More

    ಮಹಿಳಾ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ

    ಚಾಮರಾಜನಗರ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್ ಕಮಿಟಿ) ಭೇಟಿ ನೀಡಿ, ಕಾಲೇಜು ಗುಣಮಟ್ಟ ನಿರ್ಧರಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ.

    ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ಗುರುವಾರ ಬೆಳಿಗ್ಗೆ ನ್ಯಾಕ್‌ಪೀರ್ ಸಮಿತಿಯ ಸದಸ್ಯರಾದ ತಮಿಳುನಾಡಿನ ವೆಂಕಟಚಲಂ, ಹರಿಯಾಣದ ಸ್ವಾರಿಕಾ ಶರ್ಮ ಹಾಗೂ ಕೇರಳಾ ರಾಜ್ಯದ ಸೀನಾಜಾರ್ಜ್ ಒಳಗೊಂಡ ಮೂವರ ತಂಡ ಭೇಟಿ ನೀಡಿ, ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಕುರಿತು ಸಮಗ್ರವಾಗಿ ಪರಶೀಲನೆ ನಡೆಸಿದ್ದಾರೆ. ಕಳೆದ 5 ವರ್ಷಗಳಲ್ಲಿನ ಕಾಲೇಜಿನ ಶೈಕ್ಷಣಿಕ ವರದಿ, ಲಿತಾಂಶ ಕುರಿತಾದ ಮಾಹಿತಿ, ಕಾಲೇಜು ಕಟ್ಟಡದ ವೀಕ್ಷಣೆ, ಭೋದಕ ಮತ್ತು ಭೋದಕೇತರ ಸಿಬ್ಬಂದಿ ಜತೆಗೆ ಚರ್ಚೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಕಾಲೇಜಿನ ಪಾತ್ರದ ಕುರಿತಾದ ಸಮಗ್ರ ಮಾಹಿತಿ ಕಳೆಹಾಕಿದರು.

    ಬಳಿಕ ಕಾಲೇಜು ಅಭಿವೃದ್ಧಿ ಮಂಡಳಿಯ ಜತೆಗೆ ಮಾತುಕತೆ ನಡೆಸಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ಪಾಲಕರ ಜತೆಗೂ ಚರ್ಚೆ ನಡೆಸಿದರು. ಸಂಜೆಯ ನಂತರ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಈ ಸಂದರ್ಭದಲ್ಲಿ ಐಕ್ಯೂಎಸ್‌ಇ ಸಂಯೋಜಕ ಬಾಲಸುಬ್ರಮ್ಮಣ್ಯಂ, ಪ್ರಾಂಶುಪಾಲೆ ಸುಮತಿ, ಕನ್ನಡ ವಿಭಾಗದ ಮುಖ್ಯಸ್ಥೆ ರುಕ್ಮಿಣೀ, ಸಹಾಯಕ ಪ್ರಾಧ್ಯಾಪಕ ಜಯಣ್ಣ, ಮಂಜುನಾಥ್, ಸಿದ್ದರಾಜು, ಪ್ರಭಾವತಿ, ಗುರುರಾಜ್ ಯರಗನಹಳ್ಳಿ, ಬಸವಣ್ಣ ಮೂಕಳ್ಳಿ, ದೇವರಾಜ್ ಹಾಗೂ ಇತರರು ಹಾಜರಿದ್ದರು.

    ಗಮನ ಸೆಳೆದ ವಿದ್ಯಾರ್ಥಿನಿಯರು:
    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್ ಕಮಿಟಿ) ಭೇಟಿ ನೀಡಿದ್ದ ವೇಳೆ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನ ವಾಣಿಜ್ಯ ಹಾಗೂ ಭೂಗೋಳಶಾಸ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯ ಸಾಂಸ್ಕೃತಿಕ, ಆಡಳಿತಾತ್ಮಕ, ಪ್ರಾಕೃತಿಕ ಹಾಗೂ ಜಾನಪದ ಕಲೆಯನ್ನು ಬಿಂಬಿಸುವ ಮಾದರಿ ತಯಾರಿಸಿ ಗಮನ ಸೆಳೆದರು. ಜಿಲ್ಲಾಡಳಿತ ಭವನ, ಶ್ರೀಮಲೆಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಸುವರ್ಣಾವತಿ ಜಲಾಶಯ, ಕೆ.ಗುಡಿ ಹಾಗೂ ವಾಣಿಜ್ಯಶಾಸದ ಕುರಿತು ಅರಿವು ಮೂಡಿಸುವ ಮಾದರಿ ಎಲ್ಲರ ಗಮನಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts