More

    ತಾಯಿಯ ಎದೆಹಾಲು ಶಿಶುಗಳಿಗೆ ಅಮೃತ

    ಚಾಮರಾಜನಗರ: ತಾಯಿಯ ಎದೆ ಹಾಲಿನ ಸೇವನೆಯಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ, ಇದರಲ್ಲಿನ ರೋಗ ನಿರೋಧಕ ಶಕ್ತಿಯಿಂದಾಗಿ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ಜೆ.ದೀಪಾ ತಿಳಿಸಿದರು.

    ನಗರದ ಹೊರವಲಯದಲ್ಲಿರುವ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಆರಂಭದಲ್ಲಿ ವರ್ಷಕ್ಕೆ ಒಂದು ದಿನ ಆಚರಿಸಲ್ಪಟ್ಟ ಸ್ತನ್ಯಪಾನ ದಿನವನ್ನು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಅದರ ಪ್ರಾಮುಖ್ಯತೆ ಮತ್ತು ಅವಶ್ಯಕತೆಯನ್ನು ಪರಿಗಣಿಸಿ ಒಂದು ವಾರಗಳ ಕಾಲ ಜಾಗೃತಿ ಕಾರ್ಯವಾಗಿ ಪ್ರಾರಂಭಿಸಲಾಯಿತು, ಈ ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ, ತಾಯಿಯ ಎದೆಹಾಲು ಶಿಶುಗಳಿಗೆ ಅಮೃತವಾಗಿದ್ದು, ಕನಿಷ್ಠ ಆರು ತಿಂಗಳವರೆಗೆ ಮಗುವಿಗೆ ಕಡ್ಡಾಯವಾಗಿ ತಾಯಂದಿರು ಎದೆಹಾಲನ್ನು ಕುಡಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸ್ಸು ಮಾಡಿರುತ್ತದೆ ಎಂದು ಮಾಹಿತಿ ನೀಡಿದರು.

    ಶಿಶುಗಳಿಗೆ ಹಾಲುಣಿಸಲು ತಾಯಂದಿರನ್ನು ಉತ್ತೇಜಿಸಿ, ಶಿಶುಗಳ ಆರೋಗ್ಯ ಪಾಲನೆಯ ಪರಿಪೂರ್ಣ ಕ್ರಮಗಳನ್ನು ಅನುಸರಿಸಬೇಕು. ಇತರೆ ಅಹಾರದ ತೆಗೆ 2 ವರ್ಷದವರೆಗೆ ಮಗುವಿಗೆ ಎದೆಹಾಲನ್ನು ಕುಡಿಸಬೇಕು. ಎದೆ ಹಾಲಿನ ಸೇವನೆಯಿಂದ ಮಕ್ಕಳ ಬೆಳವಣಿಗೆಗೆ ಒಳಿತು ಮತ್ತು ಇದರಲ್ಲಿನ ರೋಗ ನಿರೋಧಕ ಶಕ್ತಿಯಿಂದಾಗಿ ಉಸಿರಾಟದ ಸೋಂಕುಗಳಾದ ಆಸ್ತಮಾ, ಆಹಾರ ಅಲರ್ಜಿ, ಟೈಪ್ 1 ಮಧುಮೇಹ ಮತ್ತು ಲ್ಯುಕೇಮಿಯಗಳನ್ನು ತಡೆಗಟ್ಟಬಹುದು. ತಾಯಿಯ ಎದೆ ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿರುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸ್ತನ್ಯಪಾನ ಮಾಡಿಸುವುದರಿಂದ ತಾಯಂದಿರು ಸ್ತನಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆ ಹಾಗೂ ಸಂಧಿವಾತ ತೊಂದರೆಗಳನ್ನು ತಡೆಗಟ್ಟಬಹುದು ಎಂದರು. ಸುನಿತಾ ಮಣಿ, ಜ್ಯೋತಿಕಾ, ಸುಂದ್ರಮ್ಮ ಮತ್ತು ವಿವಿಧ ಗ್ರಾಮಗಳ ರೈತರ ಮಹಿಳೆಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts