯಾವುದು ಇಲ್ಲ. ಮುಂದೆ ಜನರು ತಕ್ಕ ಪಾಠ ಕಲಿಸುತ್ತಾರೆ. ನೂರಕ್ಕೆ ನೂರು ಮಧ್ಯಂತರ ಚುನಾವಣೆ ಬರುತ್ತದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಿದೆ. ಕೋವಿಡ್ ಸಂಧರ್ಭದಲ್ಲಿ ಬೀದಿಯಲ್ಲಿ ನಿಂತು ಜನರ ಪರವಾಗಿ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಕೊನೆಯ ಹಂತದಲ್ಲಿ ತಲೆಕೆಳಗಾಗುತ್ತಾ ಎಲ್ಲರ ಲೆಕ್ಕಾಚಾರ? ದಿವ್ಯಾ ಉರುಡುಗಗೆ ವೈಷ್ಣವಿ ಗೌಡ ಶಾಕ್​..!

    40 ಚಪಾತಿ ತಿಂದು ದೃಷ್ಟಿ ಕಳೆದುಕೊಂಡ 12 ವರ್ಷದ ಬಾಲಕ! ತಲೆಯಲ್ಲಿ ಕೀವು: ವೈದ್ಯರೇ ಶಾಕ್‌

    ‘ಐಟಿ ಕಾಯ್ದೆಯಡಿ ದೂರು ಯಾಕೆ ಸಲ್ಲಿಸಿಲ್ಲ?’ – ಪೆಗಾಸಸ್ ವಿಚಾರಣೆಯಲ್ಲಿ ಸುಪ್ರೀಂ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts